ಬೆಂಗಳೂರು : How to Prevent White Hair : ತಲೆಯ ಮೇಲೆ ಮೊದಲ ಬಾರಿಗೆ ಬಿಳಿ ಕೂದಲು ಮೂಡಿದಾಗ ವ್ಯಕ್ತಿಯನ್ನು  ವಿಚಿತ್ರವಾದ ಆತಂಕ ಕಾಡುತ್ತದೆ.  ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾದಾಗ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದುದು ಅನುವಂಶಿಕ ಕಾರಣ. ಸಾಮಾನ್ಯವಾಗಿ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗೊಂದಲಮಯ ಜೀವನಶೈಲಿಯಿಂದಲೂ  ಈ ಸಮಸ್ಯೆ ಉಂಟಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸುಲಭ. ಆದರೆ ಇದಕ್ಕಾಗಿ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಬಿಳಿ ಕೂದಲಿನ ಸಮಸ್ಯೆ ಪರಿಹಾರಕ್ಕೆಈ ಕ್ರಮಗಳನ್ನು ಅನುಸರಿಸಿ :
1. ಆರೋಗ್ಯಕರ ಆಹಾರ : 
ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಬರಲು ಪ್ರಾರಂಭಿಸಿದರೆ, ನಿಮ್ಮ ದೈನಂದಿನ ಆಹಾರ ಆರೋಗ್ಯಕರವಾಗಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಇದಕ್ಕಾಗಿ, ಮೊದಲನೆಯದಾಗಿ, ಶುದ್ಧ, ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದನ್ನು ಪ್ರಾರಂಭಿಸಿ. ಊಟದಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ ಗಳು  ಮತ್ತು ಕೊಬ್ಬು ಉತ್ತಮ ಪ್ರಮಾಣದಲ್ಲಿವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.  ಗ್ರೀನ್ ಟೀ,  ಆಲಿವ್ ಎಣ್ಣೆ, ಮೀನು, ಕಿತ್ತಳೆ ಮುಂತಾದ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಈ ಸರಳ ಕ್ರಮಗಳ ಮೂಲಕ ಕೂದಲು ಬಿಳಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. 


ಇದನ್ನೂ ಓದಿ : ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಲ್ಲವಾದರೆ ಎದುರಾಗುವುದು ಈ ಸಮಸ್ಯೆಗಳು. !


2.ಧೂಮಪಾನದಿಂದ ದೂರವಿರಿ :  
ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ  ಎಲ್ಲರಿಗೂ ಗೊತ್ತೇ ಇದೆ. ಇದು ನಮ್ಮ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುವುದು ಮಾತ್ರವಲ್ಲ, ಕೂದಲಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಆದ್ದರಿಂದ, ಬಿಳಿ ಕೂದಲಿನ ಸಮಸ್ಯೆ ಉಲ್ಬಣವಾಗದಂತೆ ತಡೆಯಲು ಬೀಡಿ ಸಿಗರೇಟಿನಿಂದ ದೂರ ಉಳಿಯಬೇಕು. 


3. ಕೂದಲು ಡ್ಯಾಮೇಜ್ ಆಗದಂತೆ ನೋಡಿಕೊಳ್ಳಿ : 
ಮುಖ್ಯವಾಗಿ ಪರಿಸರದಲ್ಲಿನ ಮಾಲಿನ್ಯಕಾರಕಗಳಿಂದ ಕೂದಲಿನ ಆರೋಗ್ಯ ಯ ಕೆಡುತ್ತದೆ. ಆದರೆ ಅದನ್ನು ತಪ್ಪಿಸಲು, ರಾಸಾಯನಿಕ ಮತ್ತು ಶಾಖದ ಪ್ರಭಾವದಿಂದ ದೂರವಿರಬೇಕು. ವಿಶೇಷವಾಗಿ ಸೂರ್ಯನ ಪ್ರಖರ ಬೆಳಕು ಕೂದಲಿನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ರಾಸಾಯನಿಕ ಆಧಾರಿತ ಉತ್ಪನ್ನಗಳು ಕೂಡಾ ಕೂದಲಿನ ಹಾನಿಗೆ ಕಾರಣವಾಗಿವೆ. 


ಇದನ್ನೂ ಓದಿ : ಲಿವರ್ ಆರೋಗ್ಯಕ್ಕಾಗಿ ಸೇವಿಸಿ ಈ ಆಹಾರ.! ಉದರದ ಸಮಸ್ಯೆಗಳಿಗೆ ಸಿಗುವುದು ಪರಿಹಾರ


4. ಟೆನ್ಶನ್  ಬೇಡ : 
ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಬಾರದು ಎನ್ನುವುದು ನಿಮ್ಮ ಬಯಕೆಯಾದರೆ, ಜೀವನದಿಂದ ಟೆನ್ಷನ್ ಅನ್ನು ದೂರ ಮಾಡಬೇಕು. ಕೂದಲು ಬೆಳ್ಳಗಾಗಲು ಒತ್ತಡವೇ ದೊಡ್ಡ ಕಾರಣ.  ಖಿನ್ನತೆಯು ಇತರ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.