ನವ ದೆಹಲಿ: ಕೇಂದ್ರ ಸರ್ಕಾರವು ಮೊದಲ ಬಾರಿಗೆ 100 ನಾಣ್ಯಗಳನ್ನು ಮುದ್ರಿಸಲು ಒಂದು ಕ್ಷೇತ್ರವನ್ನು ಸಿದ್ಧಪಡಿಸಿದೆ. ಈ ವಿಷಯವನ್ನು ಸೋಮವಾರ ಕೇಂದ್ರ ಬ್ಯಾಂಕ್ ಘೋಷಿಸಿತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ (ಎಂ ಜಿ ಆರ್) ಮತ್ತು ದಕ್ಷಿಣ ಭಾರತೀಯ ಹಿರಿಯ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮೀ ಅವರ ಭಾವಚಿತ್ರವನ್ನೋಳಗೊಂಡ ನಾಣ್ಯಗಳನ್ನು ಮುದ್ರಿಸಲಾಗಿದೆಯೆಂದು ಕೇಂದ್ರ ಬ್ಯಾಂಕ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಎಂಜಿಆರ್ ಮತ್ತು ಎಂ.ಎಸ್.ಸುಬ್ಬಲಕ್ಷ್ಮೀ ಅವರ 100 ನೇ ಜನ್ಮದಿನದ ಸಂದರ್ಭದಲ್ಲಿ ನಾಣ್ಯಗಳನ್ನು ಬಿಡುಗಡೆ ಮಾಡಲಾಗುವುದು. ಜೊತೆಗೆ, ರೂ 10 ಮತ್ತು ರೂ 5 ನಾಣ್ಯಗಳು ಮುದ್ರಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್ ಮತ್ತು ಸಂಗೀತ ಪ್ರಪಂಚದ ಹಿರಿಯ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮೀ ಯವರ ಶತಮಾನೋತ್ಸವವನ್ನು ಆಚರಿಸುವ ರೂಪದಲ್ಲಿ ಅವರ ಚಿತ್ರದ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.


ಈ ನಾಣ್ಯಗಳು ರೂ. 100, ರೂ. 10 ಮತ್ತು ರೂ. 5 ಮೌಲ್ಯಗಳಲ್ಲಿ ಮುದ್ರಿತವಾಗಲಿದೆ. 


ಎಂಜಿಆರ್ ಭಾವಚಿತ್ರ ಹೊಂದಿರುವ 100 ರೂಪಾಯಿ ಮತ್ತು 5 ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಲಾಗುವುದು. ನಾಣ್ಯಗಳಲ್ಲಿ, '1917-2017' ಎಂಬ ಪದವನ್ನು ಅವರ ಶತಮಾನವನ್ನು ಉಲ್ಲೇಖಿಸಲು ಬಳಸಲಾಗುತ್ತದೆ.


ಹಾಗೆಯೇ, ಎಂ.ಎಸ್. ಸುಬ್ಬುಲಕ್ಷ್ಮಿಯವರ ಭಾವಚಿತ್ರವನ್ನು ಹೊಂದಿರುವ 100 ರೂಪಾಯಿ ಮತ್ತು 10 ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ನಾಣ್ಯಗಳಲ್ಲಿ, '1916-2016' ಪದವನ್ನು ಅವರ ಶತಮಾನವನ್ನು ಗುರುತಿಸಲು ಅಳವಡಿಸಲಾಗುವುದು.


ಭಾರತದಲ್ಲಿ ಮೊದಲ ಬಾರಿಗೆ, 100 ನಾಣ್ಯಗಳು ಮುದ್ರಿತವಾಗಿದ್ದು ಎಲ್ಲರಲ್ಲೂ ಕುತೂಹಲ ಉಂಟುಮಾಡಿದೆ. ಶೀಘ್ರದಲ್ಲೇ ಈ ಹೊಸ ಕರೆನ್ಸಿಗಳು ಬಿಡುಗಡೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.