Chandrayaana-3: ದೇಶದ ಬಹುದೊಡ್ಡ ಕನಸು ಸಾಕಾರಗೊಳ್ಳುವ ಕ್ಷಣ ಬಂದಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಂದು ಮಧ್ಯಾಹ್ನ 2.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್ ಉಡಾವಣೆಯಾಗಲಿದೆ. ಇನ್ನು ಚಂದ್ರಯಾನ 3 ಮಿಷನ್’ಗೆ ಪುರುಷರಲ್ಲದೆ, ನಾರಿಶಕ್ತಿಯ ಬಲಕೂಡ ಇದ್ದು, ದೇಶದ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಮೈಲಿಗಲ್ಲು ಈ ಕ್ಷಣವಾಗಲಿದೆ.
ಇದನ್ನೂ ಓದಿ: Viral Video: ನಡುರಸ್ತೆಯಲ್ಲೇ ಜಡೆಜಗಳ; ಪರಸ್ಪರ ಹೊಡೆದಾಡಿಕೊಂಡ ಕಾಲೇಜು ಯುವತಿಯರು!
ಚಂದ್ರಯಾನ-3 ಮಿಷನ್ ಅನ್ನು ಪುರುಷರೇ ಮುನ್ನಡೆಸಿದರೂ, ಅದರ ಹಿಂದೆ ಸುಮಾರು 54 ಮಹಿಳೆಯರ ಪಾತ್ರ ಪ್ರಮುಖವಾಗಿದೆ, ಅಷ್ಟೇ ಅಲ್ಲದೆ, ಚಂದ್ರಯಾನ-2 ಮಿಷನ್ ಗಿಂತ ಭಿನ್ನವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಚಂದ್ರಯಾನ-3 ಮಿಷನ್ ನಲ್ಲಿ ಸುಮಾರು 54 ಮಹಿಳಾ ಎಂಜಿನಿಯರ್‌ಗಳು/ವಿಜ್ಞಾನಿಗಳು ನೇರವಾಗಿ ಕೆಲಸ ಮಾಡಿದ್ದಾರೆ. ವಿವಿಧ ಕೇಂದ್ರಗಳಲ್ಲಿ, ವಿವಿಧ ವ್ಯವಸ್ಥೆಗಳ ಸಹಾಯಕ, ಉಪ ಯೋಜನಾ ನಿರ್ದೇಶಕರು ಮತ್ತು ಯೋಜನಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗಿ, ರೋವರ್ ಕೆಲವು ರಾಸಾಯನಿಕ ಪ್ರಯೋಗಗಳನ್ನು ಮಾಡಲಿದೆ. ಆದರೆ ಚಂದ್ರಯಾನ-2 ಮತ್ತು ಚಂದ್ರಯಾನ-3 ಎರಡು ಕಾರ್ಯಾಚರಣೆಗಳ ನಡುವೆ ಲ್ಯಾಂಡರ್ ವಿಶೇಷಣಗಳು, ಪೇಲೋಡ್ ಪ್ರಯೋಗಗಳು ಮತ್ತು ಇತರವುಗಳಲ್ಲಿ ವ್ಯತ್ಯಾಸಗಳಿವೆ ಎಂದು ತಿಳಿದುಬಂದಿದೆ.
ಇನ್ನು ಚಂದ್ರಯಾನ-2 ಮಿಷನ್ ನಲ್ಲಿ ಇಬ್ಬರು ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಒಬ್ಬರು ಯೋಜನಾ ನಿರ್ದೇಶಕಿ ಎಂ.ವನಿತಾ ಮತ್ತೊಬ್ಬರು ಮಿಷನ್ ನಿರ್ದೇಶಕಿ ರಿತು ಕರಿದಾಲ್ ಶ್ರೀವಾಸ್ತವ. ಇನ್ನು ಈ ತಂಡದ ಮುಂದಾತ್ವವನ್ನು ಪುರುಷರೇ ತೆಗೆದುಕೊಂಡಿದ್ದಾರೆ. ಮಿಷನ್ ನಿರ್ದೇಶಕ ಮೋಹನ್ ಕುಮಾರ್, ರಾಕೆಟ್ ನಿರ್ದೇಶಕ ಬಿಜು ಸಿ. ಥಾಮಸ್ ಮತ್ತು ಬಾಹ್ಯಾಕಾಶ ನೌಕೆಯ ನಿರ್ದೇಶಕರು ಡಾ.ಪಿ.ವೀರಮುತ್ತುವೆಲ್ ಆಗಿದ್ದಾರೆ.
ಶ್ರೀಹರಿಕೋಟಾ ರಾಕೆಟ್ ಫೋರ್ಟ್ ಅಧಿಕಾರಿ ಮತ್ತು ರಾಕೆಟ್ ಉಡಾವಣೆ ಸಮಯದಲ್ಲಿ ವ್ಯಾಖ್ಯಾನಕಾರರಾಗಿ ಪಿ.ಮಾಧುರಿ ಕೆಲಸ ಮಾಡಲಿದ್ದು, ಇವರು ಮಾತ್ರ ಜನರಿಗೆ ಕಾಣಿಸುವ ಏಕೈಕ ISRO ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: Bank Recruitment: ಬ್ಯಾಂಕ್ ನೇಮಕಾತಿ, 414 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ರಾಕೆಟ್ LVM3 ಮಧ್ಯಾಹ್ನ 2.35 ಕ್ಕೆ ಉಡಾವಣೆಯಾಗಲಿದೆ. ಶ್ರೀಹರಿಕೋಟಾ ರಾಕೆಟ್ ಫೋರ್ಟ್ ನಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯುತ್ತದೆ. ಬಾಹ್ಯಾಕಾಶ ನೌಕೆಯು ಪ್ರತಿಯಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ