White Hair Solution : ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಬಳಸಿ ತುಳಸಿ ಮತ್ತು ನೆಲ್ಲಿಕಾಯಿ!
ತುಳಸಿಯಲ್ಲಿ ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಹಾಗಾದರೆ ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸಬೇಕು? ಇಲ್ಲಿದೆ ನೋಡಿ..
ನವದೆಹಲಿ : ಕೂದಲು ಕಪ್ಪಾಗಲು ಇತ್ತೀಚಿನ ದಿನಗಳಲ್ಲಿ ಮರುಕಟ್ಟೆಗಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿದೆ, ಆದರೆ ಜನ ನೈಸರ್ಗಿಕ ವಿಧಾನಗಳಲ್ಲಿ ಕೂದಲನ್ನು ಕಪ್ಪಾಗಿಸಲು ಬಯಸುತ್ತಾರೆ. ಹಾಗಾಗಿ ಅಂತಹವರಿಗಾಗಿ ನಾವು ಇಂದು ತುಳಸಿ ಮತ್ತು ನೆಲ್ಲಿಕಾಯಿ ನೈಸರ್ಗಿಕ ಉಪಾಯವನ್ನು ತಂದಿದ್ದೇವೆ. ಇವೆರಡನ್ನೂ ಈ ರೀತಿ ಬಳಸುವುದರಿಂದ ನೈಸರ್ಗಿಕವಾಗಿ ಈ ರೀತಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ತುಳಸಿಯಲ್ಲಿ ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಹಾಗಾದರೆ ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸಬೇಕು? ಇಲ್ಲಿದೆ ನೋಡಿ..
ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸುವುದು?
ಮಾಧ್ಯಮ ವರದಿಗಳ ಪ್ರಕಾರ, ತುಳಸಿ ಮತ್ತು ನೆಲ್ಲಿಕಾಯಿ(Tulsi patta and Myrobalan) ಕೂಡ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ತುಂಬಾ ಸಹಾಯಕವಾಗಿದೆ. ತುಳಸಿಯನ್ನು ಪುಡಿಮಾಡಿ ನೆಲ್ಲಿಕಾಯಿ ಪುಡಿಯೊಂದಿಗೆ ಬೆರೆಸಿ ಸ್ವಲ್ಪ ನೀರಿನಲ್ಲಿ ನೆನೆಸಿದ ನಂತರ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಸ್ನಾನ ಮಾಡುವಾಗ ಇದರಿಂದ ನಿಮ್ಮ ತಲೆ ತೊಳೆಯಿರಿ. ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಡಲು, ಕೆಲವು ತಿಂಗಳುಗಳ ಕಾಲ ಈ ಪಾಕವಿಧಾನವನ್ನು ಬಳಸುವುದು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Diabetes ರೋಗಿಗಳು ಕಾಫಿ ಸೇವಿಸಬಹುದೇ? ಇಲ್ಲಿವೆ ಲಾಭ-ನಷ್ಟಗಳು
ನೆಲ್ಲಿಕಾಯಿ ಮತ್ತು ತುಳಸಿ ಪೇಸ್ಟ್ ಅನ್ನು ಈ ರೀತಿ ಮಾಡಿ
ನಿಮ್ಮ ಕೂದಲು ಬೆಳ್ಳಗಾಗಲು(White Hair) ಪ್ರಾರಂಭಿಸಿದ್ದರೆ ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಪುಡಿಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದರ ನಂತರ, ಈ ಪೇಸ್ಟ್ ಅನ್ನು ಒಂದು ಕಪ್ ನೀರಿನಲ್ಲಿ ಕರಗಿಸಿ ಕೂದಲಿನ ಬೇರುಗಳಿಗೆ ಅನ್ವಯಿಸಿ ಮತ್ತು ಒಣಗಿದ ನಂತರ ತಾಜಾ ನೀರಿನಿಂದ ಕೂದಲನ್ನು ತೊಳೆಯಿರಿ. ಶೀಘ್ರದಲ್ಲೇ ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
ಹೊಳಪನ್ನು ತರಲು ನೆಲ್ಲಿಕಾಯಿ ಬಳಕೆ
ಕೂದಲಿಗೆ ಹೊಳಪನ್ನು(Shine Hair) ತರಲು ನೀವು ನೆಲ್ಲಿಕಾಯಿ ಬಳಸಬಹುದು. ಕೂದಲಿಗೆ ಹೊಳಪನ್ನು ತರಲು ನೆಲ್ಲಿಕಾಯಿ ಜ್ಯೂಸ್‌ನಿಂದ ಚೆನ್ನಾಗಿ ಮಸಾಜ್ ಮಾಡಿ. ಇದರ ನಂತರ ಒಂದು ಗಂಟೆಯ ನಂತರ ತಾಜಾ ನೀರಿನಿಂದ ಕೂದಲನ್ನು ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ತರುತ್ತದೆ.
ಇದನ್ನೂ ಓದಿ : Health Tips: ನೀವೂ ಸಹ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುತ್ತೀರಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.