ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಆಗಸ್ಟ್ 31ರವರೆಗೆ ವಿಸ್ತರಣೆ

International Flights Ban: ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು ಮತ್ತೊಮ್ಮೆ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧವನ್ನು ವಿಸ್ತರಿಸಿದೆ. 

Written by - Ranjitha R K | Last Updated : Jul 30, 2021, 04:26 PM IST
  • ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಮತ್ತೆ ನಿಷೇಧ
  • ಆಗಸ್ಟ್ 31ರವರೆಗೆ ವಿಮಾನ ಹಾರಾಟಕ್ಕೆ ನಿಷೇಧ
  • ಕರೋನಾ ಮೂರನೆಯ ಅಲೆಯ ಆತಂಕದ ಹಿನ್ನೆಲೆಯಲ್ಲಿ ನಿರ್ಧಾರ
ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಆಗಸ್ಟ್ 31ರವರೆಗೆ ವಿಸ್ತರಣೆ

ನವದೆಹಲಿ : International Flights Ban: ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು ಮತ್ತೊಮ್ಮೆ ಅಂತಾರಾಷ್ಟ್ರೀಯ ವಿಮಾನಗಳ ನಿಷೇಧವನ್ನು (Ban on international flights) ವಿಸ್ತರಿಸಿದೆ. ಆಗಸ್ಟ್ 31, 2021 ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಅಂದರೆ, ಆಗಸ್ಟ್ 31 ರವರೆಗೆ, ಭಾರತದಿಂದ ಯಾವುದೇ ವಿಮಾನ ವಿದೇಶಕ್ಕೆ ಹಾರಾಟ ನಡೆಸುವುದಿಲ್ಲ. ಅಥವಾ ವಿದೇಶದಿಂದ ಯಾವ ವಿಮಾಣವೂ ಭಾರತಕ್ಕೆ ಬರಲು ಅವಕಾಶವಿರುವುದಿಲ್ಲ.  ಡಿಜಿಸಿಎ  (DGCA) ಬಗ್ಗೆ ಇಂದು ಸುತ್ತೋಲೆ ಹೊರಡಿಸಿದೆ.

ನಿಷೇಧ ವಿಸ್ತರಣೆಯ ಹಿಂದಿನ ಕಾರಣ : 
ಕರೋನಾ ವೈರಸ್ (Corona virus) ಮೂರನೇ ಅಲೆಯ ಆತಂಕ ಮತ್ತು ಅನೇಕ ದೇಶಗಳಲ್ಲಿ ಡೆಲ್ಟಾ ರೂಪಾಂತರಗಳ ವೈರಸ್ ಪ್ರಕರಣಗಳು ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಡಿಜಿಸಿಎ (DGCA) ಈ ನಿರ್ಧಾರ ತೆಗೆದುಕೊಂಡಿದೆ. ಅಮೆರಿಕ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ ಡೆಲ್ಟಾ ರೂಪಾಂತರ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಿಷೇಧಿಸಿದೆ (ban on international flight). ಡಿಜಿಸಿಎ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈ ನಿಷೇಧವು ಅಂತರರಾಷ್ಟ್ರೀಯ ಸರಕು ವಿಮಾನಗಳು ಮತ್ತು ಡಿಜಿಸಿಎ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ. 

ಇದನ್ನೂ ಓದಿ : CBSE Board 12th Result 2021: CBSE ಮಂಡಳಿಯ 12ನೇ ತರಗತಿಯ ಫಲಿತಾಂಶ ಪ್ರಕಟ, ಈ ಡೈರೆಕ್ಟ್ ಲಿಂಕ್ ಬಳಸಿ ಫಲಿತಾಂಶ ಪರಿಶೀಲಿಸಿ

ಮತ್ತೆ ಮುಂದುವರೆದ ನಿಷೇಧ :
ಕರೋನಾ (COVID-19) ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ನಂತರ ಕೆಲ ಷರತ್ತುಗಳೊಂದಿಗೆ ಮೇ 2020ರಲ್ಲಿ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ಮುಂದುವರೆಸಲಾಗಿತ್ತು. ಈ ಮೊದಲು ಈ ನಿಷೇಧವನ್ನು ಜುಲೈ 31, 2021 ರವರೆಗೆ ಹೇರಲಾಗಿತ್ತು. 

ಏನಿದು ಏರ್ ಬಬಲ್  ಒಪ್ಪಂದ :
'ವಂದೇ ಭಾರತ್' ಮಿಷನ್ ಅಡಿಯಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ವಿಶೇಷ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುತ್ತಿತ್ತು. ಕೆಲವು ದೇಶಗಳೊಂದಿಗೆ ದ್ವಿಪಕ್ಷೀಯ 'ಏರ್ ಬಬಲ್' ಒಪ್ಪಂದವನ್ನು ಕೂಡಾ ಮಾಡಿಕೊಳ್ಳಲಾಗಿತ್ತು. ಯುಎಸ್, ಯುಕೆ, ಯುಎಇ, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ 27 ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದಕ್ಕೆ ಸಹಿ ಹಾಕಕಲಾಗಿತ್ತು. ಈ ಒಪ್ಪಂದದ ಪ್ರಕಾರ, ಉಭಯ ದೇಶಗಳ ವಿಮಾನಯಾನ ಸಂಸ್ಥೆಗಳ ವಿಶೇಷ ಅಂತರರಾಷ್ಟ್ರೀಯ ವಿಮಾನಗಳು (International filght) ಎರಡೂ ದೇಶಗಳ ವಾಯು ಪ್ರದೇಶಗಳಲ್ಲಿ  ಲು ಅನುಮತಿಸಲಾಗಿತ್ತು. ಆದರೆ ಕೋವಿಡ್‌ನ ಎರಡನೇ ಅಲೆಯ ಕಾರಣದಿಂದಾಗಿ ಅನೇಕ ದೇಶಗಳು ಇದರಿಂಲೂ ಹಿಂದೆ ಸರಿದಿತ್ತು.

ಇದನ್ನೂ ಓದಿ : Jammu Temples On High Alert! ಭಾರತವನ್ನು ಬೆಚ್ಚಿಬೀಳಿಸಲು ಭಯೋತ್ಪಾದಕರ ಸಂಚು, ದೇವಸ್ಥಾನಗಳ ಮೇಲೆ ದಾಳಿಯ ಸಾಧ್ಯತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News