Chandrayaan-3: 14ನೇ ಜುಲೈ 2023 ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಉಳಿಯಲಿದೆ- ಪ್ರಧಾನಿ ಮೋದಿ
Chandrayaan-3 Launch: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
ನವದೆಹಲಿ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ(ISRO) ಮಹತ್ವಾಕಾಂಕ್ಷೆಯ 3ನೇ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ಉಡಾವಣೆಗೆ ಕೆಲವು ಗಂಟೆಗಳ ಮೊದಲು ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿ ಟ್ವೀಟ್ ಮಾಡಿದ್ದಾರೆ.
‘ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಚಂದ್ರಯಾನ-3 ನಮ್ಮ 3ನೇ ಚಂದ್ರಯಾನ, ಅದರ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
Odisha Train Mishap: ಬಾಲಾಸೊರ್ ರೈಲು ದುರಂತ ಪ್ರಕರಣ, ರೇಲ್ವೆ ವಿಭಾಗದ 7 ಜನ ಸಿಬ್ಬಂದಿ ಅಮಾನತು
ತಮ್ಮ ಮತ್ತೊಂದು ಟ್ವೀಟ್‍ನಲ್ಲಿ ಚಂದ್ರಯಾನ-3ರ ಕೆಲವು ತಾಂತ್ರಿಕ ವಿವರಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ‘ಕಕ್ಷೆ ಏರಿಸುವ ಕುಶಲತೆಯ ನಂತರ ಚಂದ್ರಯಾನ-3 ಅನ್ನು ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುತ್ತದೆ. 300,000 ಕಿ.ಮೀ.ಗೂ ಹೆಚ್ಚು ಕ್ರಮಿಸುವ ಇದು ಮುಂಬರುವ ವಾರಗಳಲ್ಲಿ ಚಂದ್ರನನ್ನು ತಲುಪಲಿದೆ. ಆನ್‌ಬೋರ್ಡ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತದೆ ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.
ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…
‘ಚಂದ್ರಯಾನ-1ರವರೆಗೆ ಚಂದ್ರನು bone-dry, ಭೂವೈಜ್ಞಾನಿಕವಾಗಿ ನಿಷ್ಕ್ರಿಯ ಮತ್ತು ವಾಸಯೋಗ್ಯವಲ್ಲದ ಆಕಾಶಕಾಯ ಎಂದು ನಂಬಲಾಗಿತ್ತು. ಈಗ ಇದು ನೀರು ಮತ್ತು ಉಪ-ಮೇಲ್ಮೈ ಮಂಜುಗಡ್ಡೆಯ ಉಪಸ್ಥಿತಿಯೊಂದಿಗೆ ಕ್ರಿಯಾತ್ಮಕ ಮತ್ತು ಭೌಗೋಳಿಕವಾಗಿ ಸಕ್ರಿಯವಾಗಿರುವ ದೇಹವಾಗಿ ಕಂಡುಬರುತ್ತದೆ. ಬಹುಶಃ ಭವಿಷ್ಯದಲ್ಲಿ ಇಲ್ಲಿ ಸಂಭಾವ್ಯವಾಗಿ ವಾಸಿಸಬಹುದು!’ ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.