Jaggery Milk Benefits : ಬೆಲ್ಲದ ಹಾಲಿನ ಪ್ರಯೋಜನಗಳು ಅನೇಕ. ಚಳಿಗಾಲವು ಮಕ್ಕಳನ್ನು ಮತ್ತು ವಿಶೇಷವಾಗಿ ವೃದ್ಧರನ್ನು ಬಹಳಷ್ಟು ತೊಂದರೆಗೆ ಉಂಟು ಮಾಡುತ್ತದೆ. ಅನೇಕ ಬಾರಿ ಜನರು ಈ ಋತುವಿನಲ್ಲಿ ಬಿಸಿ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳಿವೆ, ಇದು ವ್ಯಕ್ತಿಯ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ನೀವು ಅದಕ್ಕೆ ನೀವು ಕೊಂಚ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಅದರ ಪ್ರಯೋಜನಗಳು ಹೆಚ್ಚಾಗುತ್ತದೆ.
ಇದನ್ನೂ ಓದಿ : Home Remedies: ಬೆಳ್ಳುಳ್ಳಿ ಜೊತೆ ಈ ಆಹಾರ ಸೇವಿಸಿದ್ರೆ ಪುರುಷರಿಗೆ ಸಿಗುತ್ತೆ ಅದ್ಭುತ ಲಾಭ!
ಅಂತಹ ಪರಿಸ್ಥಿತಿಯಲ್ಲಿ, ಹಾಲಿನಲ್ಲಿ ಬೆಲ್ಲವನ್ನು ಹಾಕಿ ಕುಡಿಯುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಚಳಿಗಾಲದಲ್ಲಿ ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ. ಹಾಲಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ ಮತ್ತು ಡಿ ಜೊತೆಗೆ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಮ್ಲಗಳು ಕಂಡುಬರುತ್ತವೆ. ಬೆಲ್ಲದಲ್ಲಿ ಸುಕ್ರೋಸ್, ಗ್ಲೂಕೋಸ್, ಕಬ್ಬಿಣ ಮತ್ತು ಅನೇಕ ಖನಿಜಗಳು ಕಂಡುಬರುತ್ತವೆ.
ಬೊಜ್ಜು ಹೆಚ್ಚಿದರೆ ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವ ಬದಲು, ಹಾಲಿಗೆ ಬೆಲ್ಲ ಬೆರೆಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯಕವಾಗಿದೆ. ಮೂಳೆಗಳನ್ನು ಬಲಗೊಳಿಸಲು ಬೆಲ್ಲದಲ್ಲಿ ಬಹಳಷ್ಟು ಕ್ಯಾಲ್ಸಿಯಂ ಮತ್ತು ರಂಜಕ ಕಂಡುಬರುತ್ತದೆ. ಈ ಕಾರಣಕ್ಕಾಗಿ ಬೆಲ್ಲದ ಟೀ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ : Diabetes : ಮಧುಮೇಹಿಗಳು ಯಾವ ಅಕ್ಕಿಯನ್ನು ಸೇವಿಸಬೇಕು? ತಜ್ಞರು ಉತ್ತರ ಇಲ್ಲಿದೆ
ಬಿಸಿ ಹಾಲು ಮತ್ತು ಬೆಲ್ಲವನ್ನು ಬೆರೆಸಿ ಕುಡಿದರೆ ಹೊಟ್ಟೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿಮ್ಮ ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ. ಇಷ್ಟೇ ಅಲ್ಲ, ಮಹಿಳೆಯರು ಬೆಚ್ಚನೆಯ ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಋತುಬಂಧದ ನೋವಿನಿಂದ ಪರಿಹಾರ ಸಿಗುತ್ತದೆ.
(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.