ನವದೆಹಲಿ: ಈ ಬ್ಯಾಂಕ್ ಗಳಲ್ಲಿ ನೀವು ಖಾತೆದಾರರಾಗಿದ್ದಲ್ಲಿ ನಿಮ್ಮ ಒತ್ತಡ ಹೆಚ್ಚಾಗಬಹುದು. ವಾಸ್ತವವಾಗಿ RBIನ ಪ್ರಾಂಪ್ಟ್ ಆಕ್ಷನ್ ಪಟ್ಟಿ(PCA) ಫ್ರೇಮ್ ವರ್ಕ್ ಅಡಿಯಲ್ಲಿ 11 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಇರಿಸಿದೆ. ಈ ಬ್ಯಾಂಕ್ ಗಳು ಶೀಘ್ರವೇ ತಮ್ಮ ಎಟಿಎಂ ಗಳನ್ನು ಮುಚ್ಚುತ್ತಿವೆ. ಈ ಪಟ್ಟಿಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನಿಂದ ಹಿಡಿದು ಕೆನರಾ ಬ್ಯಾಂಕ್ ವರೆಗೆ ದೊಡ್ಡ ದೊಡ್ಡ ಬ್ಯಾಂಕ್ ಗಳ ಹೆಸರಿದೆ. ಇಂತಹ ಬ್ಯಾಂಕುಗಳು ಕಳೆದ ಒಂದು ವರ್ಷದಲ್ಲಿ 1635 ಎಟಿಎಂಗಳನ್ನು ಮುಚ್ಚಿವೆ.


COMMERCIAL BREAK
SCROLL TO CONTINUE READING

ಏನಿದು PCA?
ದುರ್ಬಲ ಮತ್ತು ತೊಂದರೆಗೊಳಗಾಗಿರುವ ಬ್ಯಾಂಕುಗಳ ಮೇಲೆ ನಿಗಾ ಇರಿಸಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಆರ್ಬಿಐ ಕೆಲವು ಪ್ರಚೋದಕ ಅಂಶಗಳನ್ನು ಇರಿಸಿದೆ. ಇಂತಹ ಅಯಾಮಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಅಥವಾ ಕಾರ್ಯವಿಧಾನವನ್ನು ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ಅಥವಾ PCA ಎಂದು ಕರೆಯಲಾಗುತ್ತದೆ.


ಎಟಿಎಂಗಳಿಂದ ನಗದು ವಹಿವಾಟುಗಳು ಬಹಳ ದುಬಾರಿ
ಇಂಡಿಯನ್ ಓವರ್ಸೀಸ್ ಬ್ಯಾಂಕ್, ದೀನ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಗಳು ಆರ್ಬಿಐ ನೀಡಿದ ನಿರ್ದೇಶನದಡಿಯಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಎಟಿಎಂಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತಿದೆ. ಎಟಿಎಂ ಯಂತ್ರದ ವೆಚ್ಚ ಸುಮಾರು 2.5 ಲಕ್ಷ ರೂಪಾಯಿಗಳಾಗಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ಆಡಳಿತ ನಿರ್ದೇಶಕ ನೀರಾಜ್ ವ್ಯಾಸ್ ತಿಳಿಸಿದ್ದಾರೆ. ಇದರ ಕಾರ್ಯಾಚರಣೆಯ ವೆಚ್ಚವು 4.5 ಲಕ್ಷದಿಂದ 5 ಲಕ್ಷ ರೂಪಾಯಿಗಳು. ಅಂತಹ ಸಂದರ್ಭಗಳಲ್ಲಿ, ಎಟಿಎಂಗಳಿಂದ ನಗದು ವಹಿವಾಟುಗಳು ಬಹಳ ದುಬಾರಿ ಎಂದು ಸಾಬೀತಾಗಿದೆ.


ಆರ್ಬಿಐ ಪರವಾಗಿ, 11 ಬ್ಯಾಂಕುಗಳನ್ನು ಪಿಸಿಎ ಪಟ್ಟಿಯಲ್ಲಿ ಇರಿಸಲಾಗಿದೆ, ಅದರಲ್ಲಿ 7 ಬ್ಯಾಂಕುಗಳು ತಮ್ಮ ಎಟಿಎಂಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇವುಗಳಲ್ಲಿ ಸೆಂಟ್ರಲ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕಾರ್ಪೊರೇಶನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಸೇರಿವೆ. 


3500 ರಿಂದ 3000 ಎಟಿಎಂಗಳು
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅದರ ಎಟಿಎಂಗಳಲ್ಲಿ 15% ನಷ್ಟು ಮುಚ್ಚಿದೆ. ಈ ಸಂದರ್ಭದಲ್ಲಿ, ಬ್ಯಾಂಕ್ ಎಟಿಎಂಗಳ ಸಂಖ್ಯೆ ಮೂರು ಸಾವಿರಕ್ಕೆ ಇಳಿಮುಖವಾಗಿದೆ. ಏಪ್ರಿಲ್ 2017 ರಲ್ಲಿ, ಈ ಸಂಖ್ಯೆ 3500 ಇತ್ತು. ಅದೇ ಸಮಯದಲ್ಲಿ, ಎಟಿಎಂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬ್ಯಾಂಕುಗಳ ಸಂಖ್ಯೆಯಲ್ಲಿ ಯುಕೋ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ಯುಕೋ ಬ್ಯಾಂಕ್ ಅದರ 7.6 ರಷ್ಟು ಎಟಿಎಂಗಳನ್ನು ಮುಚ್ಚಿದೆ. ಸರ್ಕಾರಿ ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯ ಎಟಿಎಂಗಳನ್ನು ಮುಚ್ಚಿದರೂ, 2018 ರಲ್ಲಿ 2017 ಕ್ಕಿಂತ 22 ಪ್ರತಿಶತದಷ್ಟು ನಗದು ಹಿಂಪಡೆಯುವಿಕೆಯು ಹೆಚ್ಚಿದೆ.


2017 ರಲ್ಲಿ 2,07,813 ಇದ್ದ ಎಟಿಎಂ ಸಂಖ್ಯೆ ಈ ವರ್ಷ 107 ಹೆಚ್ಚಾಗಿದ್ದು 2,07,920 ಎಟಿಎಂಗಳಿವೆ. ಅಂದರೆ, ಸ್ಥಗಿತಗೊಂಡ ಪಿಸಿಎ ಪಟ್ಟಿಯಲ್ಲಿರುವ ಬ್ಯಾಂಕುಗಳ ಎಟಿಎಂಗಳ ಪರವಾಗಿ ಇತರ ಬ್ಯಾಂಕುಗಳಿಂದ ಹೆಚ್ಚು ಎಟಿಎಂಗಳನ್ನು ತೆರೆಯಲಾಗಿದೆ.