Dharwad News: ಬಡ ಜನರ ಸಂಜೀವಿನಿ ಎಂದು ಖ್ಯಾತಿ ಹೊಂದಿರುವ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದರ ಹೆಚ್ಚಳ‌ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಇರುತ್ತದೆ. ಆದರೆ ಧಾರವಾಡದ ಜಿಲ್ಲಾಸ್ಪತ್ರೆ ಈಗ ಬಡವರ ಪಾಲಿಗೆ ದುಬಾರಿ ಆಗೋಗಿದೆ. ಯಾಕಂದ್ರೆ ಬಿಪಿಎಲ್ ಕಾರ್ಡ್​ ದಾರರೂ ಸಹ ಶೇ. 50ರಷ್ಟು ಹಣ ನೀಡಿ ಚಿಕಿತ್ಸೆ ಪಡೆಯಬೇಕು ಅಂತಾ ಆದೇಶ ಮಾಡಿದ್ದು,  ಹಿಂದಿನ ದರಗಳ ಏರಿಕೆಯನ್ನು ಮಾಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ...


COMMERCIAL BREAK
SCROLL TO CONTINUE READING

ಹೌದು, ಧಾರವಾಡ ಜಿಲ್ಲಾಸ್ಪತ್ರೆ ಕೇವಲ ಧಾರವಾಡ ಜಿಲ್ಲೆಗೆ  ಮಾತ್ರವಲ್ಲದೇ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎರಡ್ಮೂರು ತಾಲೂಕುಗಳ ಬಡವರಿಗೂ ಸಹ ಜೀವ ಸಂಜೀವಿನಿಯಾಗಿದೆ. ಆದರೆ ಈಗ ಈ ಜಿಲ್ಲಾಸ್ಪತ್ರೆಯಿಂದ ಬಡವರು ದೂರ ಆಗುವಂತಹ ಪರಿಸ್ಥಿತಿ ಬಂದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲಿ ಏಕಾಏಕಿ ದರಾ ಏರಿಕೆ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. 


ವಾಸ್ತವವಾಗಿ, ಕೈಯಲ್ಲಿ ಹಣ ಇಲ್ಲದಿದ್ದರೂ ಸಹ ಚಿಕಿತ್ಸೆ ಪಡೆಯಬಹುದು ಎಂಬ ಆಸೆಯಿಂದ ಜನ ಸರ್ಕಾರಿ ಜಿಲ್ಲಾಸ್ಪತ್ರೆಗಳಿಗೆ ಹೋಗ್ತಾರೆ. ಆದರೆ, ಈ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ದರಗಳನ್ನು ಏಕಾಏಕಿಯಾಗಿ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ ಒಪಿಡಿ ನೋಂದಣಿ ಶುಲ್ಕವನ್ನು 10 ರೂಪಾಯಿಯಿಂದ 20 ರೂಪಾಯಿಗೆ ಏರಿಸಲಾಗಿದ್ದು, ಅದರ ಜೊತೆಗೆ ಎಲ್ಲ ಪರೀಕ್ಷೆಗಳ ವೆಚ್ಚವನ್ನೂ ಸಹ ದುಪಟ್ಟು ಮಾಡಿದ್ದಾರೆ. 


ಇದನ್ನೂ ಓದಿ- ಆಟೋ ಪ್ರಯಾಣಿಕರಿಗೆ ಶಾಕ್-ಇನ್ಮೆ‌ಲೆ ವರ್ಷಕೊಮ್ಮೆ ಆಟೋ ಮೀಟರ್ ದರ...!?


ಇನ್ನು ಮೊದಲು ಬಿಪಿಎಲ್ ಕಾರ್ಡ್​ ದಾರರಿಗೆ ಇಲ್ಲಿ ನೋಂದಣಿ ಉಚಿತವಾಗಿತ್ತು. ಆದರೆ ಈಗ ಬಿಪಿಎಲ್ ಕಾರ್ಡ್ ದಾರರೂ ಸಹ ನೋಂದಣಿ ಸೇರಿದಂತೆ ಎಲ್ಲ ಪರೀಕ್ಷೆಗಳಿಗೂ ಶೇ. 50ರಷ್ಟು ಹಣ ಕೊಡಬೇಕಿದೆ. ಹೀಗಾಗಿ ಇದು ದುಬಾರಿ ಆಸ್ಪತ್ರೆ ಆಗುತ್ತಿದೆ. ಇಲ್ಲಿ ಬರೋರೆಲ್ಲ ಬಡವರು. ಬಡವರಿಂದ ಹೀಗೆ ಹಣ ಸುಲಿಗೆ ಮಾಡೋದು ಎಷ್ಟು ಸರಿ ಅನ್ನೋ ಆಕ್ರೋಶ ಈಗ ವ್ಯಕ್ತವಾಗುತ್ತಿದೆ. 


ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆಗಳು  ಸೇರಿದಂತೆ ಅನೇಕ ಸಂಘಟನೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಸಹ ನಡೆಸಿವೆ. ಯಾಕಂದ್ರೆ ಈಗ ಮೊದಲೇ ಬರಗಾಲ ಇದೆ. ಇಂತಹ ಬರಗಾಲದ ಸಮಯದಲ್ಲಿಯೇ ದರ ಏರಿಕೆ ಮಾಡಿದ್ದು ಎಷ್ಟು ಸರಿ ಅನ್ನೋ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ದರ ಏರಿಕೆಯನ್ನು ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ದರ ಏರಿಕೆ ಮಾಡಿರಲಿಲ್ಲ. ಹುಬ್ಬಳ್ಳಿ ಕಿಮ್ಸ್ ದರಕ್ಕೆ ಹೊಂದಾಣಿಕೆಯಾಗಿ ಈ ದರ ಏರಿಕೆ ಮಾಡಲಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೋಲಿಸಿದಾರೆ ಇದು ತೀರಾ ಕಡಿಮೆ ಅಂತಿರೋ ಜಿಲ್ಲಾಧಿಕಾರಿ, ಈ ಆಸ್ಪತ್ರೆಯ ಸುಧಾರಣೆಗಾಗಿಯೇ ಈ ಹಣವನ್ನು ವಿನಿಯೋಗ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. 


ಇದನ್ನೂ ಓದಿ- ಕಳ್ಳ ಶಿಕ್ಷ ಬೇಡ: ಸರ್ಕಾರಿ ಶಾಲಾ ಆವರಣದಲ್ಲಿ ಪೋಷಕರ ಪ್ರತಿಭಟನೆ


ಒಟ್ಟಾರೆಯಾಗಿ ಮೊದಲೇ ಬರಗಾಲದಿಂದಾಗಿ ಬೇಸತ್ತಿರುವ ಜನರಿಗೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲೂ ಸಹ ಉಚಿತ ಚಿಕಿತ್ಸೆ ದೊರೆಯದೆ ಇರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಈ ದರ ಪರಿಷ್ಕರಣೆಯಾಗುತ್ತಾ? ಅಥವಾ ಇದನ್ನೇ ಮುಂದುವರೆಸಿಕೊಂಡು ಹೋಗುತ್ತಾರಾ? ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.