ಸುಕ್ಮಾ: ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, ಕ್ಷಣ ಕ್ಷಣಕ್ಕೂ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ಧೋರಪಾಲ್ ನಿವಾಸಿ 102 ವರ್ಷದ ಮಹಿಳೆ ವಿಶ್ವಾಸ್ ಎಂಬುವವರು ಬಹಳ ಉತ್ಸಾಹದಿಂದ ಮತಗಟ್ಟೆ ತಲುಪಿ ಮತ ಚಲಾಯಿಸಿದರು.


COMMERCIAL BREAK
SCROLL TO CONTINUE READING

ಸ್ವಾತಂತ್ರ್ಯದ ನಂತರ ತಪ್ಪದೇ ಮತ:
ಮತ ಚಲಾಯಿಸಿದ ಬಳಿಕ ಮತಗಟ್ಟೆ ಹೊರಗೆ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ವೃದ್ಧ ಮಹಿಳೆ ಸ್ವಾತಂತ್ಯ್ರದ ಬಳಿಕ ತಪ್ಪದೇ ತಾವು ತಮ್ಮ ಮತ ಚಲಾಯಿಸುತ್ತಿರುವುದಾಗಿ ತಿಳಿಸಿದರು. ವಿಶ್ವಾಸ್ ಅವರು ಮತಗಟ್ಟೆಗೆ ತಲುಪುತ್ತಿದ್ದಂತೆ ಮತಗಟ್ಟೆಯಲ್ಲಿ ನೆರೆದಿದ್ದವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮತಗಟ್ಟೆಯಲ್ಲಿ ಹಲವು ಮಂದಿ ಸಾಲಿನಲ್ಲಿದ್ದರೂ ವೀಲ್ ಚೇರ್ ನಲ್ಲಿ ಬಂದ ಅವರಿಗೆ ಮೊದಲು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.


ಮಾವೋವಾದಿಗಳ ಬೆದರಿಕೆ ನಡುವೆಯೂ ಮತದಾನ:
ಛತ್ತೀಸ್​ಗಢದಲ್ಲಿ ಮಾವೋವಾದಿಗಳು ಮತ್ತು ನಕ್ಸಲೀಯರ ಬೆದರಿಕೆಯ ನಡುವೆ ಮತದಾನ ನಡೆಯುತ್ತಿದೆ. ಮತದಾನಕ್ಕೂ ಸ್ವಲ್ಪ ಸಮಯದ ಹಿಂದೆ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಮಾವೋವಾದಿಗಳು ಬೆದರಿಕೆ ಹಾಕಿದ್ದು, ಮತದಾನ ಮಾಡಿದ್ದೇ ಆದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದರು.


ಛತ್ತೀಸ್ಗಢದ ನಕ್ಸಲ್-ಪೀಡಿತ ಪ್ರದೇಶವಾದ ನಾರಾಯಣಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ನಕ್ಸಲರು ಮತಗಟ್ಟೆ ಬಳಿ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿ, ಮತದಾನ ತಡೆಗಟ್ಟುವ ವಿಫಲ ಪ್ರಯತ್ನ ಮಾಡಿದರು.