Food To Eat In Morning : ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇಂದು ಅನೇಕ ರೋಗಗಳು ಯುವ ಪೀಳಿಗೆಯನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಆಹಾರ ಪದ್ದತಿಯನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ಆರೋಗ್ಯಕರ ಉಪಹಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕೆಲವರು ಅನಾರೋಗ್ಯಕರ ಆಹಾರವನ್ನೂ ಸೇವಿಸುತ್ತಿದ್ದಾರೆ. ಇನ್ನು ಕೆಲವರು ಬೆಳಗ್ಗೆ ಡ್ರೈ ಫ್ರೂಟ್ಸ್‌ಗಳನ್ನು ತಿನ್ನುತ್ತಿದ್ದಾರೆ. ಆದರೆ ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಯಾವ ರೀತಿಯ ಆಹಾರಗಳನ್ನು ತಿಂದರೆ ದೇಹಕ್ಕೆ ಒಳ್ಳೆಯದು...? ಟಿಫಿನ್ ಯಾವಾಗ ತೆಗೆದುಕೊಳ್ಳಬೇಕು ಎಂದು ನಿಮಗೆ ತಿಳಿದಿಲ್ಲವಾದರೆ.. ಮುಂದೆ ಓದಿ.


COMMERCIAL BREAK
SCROLL TO CONTINUE READING

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನು ಕುಡಿಯಬೇಕು ಗೊತ್ತಾ? : ಇಂದಿನ ದಿನಗಳಲ್ಲಿ ಹಲವರು ಎದ್ದ ತಕ್ಷಣ ಬೆಡ್‌ ಕಾಫಿ ಕುಡಿಯುತ್ತಾರೆ. ಈ ರೀತಿ ಕಾಫಿ ಕುಡಿಯುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪ್ರತಿದಿನ ನೀರು ಕುಡಿಯುವುದರಿಂದ ಹೊಟ್ಟೆ ಸ್ವಚ್ಛವಾಗುತ್ತದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.


ಇದನ್ನೂ ಓದಿ: ಈ ಹಣ್ಣುಗಳು ಆರೋಗ್ಯ ಸಿರಿಯಾಗಿದ್ದರೂ ಮಧುಮೇಹಿಗಳು ಮಾತ್ರ ಮುಟ್ಟಿಯೂ ನೋಡುವಂತಿಲ್ಲ


ಬೆಳಗ್ಗೆ ಏನು ತಿನ್ನಬೇಕು? : ಬೆಳಗ್ಗೆ ಏನು ತಿನ್ನಬೇಕು ಎಂಬ ಗೊಂದಲ ಹಲವರಿಗೆ ಇರುತ್ತದೆ. ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ 20 ನಿಮಿಷಗಳಲ್ಲಿ ಬಾಳೆಹಣ್ಣು, ಬಾದಾಮಿ ಅಥವಾ ಒಣದ್ರಾಕ್ಷಿ ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಇದಲ್ಲದೆ, ಹೊಟ್ಟೆಯ ಸಮಸ್ಯೆಗಳನ್ನು ಸಹ ಸುಲಭವಾಗಿ ತೆಗೆದುಹಾಕಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 


ಬಾಳೆಹಣ್ಣು ಯಾರು ತಿನ್ನಬೇಕು? : ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಇದಲ್ಲದೆ, ಋತುಮಾನದ ಕಾಯಿಲೆಗಳನ್ನು ಸಹ ಸುಲಭವಾಗಿ ತೆಗೆದುಹಾಕಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 


ಇದನ್ನೂ ಓದಿ: ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ವಸ್ತುವನ್ನು ಸೇವಿಸಿದರೆ ಸಿಗುವುದು ಅದ್ಭುತ ಪ್ರಯೋಜನ


ಬಾದಾಮಿಯನ್ನು ಸೇವಿಸಬೇಕು: ಇನ್ಸುಲಿನ್ ಪ್ರತಿರೋಧ, ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿರುವವರು ಎದ್ದ ತಕ್ಷಣ ಬಾದಾಮಿಯನ್ನು ತಿನ್ನಬೇಕು. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ