WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ

ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುವುದರಿಂದ ಅವರ ಚಾಟಿಂಗ್ ಅನುಭವ ಇನ್ನಷ್ಟು ಖುಷಿಯಾಗುತ್ತದೆ. ಇತ್ತೀಚೆಗೆ, ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಪ್ರಮುಖ ವೈಶಿಷ್ಟ್ಯವನ್ನು ನೀಡಿದೆ, ಇದಕ್ಕಾಗಿ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ.

Written by - Yashaswini V | Last Updated : Apr 20, 2021, 11:48 AM IST
  • ವಾಟ್ಸಾಪ್ನ ಹೊಸ ವೈಶಿಷ್ಟ್ಯ
  • ವಾಟ್ಸಾಪ್ನಲ್ಲಿ ಸಂದೇಶವು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ
  • ಆಯ್ದ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ
WhatsApp- ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತೆ ವಾಟ್ಸಾಪ್ ಚಾಟ್, ಯಾವುದೀ ಹೊಸ ವೈಶಿಷ್ಟ್ಯ ತಿಳಿಯಿರಿ title=
WhatsApp new feature 2021

ನವದೆಹಲಿ: ವಾಟ್ಸಾಪ್ (WhatsApp) ತನ್ನ ಬಳಕೆದಾರರ ಚಾಟಿಂಗ್ ಅನುಭವವನ್ನು ಮತ್ತಷ್ಟು ಆನಂದಮಯವಾಗಿಸಲು ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ.  ಇತ್ತೀಚೆಗೆ, ವಾಟ್ಸಾಪ್ ತನ್ನ ಬಳಕೆದಾರರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಮುಖ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಟ್ಸಾಪ್ನ ಈ ಹೊಸ ವೈಶಿಷ್ಟ್ಯವನ್ನು ಕಣ್ಮರೆಯಾಗುತ್ತಿರುವ ಸಂದೇಶ (Disappearing Message) ಎಂದು ಹೆಸರಿಸಲಾಗಿದೆ.

ವಾಟ್ಸಾಪ್ ಗುಂಪುಗಳಿಗೆ ಪ್ರಯೋಜನಕಾರಿ:
ಆಂಡ್ರಾಯ್ಡ್ (Android) ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್‌ನ ಹೊಸ ವೈಶಿಷ್ಟ್ಯವನ್ನು ಹೊರತರಲಾಗುವುದು. ವಾಟ್ಸಾಪ್ನ ಈ ವೈಶಿಷ್ಟ್ಯವು ವಾಟ್ಸಾಪ್ನಲ್ಲಿ ರಚಿಸಲಾದ ಗುಂಪುಗಳಿಗೆ ಪ್ರಯೋಜನಕಾರಿಯಾಗಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ಗುಂಪು ನಿರ್ವಾಹಕರು ಮಾತ್ರವಲ್ಲದೆ ಗುಂಪಿನ ಎಲ್ಲಾ ಸದಸ್ಯರು ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ ಪ್ರಸ್ತುತ, ಗುಂಪು ನಿರ್ವಾಹಕರು ಮಾತ್ರ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ.

ಇದನ್ನೂ ಓದಿ - Whatsapp: ಗುಲಾಬಿ ಬಣ್ಣದಲ್ಲಿ ಬರಲಿದೆಯೇ ವಾಟ್ಸಾಪ್, ಇದರ ಸತ್ಯಾಸತ್ಯತೆ ತಿಳಿಯಿರಿ

ಮುಂಬರುವ ಸಮಯದಲ್ಲಿ, ಈ ವೈಶಿಷ್ಟ್ಯದ ಬಳಕೆಗೆ ಸಂಬಂಧಿಸಿದಂತೆ ವಾಟ್ಸಾಪ್ (Whatsapp) ಗುಂಪು ನಿರ್ವಾಹಕರು ಈ ಹಕ್ಕುಗಳನ್ನು ಹೊಂದಿರುತ್ತಾರೆ. ಇದರಲ್ಲಿ ಅವರು ಈ ವೈಶಿಷ್ಟ್ಯವನ್ನು ಯಾರು ಬಳಸಬಹುದು ಮತ್ತು ಯಾರು ಬಳಸಬಾರದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ - PUBG ಮೊಬೈಲ್ ಗೇಮ್ ಅಭಿಮಾನಿಗಳಿಗೆ ಬಿಗ್ ನ್ಯೂಸ್ : ಗೇಮ್ ಲಾಂಚಿಂಗ್ ಡೇಟ್ ಫಿಕ್ಸ್!

ಇದರರ್ಥ ಪ್ರತಿ ವಾರ ಸಂದೇಶವನ್ನು ಅಳಿಸುವ ಮೂಲಕ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು ಇನ್ನೂ ಪರೀಕ್ಷಾ ಹಂತದಲ್ಲಿದೆ. ಹಾಗಾಗಿಯೇ ವಾಟ್ಸಾಪ್ನ ಆಯ್ದ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News