ಉತ್ತರ ಪ್ರದೇಶ: ರಾಮನನಾಡಿನಲ್ಲಿ ಸಧ್ಯ ಕೊರೋನಾ ತಾಂಡವಾಡುತ್ತಿದೆ. ಪ್ರತಿದಿನ ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಸೋಂಕಿಗೆ ಒಳಗಾದ ನಂತರ, ಹದಗೆಡುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು  ನಿರಂತರ ಸಭೆ ನಡೆಸುತ್ತಿದ್ದಾರೆ.  ಆದ್ರೆ, ಸಂಭಾಲ್ ಜಿಲ್ಲೆಯ ರಸಗೊಬ್ಬರ ಕಂಪನಿಯಲ್ಲಿ 125 ಉದ್ಯೋಗಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಮೊದಲ ಪ್ರಕರಣ 10 ದಿನಗಳ ಹಿಂದೆ:
10 ದಿನಗಳ ಹಿಂದೆ ಸಂಭಾಲ್‌ನ ಯಾರಾ ಫರ್ಟಿಲೈಜರ್ ಕಂಪನಿಯಲ್ಲಿ (Yara Fertilizer Company), ಉದ್ಯೋಗಿಯನ್ನು ಪರೀಕ್ಷಿಸಿದಾಗ, ಅವರು ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ನಂತರ, ಕಂಪನಿಯು ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಕರೋನಾ ಟೆಸ್ಟ್ ಗೆ ಒಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ.


ಇದನ್ನೂ ಓದಿ: WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ


ಕೆಲವು ಉದ್ಯೋಗಿಗಳ ಟೆಸ್ಟ್ ವರದಿ ಇನ್ನೂ ಬರಬೇಕಿದೆ: 
ಕರೋನಾ ಸೋಂಕು ಕಂಪನಿಯಲ್ಲಿ ವ್ಯಾಪಕವಾಗಿ ಹರಡಿರುವುದು ಟೆಸ್ಟ್ ನಂತರ ತಿಳಿದುಬಂದಿದೆ.  ಈವರೆಗೆ 125 ಉದ್ಯೋಗಿಗಳಿಗೆ(Employees) ಸೋಂಕು ತಗುಲಿದೆ. ಅಲ್ಲದೆ, ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಉದ್ಯೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಯಾರಾ ಕಂಪನಿಗೆ ಸಂಬಂಧಿಸಿದ ಕೆಲವು ನೌಕರರ ಕೋವಿಡ್ ಟೆಸ್ಟ್ ರಿಪೋರ್ಟ್ ಇನ್ನೂ ಬರಬೇಕಿದೆ.


ಇದನ್ನೂ ಓದಿ: LPG Offers : 9 ರೂಪಾಯಿಗೆ ಸಿಗಲಿದೆ 809 ರೂಪಾಯಿಯ ಸಿಲಿಂಡರ್..!


ಉತ್ತರ ಪ್ರದೇಶದಲ್ಲಿ ಸಧ್ಯದ ಕೊರೋನಾ ಸ್ಥಿತಿ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 28287 ಕರೋನಾ(Corona Cases) ಪ್ರಕರಣಗಳು ದಾಖಲಾಗಿವೆ, 167 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 8 ಲಕ್ಷ 79 ಸಾವಿರ 831 ಪ್ರಕರಣಗಳು ವರದಿಯಾಗಿದ್ದು, ಒಟ್ಟು 9997 ಜನರು ಕರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 208523 ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.