ನವದೆಹಲಿ: ಇಬ್ಬರು ಪೊಲೀಸ್ ಅಧಿಕಾರಿಗಳು ಪರಸ್ಪರ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ರಾಂಚಿಯಲ್ಲಿ ಸೋಮವಾರ ನಡೆದಿದೆ. ಇಂದು ಬೆಳಗ್ಗೆ 6.30 ಕ್ಕೆ ಖೇಲ್‌ಗಾಂವ್‌ನ ಮೆಗಾ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಛತ್ತೀಸ್‌ಗಡದ ಸಶಸ್ತ್ರ ಪಡೆಗಳ 4 ನೇ ಬೆಟಾಲಿಯನ್ ಬಿ ಕಂಪನಿಗೆ ಸೇರಿದವರಾಗಿದ್ದು, ಜಾರ್ಖಂಡ್‌ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದರು. ದಾಳಿಯ ಸಮಯದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇಬ್ಬರೂ ಪೊಲೀಸರು ಪರಸ್ಪರರ ಮೇಲೆ ಗುಂಡು ಹಾರಿಸಿಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.


ಪರಸ್ಪರ ಗುಂಡು ಹಾರಿಸಿಕೊಂಡು ಹತರಾದ ಯೋಧನನ್ನು ವಿಕ್ರಮ್ ರಾಜ್ವಾಡೆ ಎಂದೂ ಮತ್ತು ಕಂಪನಿಯ ಕಮಾಂಡರ್ ಅನ್ನು ಮೇಳ ರಾಮ್ ಕುರ್ರೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.


ವಾರದ ಹಿಂದೆ ಕೂಡ ಛತ್ತೀಸ್‌ಗಡದಿಂದ ಇದೇ ರೀತಿಯ ಘಟನೆ ವರದಿಯಾಗಿತ್ತು. ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ಪೋಸ್ಟ್ ಮಾಡಲಾದ ಆರು ಐಟಿಬಿಪಿ ಜವಾನರು ಈ ಘಟನೆಯಲ್ಲಿ ಸಾವನ್ನಪ್ಪಿದರು ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.


 ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP​)  ಸಿಬ್ಬಂದಿ ತನ್ನ ಸಹೋದ್ಯೋಗಿಗಳಿಗೆ ತನ್ನ ಸೇವಾ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿದ್ದು, ಅವರಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದರು. ಬಳಿಕ ಆತ ಸ್ವತಃ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದರು. ಕಾನ್‌ಸ್ಟೆಬಲ್ ಮಸೂದುಲ್ ರಹಮಾನ್ ಕೋಪದಿಂದ ಹೀಗೆ ಮಾಡಿದ್ದರು ಎಂದು ಹೇಳಲಾಗಿತ್ತು. ಪರಸ್ಪರರ ನಡುವಿನ ವಿವಾದವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿತ್ತು.