World Lung Day 2024: ಶ್ವಾಸಕೋಶದ ಆರೋಗ್ಯದ ಮೇಲೆ ಹಲವು ಅಂಶಗಳು ಪರಿಣಾಮ ಬೀರಬಹುದು. ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗುಪ್ತ ಅಪಾಯಗಳ ಬಗ್ಗೆ ಡಾ. ಪ್ರವೀಣ್ ಕುಮಾರ್ ಬಿ ಎಸ್ ಕನ್ಸಲ್ಟೆಂಟ್ - ಶ್ವಾಸಕೋಶಶಾಸ್ತ್ರ, ಮಣಿಪಾಲ್ ಆಸ್ಪತ್ರೆ ಯಶವಂತಪುರ ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

1. ಒಳಾಂಗಣ ವಾಯು ಮಾಲಿನ್ಯ: 
ದಿನನಿತ್ಯದ ನೈರ್ಮಲ್ಯ ಮತ್ತು ಶುಚಿಗೊಳಸುವ  ಉತ್ಪನ್ನಗಳು, ಬಣ್ಣಗಳು ಮತ್ತು ಏರ್ ಫ್ರೆಶ್‌ನರ್‌ಗಳಂತಹ ಸಾಮಾನ್ಯ ಮನೆಯ ವಸ್ತುಗಳು ಮತ್ತು ವೊಲಟೈಲ್ ಆರ್ಗಾನಿಕ್ ಕಂಪೌಂಡ್ಸ್ (VOCs) ಶ್ವಾಸಕೋಶದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಇತರ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು.


2. ಶಿಲಿಂದ್ರಗಳು (ಫಂಗಸ್ ಮತ್ತು ಮೊಲ್ಡ್ಸ್): 
ಶಿಲಿಂದ್ರಗಳು ಸಾಮಾನ್ಯವಾಗಿ ಮನೆಯ ಒದ್ದೆಯಾದ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತವೆ. ಇವುಗಳು ಶ್ವಾಸಕೋಶದ ತೊಂದರೆ ಅಥವಾ ಅಲೆರ್ಜಿ ಇರುವ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟು ಮಾಡಬಹುದು.


3. ರೇಡಾನ್: 
ರೇಡಾನ್ ಒಂದು ವಾಸನೆಯಿಲ್ಲದ ಮತ್ತು ಅಗೋಚರ ನೈಸರ್ಗಿಕ ಅನಿಲವಾಗಿದ್ದು ಇದು ನೆಲದಿಂದ ಪಸರಿಸಿ ಮನೆಯಲ್ಲಿ ಹರಡಬಹುದು. ರೇಡಾನ್ ಪ್ರಮಾಣಿತ ಕಾರ್ಸಿನೋಜೆನ್ (ಕ್ಯಾನ್ಸರ್ ಉಂಟುಮಾಡುವ ಏಜೆಂಟ್) ಆಗಿರುವುದರಿಂದ ಮನೆಯ ವಾತಾವರಣದಲ್ಲಿ ಇದರ ಪರೀಕ್ಷೆಯು ನಿರ್ಣಾಯಕವಾಗಿದೆ.


4. ಕಲ್ನಾರು (ಆಸ್ಬೆಸ್ಟೊಸ್): 
ಆಸ್ಬೆಸ್ಟೊಸ್ಸ ಸಾಮಾನ್ಯವಾಗಿ ಹಳೆಯ ಕಟ್ಟಡಗಳಲ್ಲಿ ಕಂಡುಬರುತ್ತದೆ, ಇದರ ಫೈಬರ್ಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ ಮೆಸೊಥೆಲಿಯೊಮಾ ಸೇರಿದಂತೆ ಗಂಭೀರ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುಬಹುದು.


5. ಪರೋಕ್ಷ ಧೂಮ್ರಪಾನ (ಸೆಕೆಂಡ್ ಹ್ಯಾಂಡ್ ಸ್ಮೋಕ್): 
ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳ ಹೊಗೆಯನ್ನು ಉಸಿರಾಡುವುದು, ನೀವು ಧೂಮಪಾನಿಗಳಲ್ಲದಿದ್ದರೂ ಸಹ ಶ್ವಾಸಕೋಶದ ಆರೋಗ್ಯವನ್ನು ಗಮನಾರ್ಹವಾಗಿ ಹಾನಿಗೊಳಿಸಬಹುದು.


6. ಗಾಳಿಯ ಗುಣಮಟ್ಟ: 
ಉನ್ನತ ಮಟ್ಟದ ಮಾಲಿನ್ಯ ಮತ್ತು ಅಲರ್ಜಿನ್‌ಗಳನ್ನು ಒಳಗೊಂಡಂತೆ ಕಳಪೆ ಹೊರಾಂಗಣ ಗಾಳಿಯ ಗುಣಮಟ್ಟವು ಆಸ್ತಮಾದಂತಹ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು ಮತ್ತು ದೀರ್ಘಾವಧಿಯ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು.


7. ಧೂಳು ಮತ್ತು ಅಲರ್ಜಿನ್ಗಳು: 
ಧೂಳು, ಸಾಕುಪ್ರಾಣಿಗಳ ಕೂದಲು ಮತ್ತು ಪರಾಗದ (ಪೊಲನ್)  ಶೇಖರಣೆಯು ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳನ್ನು ಪ್ರಚೋದಿಸಬಹುದು, ವಿಶೇಷವಾಗಿ ಆಸ್ತಮಾ, ಅಲರ್ಜಿ, ಅಥವಾ ಅನ್ಯ ಶ್ವಾಸಕೋಶದ ತೊಂದರೆಗಳ ಇತಿಹಾಸ ಇರುವ ವ್ಯಕ್ತಿಗಲ್ಲಿ ಇದರ ಪರಿಣಾಮ ಗಂಭೀರವಾಗಬಹುದು.


8. ಔದ್ಯೋಗಿಕ ಅಪಾಯಗಳು: 
ಕೆಲವು ಕಾರ್ಮಿಕರು ಸಿಲಿಕಾ ಧೂಳು, ಕಲ್ನಾರು  (ಆಸ್ಬೆಸ್ಟೊಸ್), ಅಥವಾ ರಾಸಾಯನಿಕ ಹೊಗೆಯಂತಹ ಹಾನಿಕಾರಕ ಪದಾರ್ಥಗಳಿಗೆ ನಿತ್ಯವೂ ಎದುರಿಸಬೇಕಾಗುತ್ತದೆ, ಈ ಅಂಶಗಳೂ ಸಹ ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ.


9. ಸ್ಥೂಲಕಾಯತೆ: 
ಅಧಿಕ ತೂಕವು ಶ್ವಾಸಕೋಶದ ಕಾರ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಉಸಿರಾಟದ ಮೇಲೆ ಪರಿಣಾಮ ಬೀರುವ ಸ್ಲೀಪ್ ಅಪ್ನಿಯದಂತಹ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.


10. ಜಡ ಜೀವನಶೈಲಿ: 
ದೈಹಿಕ ಚಟುವಟಿಕೆಯ ಕೊರತೆಯು ಶ್ವಾಸಕೋಶದ ಕಾರ್ಯವನ್ನು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ.


ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸಲು, ಉತ್ತಮ ಒಳಾಂಗಣ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಅಲೆರ್ಜಿ ಅಥವಾ ಆಸ್ತಮಾ ಉಲ್ಬಣ ಮಾಡುವ ಪ್ರಚೋದಕಗಳಿಂದ ದೂರ ಇರುವುದು, ಮತ್ತು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ವ್ಯದ್ಯರೊಂದಿಗೆ ನಿಯಮಿತ ತಪಾಸಣೆಗಳು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ - ಶ್ವಾಸಕೋಶಶಾಸ್ತ್ರ ಡಾ. ಪ್ರವೀಣ್ ಕುಮಾರ್ ಬಿ ಎಸ್ ರವರು ಮಾಹಿತಿ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.