Beetroot Effects: ಈ ಸಮಸ್ಯೆ ಇರುವವರಿಗೆ ಹಾನಿಕಾರಕ ಬೀಟ್ರೂಟ್
Side Effects Of Beetroot: ಬೀಟ್ರೂಟ್ ಅನ್ನು ಸಾಮಾನ್ಯವಾಗಿ ಬಹುತೇಕ ಜನರು ಇಷ್ಟಪಡುವುದಿಲ್ಲ. ಬೀಟ್ರೂಟ್ ರಸವನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಜನರಿಗೆ ಈ ಸೂಪರ್ಫುಡ್ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
Who Should Not Eat Beetroot: ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಇದರಲ್ಲಿ ಅನೇಕ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವ. ಬೀಟ್ರೂಟ್ನಲ್ಲಿ ವಿಟಮಿನ್ ಸಿ, ಫೋಲೇಟ್, ಪ್ರೋಟೀನ್ ಮತ್ತು ಫೈಬರ್ ಕಂಡುಬರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಹಾಗಾಗಿಯೇ ಹೆಚ್ಚಿನ ಆರೋಗ್ಯ ತಜ್ಞರು ನಮ್ಮ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ನೆಲದಲ್ಲಿ ಬೆಳೆಯುವ ಈ ತರಕಾರಿಯನ್ನು ತೊಳೆದು ನೇರವಾಗಿ ತಿನ್ನಬಹುದು. ಇಲ್ಲವೇ ಆರದ ಜ್ಯೂಸ್ ತಯಾರಿಸಿಯೂ ಕುಡಿಯಬಹುದು. ಬೇಕೆಂದರೆ ಇದನ್ನು ಬೇಯಿಸಿ ಪಲ್ಯದ ರೂಪದಲ್ಲಿಯೂ ಸೇವಿಸಾಹುದು. ಬೀಟ್ರೂಟ್ ಸೇವನೆಯಿಂದ ಹಲವು ಪ್ರಯೋಜನಗಳಿವೆ ಎಂಬುದರಲ್ಲಿ ಅನುಮಾನವಿಲ್ಲ. ಆದಾಗ್ಯೂ, ಬೀಟ್ರೂಟ್ ಕೆಲವರಿಗೆ ಹಾನಿಕಾರಕವೆಂದು ಸಾಬೀತು ಪಡಿಸಬಹುದು ಎಂದು ಹೇಳಲಾಗುತ್ತದೆ.
ಇಂತಹ ಸಮಸ್ಯೆ ಇರುವವರು ಬೀಟ್‌ರೂಟ್ ತಿನ್ನಬಾರದು:-
ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್, ನಿಮಗೆ ಕೆಲವು ವಿಶೇಷ ದೈಹಿಕ ಸಮಸ್ಯೆಗಳಿದ್ದರೆ ಬೀಟ್‌ರೂಟ್ ಸೇವನೆಯನ್ನು ತಪ್ಪಿಸಿ ಎಂದು ಸಲಹೆ ನೀಡುತ್ತಾರೆ.
ಇದನ್ನೂ ಓದಿ- ಮುಂಜಾನೆ ತಲೆನೋವಿಗೆ ಮನೆಮದ್ದು
1. ಕಬ್ಬಿಣಾಂಶ ಅಧಿಕವಾಗಿರುವವರು:
ದೇಹದಲ್ಲಿ ಕಬ್ಬಿಣದ ಅಂಶ ಅತಿಯಾಗಿದ್ದರೆ ಅಂತಹ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹಿಮೋಕ್ರೊಮಾಟೋಸಿಸ್ ಅಥವಾ ಕಬ್ಬಿಣದ ಓವರ್ಲೋಡ್ ಎಂದು ಕರೆಯಲಾಗುತ್ತದೆ. ಅಂತಹವರು ಬೀಟ್ರೂಟ್ ಅನ್ನು ತಿನ್ನಬಾರದು. ಏಕೆಂದರೆ ಅದು ದೇಹದಲ್ಲಿ ಕಬ್ಬಿಣದ ಅಂಶವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಇದು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
2. ಕಿಡ್ನಿ ಸ್ಟೋನ್:
ಕಿಡ್ನಿ ಸ್ಟೋನ್ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಾಸ್ತವವಾಗಿ, ಈ ಸಮಸ್ಯೆಯು ಎರಡು ರೀತಿಯಲ್ಲಿ ಕಂಡು ಬರುತ್ತದೆ. ಮೊದಲನೆಯದು ಕ್ಯಾಲ್ಸಿಯಂ ಆಧಾರಿತ ಮತ್ತು ಎರಡನೇಯದು ಆಕ್ಸಲೇಟ್ ಆಧಾರಿತವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಆಕ್ಸಲೇಟ್ ಆಧಾರಿತ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೊಂದಿದ್ದರೆ ಅವರು ಬೀಟ್‌ರೂಟ್‌ನಿಂದ ದೂರವಿರಬೇಕು.
ಇದನ್ನೂ ಓದಿ- Green Tea In Diabetes: ಮಧುಮೇಹಿಗಳು ಗ್ರೀನ್ ಟೀ ಕುಡಿಯಬಹುದೇ? ಸಂಶೋಧನೆ ಏನು ಹೇಳುತ್ತೆ?
3. ಮೂತ್ರದ ಬಣ್ಣದಲ್ಲಿ ಬದಲಾವಣೆ:
ಕೆಲವರು ಬೀಟ್ರೂಟ್ ತಿನ್ನಲು ಅಥವಾ ಅದರ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ನೀವು ಇದನ್ನು ಹೆಚ್ಚು ಸೇವಿಸಿದರೆ, ಖಂಡಿತವಾಗಿಯೂ ನಿಮ್ಮ ಮೂತ್ರದ ಬಣ್ಣವು ಬದಲಾಗುತ್ತದೆ ಮತ್ತು ಅದು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇವುಗಳು ದೇಹದಲ್ಲಿ ಅಡಚಣೆಗಳ ಚಿಹ್ನೆಗಳಾಗಿರಬಹುದು. ಇಂತಹ ಸಂದರ್ಭದಲ್ಲಿ ಬೀಟ್ರೂಟ್ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.