Wheat Flour Benefits For Skin: ಚರ್ಮದ ಮೇಲೆ ಮ್ಯಾಜಿಕ್ನಂತೆ ಕಾರ್ಯನಿರ್ವಹಿಸುತ್ತೆ ಗೋಧಿ ಹಿಟ್ಟು
Wheat Flour Benefits For Skin: ಸನ್ ಬರ್ನ್, ಟ್ಯಾನಿಂಗ್, ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದಂತೆ ಕಾಣುವ ಸಮಸ್ಯೆಗಳನ್ನು ಗೋಧಿ ಹಿಟ್ಟಿನಿಂದ ನಿವಾರಿಸಬಹುದು.
Wheat Flour Benefits For Skin: ಗೋಧಿ ಹಿಟ್ಟಿನಿಂದ ರೋಟಿ ಅಂದರೆ ಚಪಾತಿ ತಯಾರಿಸಲಾಗುತ್ತದೆ. ಗೋಧಿ ಹಿಟ್ಟು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಗೋಧಿ ಹಿಟ್ಟು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?
ಗೋಧಿ ಹಿಟ್ಟಿನಿಂದ (Wheat Flour) ಅನೇಕ ರೀತಿಯ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಸನ್ ಬರ್ನ್, ಟ್ಯಾನಿಂಗ್,ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದಂತೆ ಕಾಣುವ ಸಮಸ್ಯೆಗಳನ್ನು ಗೋಧಿ ಹಿಟ್ಟಿನಿಂದ ನಿವಾರಿಸಬಹುದು. ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ-
ಇದನ್ನೂ ಓದಿ- Banana Peels Benefits- ಪಿಂಪಲ್ಸ್, ಡಾರ್ಕ್ ಸರ್ಕಲ್ ನಿವಾರಣೆಗೆ ರಾಮಬಾಣ ಬಾಳೆಹಣ್ಣಿನ ಸಿಪ್ಪೆ
ಗೋಧಿ ಹಿಟ್ಟು ಫೇಸ್ ಪ್ಯಾಕ್ ಮಾಡಲು ಬೇಕಾದ ಪದಾರ್ಥಗಳು (Ingredients to make Wheat Flour Face Pack):
- 2 ಟೀಸ್ಪೂನ್ ಗೋಧಿ ಹಿಟ್ಟು
- 1/2 ಟೀಸ್ಪೂನ್ ಅಲೋವೆರಾ ಜೆಲ್ (Aloevera Gel)
- 1 ಟೀಸ್ಪೂನ್ ಶ್ರೀಗಂಧದ ಪುಡಿ
- 1 ಟೀಸ್ಪೂನ್ ನಿಂಬೆ ರಸ ಅಥವಾ ಮೊಸರು
- 1 ಟೀಸ್ಪೂನ್ ಹಿಸುಕಿದ ಬಾಳೆಹಣ್ಣು
- ಗುಲಾಬಿ ನೀರು/ ರೋಸ್ ವಾಟರ್ (Rose Water)
ಗೋಧಿ ಹಿಟ್ಟು ಫೇಸ್ ಪ್ಯಾಕ್ ಮಾಡುವುದು ಹೇಗೆ? (How to make Wheat Flour Face Pack) :
ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್ (Face Pack) ಅನ್ನು ಮುಖಕ್ಕೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಡಿ. ತದನಂತರ ಮುಖವನ್ನು ತೊಳೆದು ಮೊದಲು ಟೋನರನ್ನು ಅನ್ವಯಿಸಿ.
ಇದನ್ನೂ ಓದಿ- Mango Hair Pack: ಕೂದಲ ಆರೈಕೆಗೆ ಬಳಸಿ ಮಾವಿನ ಹೇರ್ ಪ್ಯಾಕ್
ಎಣ್ಣೆಯುಕ್ತ ಚರ್ಮಕ್ಕಾಗಿ-
ಎಣ್ಣೆಯುಕ್ತ ಚರ್ಮಕ್ಕಾಗಿ ಗೋಧಿ ಹಿಟ್ಟಿನ ಈ ಫೇಸ್ ಪ್ಯಾಕ್‌ನಲ್ಲಿ 3 ಚಮಚ ಗೋಧಿ ಹಿಟ್ಟು, 2 ಚಮಚ ರೋಸ್ ವಾಟರ್, 2 ಪಿಂಚ್ ಅರಿಶಿನ, 1 ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಇದು ಮುಖದ ಜಿಗುಟುತನವನ್ನು ತೆಗೆದುಹಾಕುತ್ತದೆ. ಹೀಗೆ ಮಾಡುವುದರಿಂದ ಸನ್ ಬರ್ನ್, ಟ್ಯಾನಿಂಗ್ ಸೇರಿದಂತೆ ಚರ್ಮದ ಈ ಸಮಸ್ಯೆಗಳಿಂದ ದೂರವಿರಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.