ಸುಕ್ಮಾ: ಶುಕ್ರವಾರದಂದು ಛತ್ತೀಸ್ ಘಡ್ ಸುಕ್ಮಾ ಜಿಲ್ಲೆಯಲ್ಲಿ  ಭದ್ರತಾ ಪಡೆಗಳು ಎನ್ ಕೌಂಟರ್ ಮೂಲಕ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರನ್ನು ಹತ್ಯೆಗೈದಿದ್ದಾರೆ.


COMMERCIAL BREAK
SCROLL TO CONTINUE READING

ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಮಹಿಳೆಯು ಕೂಡ ಮೃತಪಟ್ಟಿದ್ದು. ಅದರಲ್ಲಿ ಮತ್ತೊಂದು ನಕ್ಸಲ ದೇಹವನ್ನು ಆನಂತರ ವಶಪಡೆಯಲಾಗಿದೆ ಎಂದು ನಕ್ಸಲ ವಿರೋಧಿ ಕಾರ್ಯಾಚರಣೆಯ ವಿಶೇಷ ನಿರ್ದೇಶಕ ಜನರಲ್ ಆಫ್ ಪೋಲಿಸ್ (SDGP) ಡಿಎಂ ಅವಸ್ತಿ ಎಎನ್ಐಗೆ ತಿಳಿಸಿದ್ದಾರೆ.


ಮಾಧ್ಯಮ ವರದಿಗಳ ಪ್ರಕಾರ, ಜಿಲ್ಲಾ ಮೀಸಲು ಪಡೆ (ಡಿಆರ್ಜಿ),ಎಸ್ಟಿಎಫ್ ಮತ್ತು ರೆಸೊಲ್ಯೂಟ್ ಆಕ್ಷನ್ ಕಮಾಂಡೋ ಬಟಾಲಿಯನ್, ಸಿಆರ್ಪಿಎಫ್ ಪಡೆಗಳು ಸುಕ್ಮಾದಲ್ಲಿ ಕಾರ್ಯಾಚರಣೆಯನ್ನು ಕೈಕೊಂಡಿದ್ದವು ಎಂದು ತಿಳಿದು ಬಂದಿದೆ.


ಈ ಘಟನೆಯು ಛತ್ತೀಸ್ ಘಡ್ ನ  ಬಿಜಾಪುರ ಜಿಲ್ಲೆಯ ಪೆಂಟಾ ಹಳ್ಳಿಯ ಬಳಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಏಳು ನಕ್ಸಲರನ್ನು ಗುಂಡಿಕ್ಕಿ ಕೊಂದ ದಿನದ ಬಳಿಕ ನಡೆದಿದೆ.