ಉತ್ತರ ಪ್ರದೇಶ: ಹರಿದ್ವಾರ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಕೋವಿಡ್ -19 ಪ್ರಕರಣಗಳು ಕಂಡು ಬಂದಿವೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ. ಈ ಮೇಳದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ಸಧ್ಯ ಇದು ಕರೋನ ಪ್ರಕರಣಗಳ ತ್ವರಿತ ಏರಿಕೆಗೆ ಮತ್ತಷ್ಟು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಕಳೆದು ಐದು ದಿನಗಳಲ್ಲಿ ಹರಿದ್ವಾರದಿಂದ ದೇವ್‌ಪ್ರಯಾಗ್‌ವರೆಗೆ ಕುಂಭ ಮೇಳ(Kumbh Mela) ವಿಸ್ತರಿಸಿದೆ ಅದಕ್ಕಾಗಿ ನಾವು ಆರ್‌ಟಿ-ಪಿಸಿಆರ್ ಮತ್ತು ರ್ಯಾಪಿಡ್ ಆಂಟಿಜೆನ್ ಟೆಸ್ಟ್ ವರದಿಗಳನ್ನ ಮಾಡುತ್ತಿದ್ದೇವೆ ಎಂದು  ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭು ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ : PPF: ಪ್ರತಿ ತಿಂಗಳು 7500 ರೂಪಾಯಿ ಹೂಡಿಕೆ ಮಾಡಿ ನಿವೃತ್ತಿಯ ವೇಳೆಗೆ ಮಿಲಿಯನೇರ್ ಆಗಿ


ಇನ್ನು ಹೆಚ್ಚಿನ ಆರ್‌ಟಿ-ಪಿಸಿಆರ್ ಪರೀಕ್ಷಾ(RT-PCR Test) ವರದಿಗಳಿಗಾಗಿ ಕಾಯುತ್ತಿದ್ದೇವೆ ಮತ್ತು ಕುಂಭಮೇಳ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ 2,000 ಕ್ಕೆ ಏರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಹರಿದ್ವಾರ ಈ ಕುಂಭಮೇಳವು ಒಟ್ಟು 670 ಹೆಕ್ಟೇರ್ ಪ್ರದೇಶ ಹೊಂದಿದೆ. ಅಲ್ಲದೆ, ಡೆಹ್ರಾಡೂನ್(Dehradun) ಜಿಲ್ಲೆ ಟೆಹ್ರಿ ಮತ್ತು ವೃಷಿಕೇಶ ಪ್ರದೇಶಗಲ್ಲಿ ಕೂಡ ವ್ಯಾಪಿಸಿದೆ.


ಇದನ್ನೂ ಓದಿ : ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?


ಏಪ್ರಿಲ್ 12 ರಂದು ಸೋಮವತಿ ಅಮಾವಾಸ್ಯ ಮತ್ತು ಏಪ್ರಿಲ್ 14 ರಂದು ನಡೆದ ಮೆಶ ಸಂಕ್ರಾಂತಿಯ ಸಂದರ್ಭದಲ್ಲಿ ನಡೆದ ಕೊನೆಯ ಎರಡು ಪುಣ್ಯ ಸ್ನಾನದಲ್ಲಿ  (Shahi Bath) ಒಟ್ಟು 48.51 ಲಕ್ಷ ಜನ ಭಾಗವಹಿಸಿದ್ದಾರೆ. ಬಹುಪಾಲು ಜನರು ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ ಹೀಗಗಿ ಇವರೆಲ್ಲ ಕೋವಿಡ್ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ.


ಇದನ್ನೂ ಓದಿ : Weekend Curfew in Delhi: ವೀಕ್-ಎಂಡ್ ಕರ್ಫ್ಯೂ ಮೊರೆಹೋದ ರಾಷ್ಟ್ರ ರಾಜಧಾನಿ


13 ಅಖಾರರು ಸೂರ್ಯಾಸ್ತದ ಮೊದಲು ನಿಗದಿಪಡಿಸಿದ ಸಮಯದ ಸ್ಲಾಟ್‌ಗಳಿಗೆ ಅನುಗುಣವಾಗಿ ಹರ್ ಕಿ ಪೈರಿಯಲ್ಲಿ ಪುಣ್ಯ ಸ್ನಾನ ಮಾಡಬೇಕಾಗಿರುವುದರಿಂದ ಸಾಲಿನಲ್ಲಿ ಬರುವ ಮೊದಲು ಅಲ್ಲಿ ಜಾಗ ಕಾಲಿ ಇದೆಯಾ ಇಲ್ಲವೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ(Police)ರು ಮತ್ತು ಅರೆಸೈನಿಕ ಸಿಬ್ಬಂದಿಯನ್ನ ನೇಮಿಸಲಾಗಿತ್ತು. ಹೆಚ್ಚಿನ ಜನ ಸೇರಿದ ಕಾರಣ ಜನರಿಂದ ನೂಕುನುಗ್ಗಲು ಶುರುವಾಯಿತು. ಇದರಿಂದ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ದೂರ ಸರಿದ ಕಾರಣ ಅವ್ಯವಸ್ಥೆಯನ್ನು ತಡೆಯಲು ಆಗಲಿಲ್ಲ.


ಇದನ್ನೂ ಓದಿ : Covid-19 New Symptoms In India: ದೇಶಾದ್ಯಂತ ಕರೋನಾ ಅಬ್ಬರ, ಇವು ಸೋಂಕಿನ ಹೊಸ ಲಕ್ಷಣಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.