ಬರೋಬ್ಬರಿ 41 ವರ್ಷಗಳಿಂದ ಒಂದೇ ಒಂದು ಕಾಳು ಅನ್ನ ತಿನ್ನದೆ, ಈ ಜ್ಯೂಸ್ ಕುಡಿದು ಬದುಕಿದಳು!
ವಿಯೆಟ್ನಾಂನಲ್ಲಿ ವಾಸಿಸುವ ಈ ಮಹಿಳೆ ತಾನು ಕೇವಲ 22 ನೇ ವಯಸ್ಸಿನಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾಳೆ. ಅಂದರೆ, ಮಹಿಳೆ ಘನ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು.
ನಿಮ್ಮ ಸುತ್ತಮುತ್ತಲೂ ಇಂತಹ ಹಲವಾರು ಪ್ರಯೋಗಗಳನ್ನು ಮಾಡುವುದನ್ನು ನೀವು ನೋಡಿರಬೇಕು. ಈ ಪ್ರಯೋಗಗಳಲ್ಲಿ ಕೆಲವು ವಿಚಿತ್ರವಾಗಿರಬಹುದು. ನಿಮ್ಮ ತಿಳುವಳಿಕೆಯನ್ನು ಮೀರಿರಲೂಬಹುದು. ಈ ಮಹಿಳೆಯ ಜೀವನಶೈಲಿ ಕೂಡ ಇದೇ ಆಗಿದೆ. ಇವರ ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಂಡರೆ, ಇಲ್ಲಿಯವರೆಗೆ ಹೇಗೆ ಈಕೆ ಜೀವಂತವಾಗಿದ್ದರು ಎಂದು ನೀವು ಆಶ್ಚರ್ಯ ಪಡುತ್ತೀರಿ. ಈ ಮಹಿಳೆಯ ಜೀವನ ಪ್ರಯಾಣವು ಇತರ ಜನರ ಪ್ರಯಾಣಕ್ಕಿಂತ ವಿಭಿನ್ನವಾಗಿದೆ.
ಇದನ್ನೂ ಓದಿ: Health Tips : ಚಳಿಗಾಲದಲ್ಲಿ ಬೆಲ್ಲದ ಹಾಲು ಯಾಕೆ ಕುಡಿಯಬೇಕು ಗೊತ್ತಾ?
ವಿಯೆಟ್ನಾಂನಲ್ಲಿ ವಾಸಿಸುವ ಈ ಮಹಿಳೆ ತಾನು ಕೇವಲ 22 ನೇ ವಯಸ್ಸಿನಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾಳೆ. ಅಂದರೆ, ಮಹಿಳೆ ಘನ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. 41 ವರ್ಷಗಳಿಂದ ಮಹಿಳೆ ಆಹಾರ ಸೇವಿಸದೆ ಹೇಗೆ ಬದುಕುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಬೇಸಿಗೆಯಲ್ಲಿ ಉಪಶಮನ ನೀಡುವ ನಿಂಬೆ ಪಾನಕ ಈ ಮಹಿಳೆಯ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ಹೊಂದಿದೆ. ಮಹಿಳೆ ಕಳೆದ 41 ವರ್ಷಗಳಿಂದ ನಿಂಬೆ ಪಾನಕವನ್ನು ಕುಡಿದು ಬದುಕಿದ್ದಾಳೆ. ಅಚ್ಚರಿಯ ವಿಷಯವೆಂದರೆ ಇಂತಹ ಜೀವನಶೈಲಿ ಮಹಿಳೆಯ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲಿಲ್ಲ. ನೀರಿಗೆ ಉಪ್ಪು, ಸಕ್ಕರೆ ಮತ್ತು ನಿಂಬೆ ರಸವನ್ನು ಹಾಕಿ ಕುಡಿಯುತ್ತೇನೆ. ಇದು ನನ್ನ ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ ಎಂದು ಹೇಳಿಕೊಳ್ಳುತ್ತಾಳೆ. ವೈದ್ಯರ ಸಲಹೆ ಮೇರೆಗೆ ಮಹಿಳೆ ಈ ವಿಧಾನವನ್ನು ಅಳವಡಿಸಿಕೊಂಡಿದ್ದರು.
ಇದನ್ನೂ ಓದಿ: Food For Men : ಪುರುಷರೆ ನಿಮ್ಮ ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು!
ಅನೇಕ ಆರೋಗ್ಯ ಪ್ರಯೋಜನಗಳು:
63 ವರ್ಷದ ಈ ಮಹಿಳೆ ತನ್ನ ವಯಸ್ಸಿಗಿಂತ ಚಿಕ್ಕವಳಂತೆ ಕಾಣಿಸುತ್ತಾಳೆ. ಅಷ್ಟೇ ಅಲ್ಲ ಮಹಿಳೆಗೆ ಯೋಗ ಮಾಡುವ ಸಾಮರ್ಥ್ಯವೂ ಇದೆ. 21 ನೇ ವಯಸ್ಸಿನಲ್ಲಿ, ಮಹಿಳೆ ರಕ್ತದ ಕಾಯಿಲೆಯ ಹಿಡಿತದಲ್ಲಿದ್ದಳು. ಅಂದಿನಿಂದ, ಘನ ಆಹಾರವನ್ನು ತ್ಯಜಿಸಲು ಪ್ರಾರಂಭಿಸಿದಳು. ಈ ವಿಧಾನವು ವೈಜ್ಞಾನಿಕವಲ್ಲದಿದ್ದರೂ, ಮಹಿಳೆ ತನ್ನ ಹೆಸರನ್ನು ಪ್ರಪಂಚದ ಮುಂದೆ ಬಹಿರಂಗಪಡಿಸಲು ಬಯಸುತ್ತಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.