Bad Cholesterol Symptoms: ಪಾದಗಳ ಮೇಲೆ ಈ ನಾಲ್ಕು ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ!

Bad Cholesterol Symptoms: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದು ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ದೇಹದಲ್ಲಿ ಹೆಚ್ಚಾದಾಗ, ಅದರ ಹಲವು ಲಕ್ಷಣಗಳು ಪಾದಗಳ ಮೇಲೆ ಗೋಚರಿಸುತ್ತವೆ(High cholesterol symptoms on feet). ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಅಂತಹ ಕೆಲ ಲಕ್ಷಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಅವುಗಳನ್ನು ಎಂದಿಗೂ ಕೂಡ ನಿರ್ಲಕ್ಷಿಸಬೇಡಿ. (Health News In Kannada)   

Written by - Nitin Tabib | Last Updated : Mar 13, 2024, 05:50 PM IST
  • ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಪಾದಗಳು ಅಥವಾ ಅಡಿಭಾಗದಲ್ಲಿ ಉಂಟಾದ ಗಾಯ ಬೇಗನೆ ಗುಣಮುಖವಾಗುವುದಿಲ್ಲ.
  • ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ರಕ್ತ ಪರಿಚಲನೆ ಸರಿಯಾಗಿ ಇರುವುದಿಲ್ಲ.
  • ಇದರಿಂದಾಗಿ ಗಾಯ ಬೇಗ ವಾಸಿಯಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
Bad Cholesterol Symptoms: ಪಾದಗಳ ಮೇಲೆ ಈ ನಾಲ್ಕು ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ! title=

Bad Cholesterol Symptoms On Body: ಇತ್ತೀಚಿನ ದಿನಗಳಲ್ಲಿ ನಮ್ಮ ಹಾಳಾದ ಜೀವನ ಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಇರುವ ಮೇಣದಂತಹ ಒಂದು ಜಿಡ್ಡು ಪದಾರ್ಥವಾಗಿದೆ.  ಇದರಲ್ಲಿ ಎರಡು ಪ್ರಕಾರಗಳಿವೆ ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಮೊಂಡು ಕೊಲೆಸ್ಟ್ರಾಲ್ ನಂತರ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ರಕ್ತ ಪರಿಚಲನೆಗೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ದೇಹದಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಈ ಲೇಖನದಲ್ಲಿ, ನಾವು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಪಾದಗಳಲ್ಲಿ ಕಂಡುಬರುವ ಕೆಲ ರೋಗಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. (Health News In Kannada)

ಪಾದ ತಂಪಾಗುವಿಕೆ
ಚಳಿಗಾಲದಲ್ಲಿ ಪಾದಗಳು ತಣ್ಣಗಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ.  ಪಾದಗಳು ಮತ್ತು ಅಡಿಭಾಗ ಯಾವಾಗಲೂ ತಣ್ಣಗಿರುತ್ತಿದ್ದರೆ, ಅದು ಅಧಿಕ ಕೊಲೆಸ್ಟ್ರಾಲ್ನ ಸಂಕೇತವಾಗಿರಬಹುದು. ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತಿದ್ದರೆ, ಈ ಸ್ಥಿತಿಯನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಕಾಲುಗಳಲ್ಲಿ ನೋವು ಮತ್ತು ಸೆಳೆತ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಪದೇ ಪದೇ ಕಾಲುಗಳಲ್ಲಿ ನೋವು ಮತ್ತು ಸೆಳೆತ ಅನುಭವಕ್ಕೆ ಬರುತ್ತದೆ. ಈ ನೋವು ರಕ್ತ ನಾಳಗಳು ನಿರ್ಬಂಧನೆಯಾಗುವುದರಿಂದ ಉಂಟಾಗುತ್ತದೆ. ಅಪಧಮನಿಗಳು ನಿರ್ಬಂಧಿಸಿದಾಗ, ಆಮ್ಲಜನಕಯುಕ್ತ ರಕ್ತವು ಕಾಲುಗಳ ತಳಭಾಗಕ್ಕೆ ತಲುಪುವುದಿಲ್ಲ. ಈ ಕಾರಣದಿಂದಾಗಿ, ಕಾಲುಗಳಲ್ಲಿ ನೋವು ಮತ್ತು ಭಾರ ಅನುಭವಕ್ಕೆ ಬರುತ್ತದೆ. ನಿಮಗೂ ಈ ರೀತಿಯ ಸಮಸ್ಯೆ ಇದ್ದರೆ,  ತಕ್ಷಣ ನಿಮ್ಮ ಕೊಲೆಸ್ಟ್ರಾಲ್ (High cholesterol treatments) ಮಟ್ಟವನ್ನು ಪರಿಕ್ಷೀಸಿಕೊಳ್ಳಿ.

ಕಾಲುಗಳ ಬಣ್ಣ ಬದಲಾಗುತ್ತದೆ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಪಾದದ ಚರ್ಮದ ಬಣ್ಣವು ಕ್ರಮೇಣ ಬದಲಾಗುತ್ತದೆ.  ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದಲ್ಲಿ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ಜೀವಕೋಶಗಳಿಗೆ ಸರಿಯಾದ ಪೋಷಣೆ ಸಿಗುವುದಿಲ್ಲ. ಈ ಕಾರಣದಿಂದಾಗಿ ಕಾಲುಗಳ ಚರ್ಮವು ಬಿಳಿಬದನೆ ಅಥವಾ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಈ  ರೋಗಲಕ್ಷಣಗಳನ್ನು ನಿರ್ಲಕ್ಷಿಸುವ ತಪ್ಪು ಮಾಡಬೇಡಿ. 

ಇದನ್ನೂ ಓದಿ-Benefits Of Apple Peel: ಸೇಬು ಹಣ್ಣು ತಿಂದು ನೀವೂ ಅದರ ಸಿಪ್ಪೆ ಎಸೆಯುತ್ತೀರಾ? ಹಾಗಾದ್ರೆ ಲೇಖನ ತಪ್ಪದೆ ಓದಿ!

ಪಾದದ ಗಾಯ ಬೇಗ ಗುಣಮುಖವಾಗುವುದಿಲ್ಲ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಪಾದಗಳು ಅಥವಾ ಅಡಿಭಾಗದಲ್ಲಿ ಉಂಟಾದ ಗಾಯ ಬೇಗನೆ ಗುಣಮುಖವಾಗುವುದಿಲ್ಲ. ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ರಕ್ತ ಪರಿಚಲನೆ ಸರಿಯಾಗಿ ಇರುವುದಿಲ್ಲ. ಇದರಿಂದಾಗಿ ಗಾಯ ಬೇಗ ವಾಸಿಯಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ-Bad Cholesterol: ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಕಿತ್ತೆಸೆಯುವ ಸಾಮರ್ಥ್ಯ ಹೊಂದಿವೆ ಈ ತರಕಾರಿಗಳು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News