Dies after eating chicken shawarma : ಮುಂಬೈನಲ್ಲಿ  ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ,ಅವನ ಸ್ಥಿತಿ ಹದೆಗೆಟ್ಟಿತು ಆದರೆ ಇದರಿಂದ ಗುಣಮುಖರಾಗದೇ ಮೇ 8 ರಂದು ಆ ವ್ಯಕ್ತಿ ಮೃತ ಪಟ್ಟಿದ್ದಾನೆ. 


COMMERCIAL BREAK
SCROLL TO CONTINUE READING

ಆಹಾರ ಮಳಿಗೆಗಳ ಮಾಲೀಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಜೀವಕ್ಕೆ ಅಪಾಯ ಮತ್ತು ಹಾನಿಕಾರಕ ಆಹಾರ ಮಾರಾಟ  ಆರೋಪದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. 


ಇದನ್ನು ಓದಿ : KSEAB Karnataka SSLC Results 2024 Live Updates: SSLC ರಿಸಲ್ಟ್ ಗೆ ಶುರುವಾಯ್ತು ಕೌಂಟ್ ಡೌನ್


ಮುಂಬೈನಲ್ಲಿ ಚಿಕನ್ ಶಾವರ್ಮಾ ತಿಂದು ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಫುಡ್ ಸ್ಟಾಲ್ ಮಾಲೀಕರನ್ನು ಬಂಧಿಸಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.  19 ವರ್ಷದ ಪ್ರಥಮೇಶ್ ಭೋಕ್ಸೆ, ಮೇ 3 ರಂದು ಟ್ರಾಂಬೆ ಪ್ರದೇಶದ ಸ್ಥಳೀಯ ಸ್ಟಾಲ್‌ನಿಂದ ಊಟವನ್ನು ಖರೀದಿಸಿದ್ದರು.


ತಿಂದ ಮಾರನೇ ದಿನ  ಪ್ರಥಮೇಶ್ ಅವರು ತೀವ್ರವಾದ ಹೊಟ್ಟೆ ನೋವು ಮತ್ತು ವಾಂತಿಯನ್ನು ಅನುಭವಿಸಿದರು, ತಕ್ಷಣವೇ ಹತ್ತಿರದ ಪುರಸಭೆಯ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಕೀಯ ಚಿಕಿತ್ಸೆ ಪಡೆದರೂ ಅವರ ಸ್ಥಿತಿ ಸುಧಾರಿಸಲಿಲ್ಲ, ಮೇ 5 ರಂದು ಅವರ ಕುಟುಂಬ ಸದಸ್ಯರು  ಕೆಇಎಂ ಆಸ್ಪತ್ರೆಗೆ ವರ್ಗಾಯಿಸಿದರು.


ಆರಂಭದಲ್ಲಿ ಕೆಇಎಂ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ ಬಳಿಕ ಪ್ರಥಮೇಶ್ ಅವರನ್ನು ಮನೆಗೆ ಕಳುಹಿಸಲಾಗಿತ್ತು. ದುರದೃಷ್ಟವಶಾತ್, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು, ಮೇ 7 ರಂದು ಸಂಜೆ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಬಾರಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು.


ಕೆಇಎಂ ಆಸ್ಪತ್ರೆಯ ಅಧಿಕಾರಿಗಳು ಕಾನೂನು ಕ್ರಮವನ್ನು ಪ್ರಾರಂಭಿಸಲು ಪೊಲೀಸರನ್ನು ಸಂಪರ್ಕಿಸಿ, ಅವರ ಮೇಲೆ ಆಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಮತ್ತು ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯದ ಮಾರಾಟ) ಒಳಗೊಂಡು, ಎಫ್ ಐ ಆರ್  ದಾಖಲಿಸಲಾಯಿತು. 


ಇದನ್ನು ಓದಿ : ಶತಮಾನದ ಬಳಿಕ ಅಕ್ಷಯ ತೃತೀಯದಂದು ಅದ್ಭುತ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಸುವರ್ಣ ಯುಗ


 ಮೇ 8, ಸೋಮವಾರದಂದು ಪ್ರಥಮೇಶ್ ಭೋಕ್ಸೆ ನಿಧನರಾದರು. ಅವರ ಸಾವಿನ ನಂತರ, ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಅಪರಾಧಿ ನರಹತ್ಯೆ ಸೇರಿದಂತೆ ಆರೋಪದಡಿಯಲ್ಲಿ ಪೊಲೀಸರು ಆಹಾರ ಮಳಿಗೆಯ ನಿರ್ವಾಹಕರಾದ ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಅವರನ್ನು ಬಂಧಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.