ತಿರುವನಂತಪುರಂ: ಕೇರಳ ಹಲವು ಭಾಗಗಳಲ್ಲಿ ಮಾನ್ಸೂನ್ ಪ್ರಭಾವದಿಂದಾಗಿ ಉಂಟಾದ ಮಳೆಯಿಂದ ಸುಮಾರು 13 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು ರಾಜ್ಯದ ವಿವಿಧಡೆಯಲ್ಲಿ ಗಾಳಿ ಸಹಿತ ಮಳೆಯಿಂದಾಗಿ ಹಲವಾರು ಸ್ಥಳಗಳಲ್ಲಿ ಮರಗಳು  ಮತ್ತು ವಿದ್ಯುತ್ ಕಂಬಗಳು ಉರಳಿವೆ ಎಂದು ವರದಿಯಾಗಿದೆ. ಇದರಿಂದಾಗಿ ಬಹುತೇಕ ಸ್ಥಳಗಳಲ್ಲಿ ರಸ್ತೆಗಳ ಸಂಚಾರ ತೊಂದರೆಯುಂಟಾಯಿತು ಎಂದು ತಿಳಿದುಬಂದಿದೆ.


ಕೇರಳದಲ್ಲಿ ಪ್ರಮುಖವಾಗಿ  ಇಡುಕ್ಕಿ,ಕೊಚ್ಚಿ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಮಳೆಯುಂಟಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಆಸ್ತಿ ಪಾಸ್ತಿ ಮತ್ತು ಬೆಳೆಗಳಿಗೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ.



ಮಾನ್ಸೂನ್ ಈಗ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮತ್ತು ಈಶಾನ್ಯ ಪ್ರದೇಶದಲ್ಲಿ ಪ್ರಾರಂಭವಾಗಿದ್ದು    ಮಹಾರಾಷ್ಟ್ರದಿಂದ ಈಗ ಉತ್ತರದ ಭಾಗಕ್ಕೆ ವ್ಯಾಪಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.