Shocking Video: ದೂರದಲ್ಲಿ ಹಾವು ಕಾಣಿಸಿಕೊಂಡರೆ ಸಾಕು. ಯಾವುದೇ ಒಂದು ವ್ಯಕ್ತಿಯ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇನ್ನು ಕೆಲವರು ಹಾವಿನ ವಿಡಿಯೋವನ್ನೇ ನೋಡಿ ಬೆಚ್ಚಿಬೀಳುತ್ತಾರೆ. ಭೂಮಿಯ ಮೇಲೆ ಕಂಡುಬರುವ ಕೆಲ ಹಾವುಗಳು ಕಚ್ಚಿದರೆ ಸಾಕು, ಮನುಷ್ಯನಿಗೆ ನೀರು ಕೇಳಲು ಕೂಡ ಟೈಮ್ ಸಿಗುವುದಿಲ್ಲ. ಕೆಲ ಹಾವುಗಳ ವಿಷವು ಎಷ್ಟೊಂದು ಅಪಾಯಕಾರಿಯಾಗಿರುತ್ತದೆ ಎಂದರೆ, ಅದರ ಒಂದೇ ಒಂದು ಹನಿ ಕ್ಷಣಾರ್ಧದಲ್ಲಿ ವ್ಯಕ್ತಿಯ ಉಸಿರನ್ನೇ ನಿಲ್ಲಿಸಿಬಿಡುತ್ತದೆ. ಹಾವಿನ ವಿಷವು ಮಾನವ ದೇಹವನ್ನು ಪ್ರವೇಶಿಸಿದ ನಂತರ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ನಿಮ್ಮ ಎದೆ ಕೂಡ ಒಂದು ಕ್ಷಣ ಝಲ್ ಎನ್ನಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ

ಎದೆ ಝಲ್ಲೇನಿಸುವ ವಿಡಿಯೋ
ವೀಡಿಯೊ ನೋಡಿದ ನಂತರ, ಹಾವಿನ ವಿಷವು ದೇಹಕ್ಕೆ ಪ್ರವೇಶಿಸಿದ ನಂತರ ಏನಾಗುತ್ತದೆ ಎಂಬುದನ್ನು ನೋಡಿದರೆ, ನಿಮಗೂ ಕೂಡ ನಿಮ್ಮ ಕಣ್ಣುಗಳ ಮೇಲೆ ನಮ್ಬಿಕೆಯಾಗುವುದಿಲ್ಲ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಾವಿನ ವಿಷದ ಮೇಲೆ ಪ್ರಯೋಗ ನಡೆಸುತ್ತಿರುವುದನ್ನು ನೀವು ನೋಡಬಹುದು. ಆ ವ್ಯಕ್ತಿ ಮನುಷ್ಯನ ರಕ್ತದಲ್ಲಿ ಹಾವಿನ ವಿಷದ ಹನಿಯನ್ನು ಬೆರೆಸುತ್ತಾನೆ. ನಂತರ ಏನಾಗುತ್ತದೆ ಎಂಬುದು ಹೃದಯ ವಿದ್ರಾವಕವಾಗಿದೆ. @OTerrifying ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ವೀಡಿಯೊವನ್ನು  ಹಂಚಿಕೊಳ್ಳಲಾಗಿದೆ. ವೀಡಿಯೊ ತುಂಬಾ ಭಯಾನಕ ಮತ್ತು ಆಘಾತಕಾರಿಯಾಗಿದೆ, ವೀಡಿಯೊದಲ್ಲಿ, ಹಾವು ಕಚ್ಚಿದ ನಂತರ ಮನುಷ್ಯನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗಿದೆ. ಆಘಾತಕಾರಿ ವಿಡಿಯೋ ನೋಡಿ-


Video Viral : ಹೆಣ್ಣು ಹಾವಿಗಾಗಿ 5 ಗಂಟೆಗಳ ಕಾಲ ಕಾದಾಡಿದ ಗಂಡು ನಾಗರ ಹಾವುಗಳು!


ವೀಡಿಯೊದಲ್ಲಿ ಮೊದಲು ಹಾವು ಕಾಣಿಸಿಕೊಂಡಿದೆ. ವ್ಯಕ್ತಿಯು ಈ ಹಾವನ್ನು ಹಿಡಿದು ಅದರ ವಿಷವನ್ನು ಗಾಜಿನ ಜಾರ್‌ನಲ್ಲಿ ಹೊರತೆಗೆಯುತ್ತಾನೆ. ಇದರ ನಂತರ, ಅವರು ಆ ವಿಷವನ್ನು ಇಂಜೆಕ್ಷನ್ನಲ್ಲಿ ತುಂಬುತ್ತಾರೆ. ಚುಚ್ಚುಮದ್ದಿನಲ್ಲಿ ಹಾವಿನ ವಿಷವನ್ನು ತುಂಬಿದ ನಂತರ, ವ್ಯಕ್ತಿಯು ಮಾನವನ ರಕ್ತದಲ್ಲಿ ಒಂದು ಹನಿ ವಿಷವನ್ನು ಬೆರೆಸುತ್ತಾನೆ. ಮರುಕ್ಷಣ ಕಂಡುಬರುವ ದೃಶ್ಯ ದೃಶ್ಯ ನಡುಕ ಹುಟ್ಟಿಸುವಂತಿದೆ. ವಿಷವನ್ನು ಪಡೆಯುವ ಮೊದಲು ರಕ್ತವು ದ್ರವದಂತಿರುವುದನ್ನು ನೀವು ನೋಡಬಹುದು ಆದರೆ ಅದರಲ್ಲಿ ವಿಷವನ್ನು ಬೆರೆಸಿದ ತಕ್ಷಣ. ಹೆಪ್ಪುಗಟ್ಟಿದಂತೆ ಗಟ್ಟಿಯಾಗುತ್ತದೆ. ಹೀಗಾಗಿ ಮಾನವನ ರಕ್ತದಲ್ಲಿ ಹಾವಿನ ವಿಷ ಸೇರಿದ ನಂತರ ರಕ್ತ ಹೆಪ್ಪುಗಟ್ಟುತ್ತದೆ ಮತ್ತು ವ್ಯಕ್ತಿಯ ಸಾವು ಸಂಭವಿಸುತ್ತದೆ ಎಂಬುದನ್ನು ನೀವು ತಿಳಿಯಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.