ಮಧ್ಯಪ್ರದೇಶ: ಆಘಾತಕಾರಿ ಘಟನೆಯೊಂದರಲ್ಲಿ ಆನ್ಲೈನ್ ಗೇಮ್ ಆಡುವ ಚಟಕ್ಕೆ ಬಿದ್ದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಪ್ರದೇಶ(Madhya Pradesh)ದ ಛತ್ರಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಆನ್ಲೈನ್ ಗೇಮ್ ಆಡುವ ಚಟಕ್ಕೆ ಬಿದ್ದಿದ್ದ 13 ವರ್ಷದ ಬಾಲಕ 40 ಸಾವಿರ ರೂ. ಹಣ ಕಳೆದುಕೊಂಡಿದ್ದ. ಮೊಬೈಲ್ ಗೇಮ್ ಆಡುವ ಗೀಳಿಗೆ ಬಿದ್ದಿದ್ದ ಆತ ಮಾನಸಿಕ ಖಿನ್ನತೆಗೆ ತುತ್ತಾಗಿದ್ದ. ಹೀಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ತಿಳಿದುಬಂದಿದೆ.


ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಾಲಕ ಡೇತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಆನ್ಲೈನ್ ಗೇಮ್(Online Game)ಆಡಿ 40 ಸಾವಿರ ರೂ. ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ ಅಂತಾ ಪೊಲೀಸರು ಹೇಳಿದ್ದಾರೆ. ಪ್ಯಾಥಾಲಜಿ ಲ್ಯಾಬ್ ನಡೆಸುತ್ತಿದ್ದ ಮಾಲೀಕರ ಪುತ್ರ 6ನೇ ತರಗತಿಯಲ್ಲಿ ಓದುತ್ತಿದ್ದ. ಮೊಬೈಲ್ ನಲ್ಲಿ ಗೇಮ್ ಆಡುವ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ. ಇದರಿಂದ ಖಿನ್ನತೆಗೊಳಗಾಗಿ ಸೂಸೈಡ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ಆತ ಡೇತ್ ನೋಟ್ ಬರೆದಿಟ್ಟಿದ್ದಾನೆ ಅಂತಾ ಛತ್ರಪುರ ನಗರ ಪೊಲೀಸ್ ಉಪ ಅಧೀಕ್ಷಕ(DSP) ಶಶಾಂಕ್ ಜೈನ್ ಹೇಳಿದ್ದಾರೆ.


ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಆಗಸ್ಟ್ 31ರವರೆಗೆ ವಿಸ್ತರಣೆ


ತನ್ನ ಡೇತ್ ನೋಟ್(Death Note)ನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮೃತ ಬಾಲಕ ತನ್ನ ತಾಯಿಯ ಬಳಿ ಕ್ಷಮೆ ಕೇಳಿದ್ದಾನೆ. ‘ತಾಯಿಯ ಬ್ಯಾಂಕ್ ಖಾತೆಯ UPI ಐಡಿ ಬಳಸಿ 40 ಸಾವಿರ ರೂ. ಹಣ ತೆಗೆದುಕೊಂಡು ‘Free Fire’ ಎಂಬ ಗೇಮ್ ಆಡಿದ್ದೇನೆ. ನಾನು ನಿಮ್ಮ ಹಣವನ್ನು ಗೇಮ್ ಆಡಿ ವ್ಯರ್ಥ ಮಾಡಿದ್ದೇನೆ. ಇದರಿಂದ ನನಗೆ ಖಿನ್ನತೆಯುಂಟಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಅಮ್ಮಾ’  ಅಂತಾ ಉಲ್ಲೇಖಿಸಿದ್ದಾನೆ.


ಮೃತ ಬಾಲಕನ ತಾಯಿ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಕೂಡ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಾಗ ಮನೆಯಲ್ಲಿ ಯಾರೂ ಇರಲಿಲ್ಲ ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮ್, ಆನ್ಲೈನ್ ಗೇಮ್ ಅಂತಾ ಮಕ್ಕಳು ವಿಚಿತ್ರ ಗೀಳು ಬೆಳೆಸಿಕೊಳ್ಳುತ್ತಿದ್ದಾರೆ. ಹಣ ಕಳೆದುಕೊಳ್ಳುವ ಮೂಲಕ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಪೋಷಕರು ಆದಷ್ಟು ಮಕ್ಕಳ ಮೇಲೆ ನಿಗಾ ಇಡಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: LPG Gas Connection: ಅಡ್ರೆಸ್ ಪ್ರೂಫ್ ಇಲ್ಲದೆಯೇ ಸಿಗುತ್ತದೆ ಗ್ಯಾಸ್ ಕನೆಕ್ಷನ್ ಹೇಗೆ ತಿಳಿಯಿರಿ


ಈ ಘಟನೆಯಿಂದ ಸಣ್ಣಮಕ್ಕಳು ಹೇಗೆ ಮೊಬೈಲ್ ಫೋನ್ ಗಳಿಗೆ ಅಡಿಕ್ಟ್(Mobile Addiction)ಆಗಿ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ನೀಡುವ ವಿಚಾರದ ಬಗ್ಗೆ ಚಿಂತಿಸಬೇಕಾದ ಪ್ರಶ್ನೆ ಎದುರಾಗಿದೆ. ದಿನದ 24 ಗಂಟೆಯೂ ಮೊಬೈಲ್ ನಲ್ಲಿ ಗೇಮ್ ಆಡುವ ಚಟ ಅಂಟಿಸಿಕೊಂಡು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ಪೋಷಕರು ಎಚ್ಚರಿಕೆ ವಹಿಸುತ್ತಿಲ್ಲ.


 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ