2002ರ ಗುಜರಾತ್ ಗಲಭೆ: ನಾನಾವತಿ ಆಯೋಗ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?
2002 ರ ಗುಜರಾತ್ ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗವು ತನ್ನ ಅಂತಿಮ ವರದಿಯನ್ನು ಇಂದು ಗುಜರಾತ್ ವಿಧಾನಸಭೆಯಲ್ಲಿ ಮಂಡಿಸಿದೆ. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಅಹಮದಾಬಾದ್: 2002 ರ ಗುಜರಾತ್ ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗವು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ಆಯೋಗವು ಕ್ಲೀನ್ ಚಿಟ್ ನೀಡಿದೆ.
2002 ರ ಗುಜರಾತ್ ಗಲಭೆ(2002 Gujarat riots)ಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗವು ಇಂದು ಗುಜರಾತ್ ವಿಧಾನಸಭೆಯಲ್ಲಿ ತನ್ನ ಅಂತಿಮ ವರದಿಯನ್ನು ಮಂಡಿಸಿದೆ. ಗಲಭೆಗಳು 'ಯೋಜಿತ' ಅಲ್ಲ ಎಂದು ನಾನಾವತಿ ವರದಿಯಲ್ಲಿ ತಿಳಿಸಲಾಗಿದ್ದು, ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಎಲ್ಲ ರಾಜಕಾರಣಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ, ವರದಿಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳ ಪಾತ್ರವನ್ನು ಪ್ರಶ್ನಿಸಲಾಗಿದೆ. ಆಗಿನ ಮೂವರು ಐಪಿಎಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ಸಂಜೀವ್ ಭಟ್ ಮತ್ತು ರಾಹುಲ್ ಶರ್ಮಾ ಅವರ ಪಾತ್ರ ವರದಿಯಲ್ಲಿ ಬಹಿರಂಗವಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಪೊಲೀಸರ ಮೇಲಿದೆ. ಆದರೆ ಆ ಸಮಯದಲ್ಲಿ ಪೊಲೀಸ್ ಬಲದ ಕೊರತೆಯಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸಮಾಜದ ದೌರ್ಬಲ್ಯವನ್ನು ತೆಗೆದುಹಾಕುವಂತೆ ಸರ್ಕಾರವನ್ನು ಕೋರಲಾಗಿದೆ. ಇದಕ್ಕಾಗಿ ಪೊಲೀಸರ ಸಂಖ್ಯೆಯೂ ಹೆಚ್ಚಬೇಕು. ಪೊಲೀಸ್ ಬಲವನ್ನು ಕಾಯ್ದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವುದನ್ನು ವರದಿಯಲ್ಲಿ ತಿಳಿಸಿರುವ ಆಯೋಗ, ಈ ವರದಿಯಲ್ಲಿ ಐಪಿಎಸ್ ಸಂಜೀವ್ ಭಟ್ ಅವರ ಮಾತನ್ನು ತಿರಸ್ಕರಿಸಲಾಗಿದೆ. ಸಂಜೀವ್ ಭಟ್ ಸುಳ್ಳು ಹೇಳಿದ್ದಾರೆ ಎಂದು ಉಲ್ಲೇಖಿಸಿದೆ.