ಭುವನೇಶ್ವರ್: 'ತಿತ್ಲಿ' ಚಂಡಮಾರುತಕ್ಕೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಮೂರು ಮಕ್ಕಳು ಸೇರಿದಂತೆ 12 ಜನರು ಬಲಿಯಾಗಿದ್ದಾರೆ. ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಜನರು ತೊಂದರೆಗೆ ಸಿಲುಕಿದ್ದಾರೆ. ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 12 ಕ್ಕಿಂತ ಹೆಚ್ಚಿದೆ. 


COMMERCIAL BREAK
SCROLL TO CONTINUE READING

ಸಾವಿನ ಬಗ್ಗೆ ದೃಢಪಡಿಸಿದ ವಿಶೇಷ ಆಯುಕ್ತರು:
ಗಜಪತಿ ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ಬಳಲುತ್ತಿರುವವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿ, ತೀರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸಿದರು. ಅದೇ ವೇಳೆ  ವಿಶೇಷ ಆಯುಕ್ತರಾದ ಬಿ.ಪಿ. ಸೇಥಿ ಅವರು 12 ಜನರ ಸಾವಿನ ಬಗ್ಗೆ ದೃಢಪಡಿಸಿದ್ದಾರೆ.


ಒಡಿಶಾದಲ್ಲಿ ಇಳಿಮುಖ, ಆದರೆ ಬಂಗಾಳದಲ್ಲಿ 'ತಿತ್ಲಿ' ಪ್ರಾಬಲ್ಯ:
ಎರಡು ದಿನಗಳಿಂದ ಭಾರೀ ಮಳೆ ಮತ್ತು ಗಾಳಿಗೆ ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತತ್ತರಿಸಿದ್ದು, ತಿತ್ಲಿ ರೌದ್ರತೆ ಕಡಿಮೆಯಾಗುವ ಸೂಚನೆ ಸಿಕ್ಕರೂ, ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ಶುಕ್ರವಾರ ಒಡಿಶಾದಲ್ಲಿ ಸ್ವಲ್ವ ತಗ್ಗಿದ ತಿತ್ಲಿ ಚಂಡಮಾರುತದ ಪ್ರಭಾವ ಇದೀಗ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಪಾಶ್ಚಾತ್ಯ ಮೆಡಿನಿಪುರ ಮತ್ತು ಜಾರ್ಗ್ರಾಮ್ ಜಿಲ್ಲೆಯಲ್ಲಿ ಚಂಡಮಾರುತ ಮತ್ತು ಭಾರಿ ಮಳೆ ಭಾರಿ ನಷ್ಟವನ್ನು ಉಂಟುಮಾಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಹಾವು ಮರಗಳು ಧರೆಗುರುಳಿವೆ. 


ಏತನ್ಮಧ್ಯೆ, ಪಶ್ಚಿಮ ಬಂಗಾಳದ ಗಂಗಾ ನದಿ ಸಮೀಪದಲ್ಲಿ ಶನಿವಾರ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 


ಒಡಿಶಾದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನರ ಮೇಲೆ ತಿತ್ಲಿ ಪರಿಣಾಮ:
ಒಡಿಶಾದಲ್ಲಿ ತಲೆದೋರಿರುವ ತಿತ್ಲಿ ಚಂಡಮಾರುತದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಸುಮಾರು 60 ಲಕ್ಷಕ್ಕೂ ಅಧಿಕ ಜನರ ಮೇಲೆ ಇದರ ಪರಿಣಾಮ ಉಂಟಾಗಿದೆ. ಮೂರು ಜಿಲ್ಲೆಗಳಲ್ಲಿ ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಗಳನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಎನ್ಡಿಆರ್ಎಫ್ ಮತ್ತು ಒಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜಿಸಿದೆ.  ದಕ್ಷಿಣ ಒಡಿಶಾ, ಗಂಜಾಂ, ಗಜಪತಿ ಮತ್ತು ರಾಯಗಢದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.