World Kidney Day: ದೇಶದ ಸುಮಾರು 17% ಜನರಲ್ಲಿ ಮೂತ್ರಪಿಂಡ ಸಮಸ್ಯೆ, ಕಿಡ್ನಿ ಆರೋಗ್ಯಕ್ಕೆ ಸರಳ ಸಲಹೆಗಳಿವು
World Kidney Day: ಇಂದು ವಿಶ್ವ ಕಿಡ್ನಿ ದಿನವನ್ನು ಅಚ್ಚರಿಸಲಾಗುತ್ತಿದೆ. ನಮ್ಮ ದೇಹದ ತ್ಯಾಜ್ಯವನ್ನು ಫಿಲ್ಟರ್ ಮಾಡಿ ನಮ್ಮನ್ನು ಆರೋಗ್ಯವಾಗಿರಿಸುವ ಮೂತ್ರಪಿಂಡಗಳನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ. ಅಧ್ಯಯನವೊಂದರ ಪ್ರಕಾರ, ದೇಶದ ಸುಮಾರು 17 ಪ್ರತಿಶತದಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ.
World Kidney Day: ದೇಹದ ತ್ಯಾಜ್ಯವನ್ನು ಫಿಲ್ಟರ್ ಮಾಡಿ ನಮ್ಮನ್ನು ಆರೋಗ್ಯವಾಗಿರಿಸುವ ಮೂತ್ರಪಿಂಡಗಳು ಎಂದರೆ ಕಿಡ್ನಿಗಳು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ಅಂಗ. ಕಿಡ್ನಿ ಸಂಬಂಧಿತ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 14 ಅನ್ನು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚೆಗೆ "ಕಿಡ್ನಿ ಕಾಯಿಲೆಯ ಅಧ್ಯಯನದ ಸ್ಕ್ರೀನಿಂಗ್ ಮತ್ತು ಮೌಲ್ಯಮಾಪನ" ಕುರಿತಂತ ವರಡಿಯೊಂದು ಬಿಡುಗಡೆಯಾಗಿದ್ದು ಇದರಲ್ಲಿ ದೇಶದ ಒಟ್ಟು ಜನಸಂಖ್ಯೆಯ ಸುಮಾರು 17%ನಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಿಡ್ನಿ ಕಾಯಿಲೆಯ ಅಧ್ಯಯನದ ಸ್ಕ್ರೀನಿಂಗ್ ಮತ್ತು ಮೌಲ್ಯಮಾಪನ ಎಂಬ ಅಧ್ಯಯನದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 6120 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಕಿಡ್ನಿ ದಿನಾಚರಣೆಯ (World Kidney Day) ಈ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಕಿಡ್ನಿ ಏಕೆ ಅಗತ್ಯ? ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಎಂದರೇನು? ಈ ಕುರಿತ ವರದಿ ಏನು ಹೇಳುತ್ತದೆ. ಮೂತ್ರಪಿಂಡ ಹಾನಿಗೊಳಗಾಗುತ್ತಿದೆ ಎಂಬುದನ್ನು ಗುರುತಿಸುವುದು ಹೇಗೆ ಮತ್ತು ಮತ್ತು ನಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಲು ನಮ್ಮ ದಿನಚರಿ ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಯೋಣ...
ನಮ್ಮ ದೇಹಕ್ಕೆ ಕಿಡ್ನಿ ಏಕೆ ಅಗತ್ಯ?
ಮೊದಲೇ ತಿಳಿಸಿದಂತೆ ಕಿಡ್ನಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಆರೋಗ್ಯವಾಗಿರಿಸುವ ಕೆಲಸ ಮಾಡುತ್ತದೆ. ಒಂದೊಮ್ಮೆ ಮೂತ್ರಪಿಂಡಗಳಲ್ಲಿ ಎಂದರೆ ಕಿಡ್ನಿಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ದೇಹಕ್ಕೆ ಹಾನಿ ಮಾಡುವ ವಿಷಗಳು ಹೊರಬರಲು ಸಾಧ್ಯವಾಗದ ಕಾರಣ ದೇಹದ ಉಳಿದೆಲ್ಲಾ ಅಂಗಗಳು ಕೂಡ ನಿಷ್ಕ್ರಿಯವಾಗಬಹುದು.
ಇದನ್ನೂ ಓದಿ- Bad Cholesterol Symptoms: ಪಾದಗಳ ಮೇಲೆ ಈ ನಾಲ್ಕು ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ!
ಮೂತ್ರಪಿಂಡಗಳ ಕೆಲಸ:-
ಗಮನಾರ್ಹವಾಗಿ ಆರೋಗ್ಯಕರ ಕಿಡ್ನಿಗಳು ದೇಹದ ರಕ್ತವನ್ನು ಕೇವಲ 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಫಿಲ್ಟರ್ ಮಾಡುತ್ತವೆ. ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ಫಿಲ್ಟರ್ ಮಾಡುವುದರ ಜೊತೆಗೆ ರಕ್ತದೊತ್ತಡ ನಿಯಂತ್ರಣ, ಕೆಂಪು ರಕ್ತ ಕಣಗಳ ಉತ್ಪಾದನೆ, ಮೂಳೆ ಆರೋಗ್ಯ ಮತ್ತು ರಕ್ತದ ರಾಸಾಯನಿಕ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು ಎಂದರೇನು?
ಮೂತ್ರಪಿಂಡಗಳು ಹಾನಿಗೊಳಗಾಗುವ ಮತ್ತು ರಕ್ತವನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳು ಎಂದು ಹೇಳಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಮೂತ್ರಪಿಂಡ ವೈಫಲ್ಯ ಅಥವಾ ಕಿಡ್ನಿ ಫೆಲ್ಯೂರ್ ಎಂತಲೂ ಹೇಳಲಾಗುತ್ತದೆ.
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಏನಾಗುತ್ತದೆ?
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವು ದೇಹದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ರಕ್ತದಲ್ಲಿನ ಪೊಟ್ಯಾಸಿಯಮ್-ಫಾಸ್ಫರಸ್ನ ಅಧಿಕವಾಗುವುದು, ಹೃದ್ರೋಗ, ಪಾರ್ಶ್ವವಾಯು, ಖಿನ್ನತೆ, ಸೋಂಕಿನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.
ಮೂತ್ರಪಿಂಡ ವೈಫಲ್ಯದ ಲಕ್ಷಣಗಳೇನು?
ಗಮನಾರ್ಹ ವಿಷಯವೆಂದರೆ ಮೂತ್ರಪಿಂಡ ವೈಫಲ್ಯದ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಲಕ್ಷಣಗಳು ಗೋಚರಿಸುವುದಿಲ್ಲ. ನಿಯಮಿತ ದೇಹ ತಪಾಸಣೆಯಿಂದಷ್ಟೇ ಇದನ್ನು ಗುರುತಿಸಬಹುದು. ಆದಾಗ್ಯೂ, ಕೆಲವು ಅಧ್ಯಯನಗಳ ಪ್ರಕಾರ, ಅತಿಯಾದ ತೂಕ ನಷ್ಟ, ಸಿವಿನ ಕೊರತೆ, ಹಿಮ್ಮಡಿ, ಅಡಿಭಾಗ ಮತ್ತು ಕೈಗಳಲ್ಲಿ ಊತ, ಉಸಿರಾಟದ ತೊಂದರೆ, ಆಯಾಸ, ಮೂತ್ರದಲ್ಲಿ ರಕ್ತ, ರಾತ್ರಿ ವೇಳೆ ಹೆಚ್ಚು ಮೂತ್ರ ವಿಸರ್ಜನೆ, ನಿದ್ರಾಹೀನತೆ, ಚರ್ಮದ ತುರಿಕೆ, ಸ್ನಾಯು ಸೆಳೆತದಂತಹ ಸಮಸ್ಯೆಗಳು ಮೂತ್ರಪಿಂಡ ವೈಫಲ್ಯದ ಎಚ್ಚರಿಕೆಯ ಗಂಟೆಯಾಗಿರಬಹುದು ಎನ್ನಲಾಗುತ್ತದೆ.
ಇದನ್ನೂ ಓದಿ- ನಿಂಬೆಹಣ್ಣಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ತಪ್ಪನ್ನು ಮಾಡಬೇಡಿ...!
ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಲು ಮೂತ್ರಪಿಂಡ ರೋಗಗಳಿಂದ ದೂರ ಉಳಿಯಲು ಏನು ಮಾಡಬೇಕು?
ನೀವು ಕಿಡ್ನಿ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಲು, ಅವುಗಳನ್ನು ಆರೋಗ್ಯವಾಗಿರಿಸಲು ಬಯಸಿದರೆ ಇದಕ್ಕಾಗಿ ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳಿ. ಪ್ರತಿದಿನ ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ವಾಕಿಂಗ್, ವ್ಯಾಯಾಮವನ್ನು ತಪ್ಪದೆ ಮಾಡಿ. ಪ್ರತಿ ನಿತ್ಯ ಸಾಕಷ್ಟು ನೀರು ಕುಡಿಯಿರಿ. ಬಿಪಿ, ಶುಗರ್ ಸಮಸ್ಯೆ ಇದ್ದಲ್ಲಿ ಇವುಗಳನ್ನು ನಿಯಂತ್ರಣದಲ್ಲಿಡಿ. ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳಿಂದ ದೂರ ಉಳಿಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.