ಈ ಸಮಸ್ಯೆ ಇರುವವರು ಮಧ್ಯಾಹ್ನದ ಹೊತ್ತು ನಿದ್ದೆ ಮಾಡಬಾರದು, ಆರೋಗ್ಯದ ಮೇಲೆ ಬೀರಲಿದೆ ಪರಿಣಾಮ

ಹಗಲು ಹೊತ್ತಿನಲ್ಲಿ ತುಸು ಹೊತ್ತು  ನಿದ್ದೆ ಮಾಡಿದರೆ ಮನಸ್ಸು ಉಲ್ಲಾಸದಾಯಕವಾಗುತ್ತದೆ. ಆದರೆ ಹಾಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.   

Written by - Ranjitha R K | Last Updated : Mar 5, 2022, 03:13 PM IST
  • ಹಗಲಿನಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?
  • ದೇಹ ಆಲಸ್ಯಕ್ಕೆ ಗುರಿಯಾಗಬಹುದು
  • ಒಂದು ದಿನದಲ್ಲಿ ಎಷ್ಟು ಹೊತ್ತು ಮಲಗಬೇಕು?
ಈ ಸಮಸ್ಯೆ ಇರುವವರು ಮಧ್ಯಾಹ್ನದ ಹೊತ್ತು ನಿದ್ದೆ ಮಾಡಬಾರದು,  ಆರೋಗ್ಯದ ಮೇಲೆ ಬೀರಲಿದೆ ಪರಿಣಾಮ  title=
ದೇಹ ಆಲಸ್ಯಕ್ಕೆ ಗುರಿಯಾಗಬಹುದು (file photo)

ನವದೆಹಲಿ : ಸಾಮಾನ್ಯವಾಗಿ ಕೆಲಸದಿಂದ ದಣಿದಿರುವಾಗ, ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆಯುವುದನ್ನು ಹೆಚ್ಚಿನವರು  ಇಷ್ಟಪಡುತ್ತಾರೆ. ಹೀಗೆ ಮಾಡಿದಾಗ ಆಯಾಸ ಸುಸ್ತು ಕಡಿಮೆಯಾಗುತ್ತದೆ ಎನ್ನುವ ಉದ್ದೇಶದಿಂದ ಮಧ್ಯಾಹ್ನದ ವೇಳೆ ತುಸು ಹೊತ್ತು ಮಲಗುವವರು ಇದ್ದಾರೆ. ಹಗಲಿನ ನಿದ್ರೆ ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ  ಇದು  ಕೆಲವು ಅನಾನುಕೂಲತೆಗಳನ್ನು ಸಹ ಹೊಂದಿದೆ (afternoon sleep disadvantages). 

ಆರೋಗ್ಯದ ಮೇಲೆ ದಿನದ ನಿದ್ರೆಯ ಪರಿಣಾಮ :
ಹಗಲಿನ ನಿದ್ರೆಯು ನಿಮಗೆ ಆಯಾಸ ಮತ್ತು ಆಲಸ್ಯದಿಂದ ಪರಿಹಾರವನ್ನು ನೀಡುತ್ತದೆ. ಆದರೆ  ಇದು ರಾತ್ರಿಯ ನೈಸರ್ಗಿಕ ನಿದ್ರೆಯ ಮೇಲೆ ಪರಿಣಾಮ ಬೀರಬಹುದು (afternoon sleep disadvantages). ಹಗಲು ಹೊತ್ತು ಮಲಗಿದವರಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುವುದಿಲ್ಲ.  

ಇದನ್ನೂ ಓದಿ : Jeera Water: ಜೀರಿಗೆ ನೀರು ಕ್ಯಾನ್ಸರ್ ನಿಂದ ರಕ್ಷಿಸುವಲ್ಲಿ ಪರಿಣಾಮಕಾರಿ

ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದದ ಪ್ರಕಾರ (Ayurveda) ಹಗಲು ನಿದ್ದೆ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಕಫ ಮತ್ತು ಪಿತ್ತ ದೋಷಗಳು ಕಾಡುತ್ತವೆ. ಆದರೆ ಆರೋಗ್ಯಕರ ಜನರು ಬೇಸಿಗೆಯಲ್ಲಿ (Summer)ಹಗಲು ಹೊತ್ತು ನಿದ್ದೆ ಮಾಡಬಹುದು ಎನ್ನಲಾಗಿದೆ.  

ಯಾರು ಹಗಲಿನಲ್ಲಿ ಮಲಗಬಾರದು ?
ಮಧುಮೇಹ (Diabetes) ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರು, ಹಗಲಿನಲ್ಲಿ ನಿದ್ರೆ ಮಾಡಬಾರದು.  ಏಕೆಂದರೆ ಇದರಿಂದ ತೂಕ ಹೆಚ್ಚಾಗುತ್ತದೆ (Weight gain). ಜ್ವರ, ಜ್ಞಾಪಕ ಶಕ್ತಿಯ ನಷ್ಟ,   ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಕಾರಣವಾಗಬಹುದು.

ಇದನ್ನೂ ಓದಿ : Cholesterol: ಕೊಲೆಸ್ಟ್ರಾಲ್ ಹೆಚ್ಚಾಗುವಿಕೆ ಅಪಾಯದ ಗಂಟೆ! ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ

ಒಂದು ದಿನದಲ್ಲಿ ಎಷ್ಟು ಹೊತ್ತು ಮಲಗಬೇಕು?
ಮಧ್ಯಾಹ್ನ ಸುಮಾರು 15 ರಿಂದ 20 ನಿಮಿಷಗಳ ನಿದ್ದೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಈ ದಿನಚರಿಯನ್ನು ಅನುಸರಿಸಲು, ಅಲಾರಾಂ ಹೊಂದಿಸಿ ಮತ್ತು ನಿದ್ರಿಸುವಾಗ ಒತ್ತಡದಿಂದ ಮುಕ್ತರಾಗಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News