ಹೆಣ್ಣಿಗೆ ಕೂದಲೇ ಲಕ್ಷಣ. ಉದ್ದವಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಕೂದಲು ಚೆನ್ನಾಗಿ ಬೆಳೆಯಲೆಂದು ಮಹಿಳೆಯರು ಏನೆಲ್ಲಾ ಮಾಡುತ್ತಾರೆ. ಕೂದಲು ಸೊಂಪಾಗಿ ಬೆಳೆಯಲೆಂದು ಏನೆಲ್ಲಾ ಪ್ಯಾಕ್ ಗಳನ್ನು ಬಳಸಿದೆ.ಒಳ್ಳೆಯ ಹೇರ್ ಆಯಿಲ್ ಕೂಡ ಬಳಸಿದೆ ಆದರೂ ಕೂದಲು ಬೆಳೆಯುವುದೇ ಇಲ್ಲ ಎಂದು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.


COMMERCIAL BREAK
SCROLL TO CONTINUE READING

ನನಗೆ ಉದ್ದ ಕೂದಲು ಎಂದರೆ ಇಷ್ಟ. ಆದರೆ ನನಗೆ ಕೂದಲು ಬೆಳೆಯುವುದೇ ಇಲ್ಲ ಎನ್ನುವವರಿಗೆ ಇಲ್ಲಿದೆ ರಾಮಬಾಣ. ನಾನಾ ಔಷಧಗಳನ್ನು ತೆಗೆದುಕೊಂಡು ಇರುವ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು, ಮನೆಯಲ್ಲೇ ಇರುವ ವಸ್ತುವಿನಿಂದ ನಿಮಗಿಷ್ಟವಾದ ಉದ್ದನೆಯ ಕೂದಲನ್ನು ನೀವು ಹೊಂದಬಹುದು. ಉದ್ದ ಕೂದಲಿಗಾಗಿ ಏನು ಮಾಡಬಹುದು ಎಂದು ಯೋಚಿಸುವವರಿಗೆ ಒಂದು ಪುಟ್ಟ ಸಲಹೆ.


ನಿಮಗೆ ಉದ್ದ ಕೂದಲು ಬೆಳೆಯಲು ನಿಮ್ಮ ಮನೆಯಲ್ಲೇ ಇರುವ ಈರುಳ್ಳಿ ರಾಮಬಾಣವಾಗಿದೆ. ಹೌದು, ಮೊದಲಿಗೆ ಎರಡು ಈರುಳ್ಳಿಯನ್ನು ಕತ್ತರಿಸಿ, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದರ ರಸವನ್ನು ತೆಗೆದುಕೊಂಡು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬಳಿಕ 15 ರಿಂದ 20 ನಿಮಿಷ ಒಣಗಲು ಬಿಡಿ. ನಂತರ ನೀವು ಬಳಸುವ ಶಾಂಪುವಿನಿಂದ ತಲೆಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಕೂದಲು ಉದ್ದವಾಗಿಯೂ, ಸೊಂಪಾಗಿಯೂ ಬೆಳೆಯುತ್ತದೆ.