ಯೋಗ ದಿನ 2019: `ಭದ್ರಾಸನ` ವೀಡಿಯೋ ಟ್ವೀಟ್ ಮಾಡಿದ ಪ್ರಧಾನಿ ಮೋದಿ
`ಭದ್ರಾಸನ` ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ಈ ವೀಡಿಯೋದಲ್ಲಿ ತಿಳಿಸಲಾಗಿದೆ.
ನವದೆಹಲಿ: ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಹಿನ್ನೆಲೆಯಲ್ಲಿ ಯೋಗದ ವಿವಿಧ ಆಸನಗಳ ಅನಿಮೇಟೆಡ್ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಮಂಗಳವಾರ 'ಭದ್ರಾಸನ'ದ ತಮ್ಮ ಅನಿಮೇಟೆಡ್ ವೀಡಿಯೋ ಟ್ವೀಟ್ ಮಾಡಿದ್ದಾರೆ.
'ಭದ್ರಾಸನ' ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ಈ ವೀಡಿಯೋದಲ್ಲಿ ತಿಳಿಸಲಾಗಿದ್ದು, ಮಂಡಿ ನೋವು ನಿವಾರಣೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ, ಋತುಚಕ್ರ ಸಂದರ್ಭದ ನೋವು ನಿವಾರಣೆ ಮಾಡುವುದಲ್ಲದೆ, ಗರ್ಭಿಣಿಯರ ಹಲವು ಸಮಸ್ಯೆಗಳು ದೂರವಾಗುತ್ತವೆ ಎಂದು ವಿವರಿಸಲಾಗಿದೆ.
2014ರಲ್ಲಿ ಮೋದಿ ಯುಎಸ್ ಜನರಲ್ ಅಸೆಂಬ್ಲಿಯಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನದ ಉಲ್ಲೇಖ ಮಾಡಿದ್ದರು. ಅದಾದ ಬಳಿಕ ಜೂನ್ 21ನ್ನು ವಿಶ್ವ ಯೋಗ ದಿನವಾಗಿ ಆಚರಿಸಲು ಘೋಷಿಸಲಾಯಿತು. ಅಂದಿನಿಂದ ಇಂದಿನವರೆಗೆ ವಿಶ್ವಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ.