ನವ ದೆಹಲಿ: ನೀವು ಆಫೀಸ್ನಲ್ಲಿ ಟೀ ಕುಡೀತೀರಾ? ಹಾಗಿದ್ರೆ ಇಲ್ಲಿದೆ ನಿಮಗೊಂದು ಶಾಕಿಂಗ್ ನ್ಯೂಸ್! ನಿಮ್ಮ ಆಫೀಸ್ ಟಾಯ್ಲೆಟ್ಗಳಿಗಿಂತ ನಿಮ್ಮ ಆಫೀಸ್ ಟೀ ಬ್ಯಾಗ್ ಗಳು ಹೆಚ್ಚು ಕೊಳಕಾಗಿರುತ್ತವಂತೆ! ಹಾಗಂತ ವಿಜ್ಞಾನಿಗಳು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಟಾಯ್ಲೆಟ್ ಸೀಟ್ ಗೆ ಹೋಲಿಸಿದರೆ ಕಚೇರಿ ಟೀಬ್ಯಾಗ್ಗಳು 17 ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಹೊಂದಿರುವುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸಂಶೋಧನೆಗಳ ಪ್ರಕಾರ ಒಂದು ಕಚೇರಿಯ ಟೀ ಬ್ಯಾಗ್ ನಲ್ಲಿ ಸರಾಸರಿ 3,785 ಬ್ಯಾಕ್ಟೀರಿಯಾ ಇದ್ದರೆ, ಟಾಯ್ಲೆಟ್ ಸೀಟಿನಲ್ಲಿ ಕೇವಲ 220 ಬ್ಯಾಕ್ಟೀರಿಯಾ ಇರುವುದಾಗಿ ತಿಳಿದುಬಂದಿದೆ. 


ಕಚೇರಿ ಟಾಯ್ಲೆಟ್ ಬಗ್ಗೆ ನಡೆಸಿದ ಪ್ರಾಥಮಿಕ ನಡೆಸಿದಲ್ಲಿ ಅಡುಗೆ ಪಾತ್ರೆಗಳು ಮತ್ತು ಉಪಕರಣಗಳ ಮೇಲಿನ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕಂಡುಬಂದಿದೆ ಎಂದು ವಿಶ್ಲೇಷಿಸಲಾಗಿದೆ. 


ಇಂಡಿಪೆಂಡೆಂಟ್ನಲ್ಲಿನ ಒಂದು ವರದಿಯ ಪ್ರಕಾರ, ಅಡುಗೆ ಸಾಮಗ್ರಿಗಳು ಮತ್ತು ಪಾತ್ರೆಗಳ ಹಿಡಿಗಳಲ್ಲಿ ಸರಾಸರಿ 2,483, ಬಳಸಿದ ಮಗ್ ಹಿಡಿಗಳಲ್ಲಿ 1,746 ಮತ್ತು ಫ್ರಿಜ್ ಡೋರ್ ಹ್ಯಾಂಡಲ್ನಲ್ಲಿ ಸರಾಸರಿ 1,592 ಬ್ಯಾಕ್ಟೀರಿಯಾ ಕಂಡುಬಂದಿರುವುದಾಗಿ ತಿಳಿಸಿದೆ. 


ನಾವು ಟಾಯ್ಲೆಟ್ ಉಪಯೋಗಿಸಿದ ನಂತರ ಹೀಗೆ ನಮ್ಮ ಕೈಗಳನ್ನು ತೊಳೆದುಕೊಳ್ಳುತ್ತೇವೆಯೋ ಹಾಗೆಯೇ ಕಚೇರಿಯ ಅಡುಗೆ ಮನೆಗೆ ಹೋದಾಗಲೂ ಕೈಗಳನ್ನು ತೊಳೆದುಕೊಂಡು ನಂತರ ಬಳಸಬೇಕು. 


ಇತ್ತೀಚೆಗೆ ನಡೆಸಿದ  1,000 ಕಾರ್ಮಿಕರ ಸಮೀಕ್ಷೆ ಪ್ರಕಾರ ಶೇ.80 ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳಿಗೆ ಪಾನೀಯಗಳನ್ನು ಮಾಡಿಕೊಡುವ ಮೊದಲು ಕೈ ತೊಳೆಯುವುದಿಲ್ಲ ಎಂಬ ಅಂಶ ತಿಳಿದುಬಂದಿದೆ. 


"ನೀವು ಕೆಟಲ್ ಹ್ಯಾಂಡಲ್, ಚಹಾ ಬ್ಯಾಗ್ ಬಾಕ್ಸ್ ಮುಚ್ಚಳವನ್ನು, ಮಗ್ಗಳು ಮತ್ತು ಇನ್ನಿತರ ವಸ್ತುಗಳನ್ನು ಸ್ಪರ್ಶಿಸುವ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯದೆ ಬಳಸಿದರೆ ಅದರಲ್ಲಿನ ಬ್ಯಾಕ್ಟೀರಿಯಾ ಪ್ರಮಾಣ ಖಂಡಿತಾ ಹೆಚ್ಚಾಗುತ್ತದೆ" ಎಂದು ಬ್ಯಾರಟ್ ಹೇಳುತ್ತಾರೆ.


ಹಾಗಾಗಿ, ಯಾವುದೇ ವಸ್ತುಗಳನ್ನು ಬಳಸುವ ಮುನ್ನ ನಿಮ್ಮ ಕೈಗಳನ್ನು ತೊಳೆಯುವುದು ಅತ್ಯಗತ್ಯ. ಇದರಿಂದ ವಸ್ತುಗಳ ಮೇಲಿನ ಮಾಲಿನ್ಯದಿಂದಾಗುವ ಅಪಾಯವನ್ನು ಕಡಿಮೆಮಾಡಬಹುದು.