ದೇಶದ 23 ಏಮ್ಸ್ ಆಸ್ಪತ್ರೆಗಳಿಗೆ ಸ್ಮಾರಕ, ಮಹಾನ್ ವ್ಯಕ್ತಿಗಳ ಹೆಸರು
ಕೇಂದ್ರ ಸರ್ಕಾರವು ತನ್ನ ಇತ್ತೀಚಿನ ಪ್ರಸ್ತಾಪದ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಪ್ರಾದೇಶಿಕ ವೀರರು, ಐತಿಹಾಸಿಕ ಘಟನೆಗಳು, ಗಮನಾರ್ಹ ಸ್ಮಾರಕಗಳ ಗೌರವಾರ್ಥವಾಗಿ ದೇಶಾದ್ಯಂತ 23 ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಅನ್ನು ಮರುನಾಮಕರಣ ಮಾಡಲು ಯೋಜಿಸುತ್ತಿದೆ.
ನವದೆಹಲಿ: ಕೇಂದ್ರ ಸರ್ಕಾರವು ತನ್ನ ಇತ್ತೀಚಿನ ಪ್ರಸ್ತಾಪದ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಪ್ರಾದೇಶಿಕ ವೀರರು, ಐತಿಹಾಸಿಕ ಘಟನೆಗಳು, ಗಮನಾರ್ಹ ಸ್ಮಾರಕಗಳ ಗೌರವಾರ್ಥವಾಗಿ ದೇಶಾದ್ಯಂತ 23 ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಗಳನ್ನು ಮರುನಾಮಕರಣ ಮಾಡಲು ಯೋಜಿಸುತ್ತಿದೆ.
ಈ ಪ್ರಸ್ತಾವನೆಯನ್ನು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಅನುಮೋದನೆ ಪಡೆಯುವ ಅಂತಿಮ ಹಂತದಲ್ಲಿದೆ. ಪ್ರಸ್ತಾವನೆಗೆ ಒಪ್ಪಿಗೆ ದೊರೆತ ನಂತರ, ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಗೊಂಡಿರುವ ಎಲ್ಲಾ 23 ಏಮ್ಸ್‌ಗಳನ್ನು ಮರುನಾಮಕರಣ ಮಾಡಲಾಗುತ್ತದೆ.
ಏಮ್ಸ್ ಆಸ್ಪತ್ರೆಗಳು ತಮ್ಮ ಸಲಹೆಗಳನ್ನು ಸಚಿವಾಲಯಕ್ಕೂ ಕಳುಹಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಕೇಳಿದಾಗ ಹೆಚ್ಚಿನ ಸಂಸ್ಥೆಗಳು ಮೂರು-ನಾಲ್ಕು ಹೆಸರುಗಳನ್ನು ಸೂಚಿಸುವ ಮೂಲಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿವೆ ಎನ್ನಲಾಗಿದೆ.
ಇದನ್ನೂ ಓದಿ : ಪ್ರೇಯಸಿ ಮೀಟ್‌ಗೆ ಭೂಗತ ಪಾತಕಿ ಬಚ್ಚಾಖಾನ್‌ಗೆ ಅನುವು ಮಾಡಿಕೊಟ್ಟಿದ್ದೇ ಪೊಲೀಸರು!
'ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ವಿಷಯದಲ್ಲಿ ಅವರಿಂದ ಸಲಹೆಗಳನ್ನು ಕೋರಿದ ನಂತರ 23 ಏಮ್ಸ್‌ಗಳಲ್ಲಿ ಬಹುತೇಕ ಸಂಸ್ಥೆಗಳು ಹೆಸರುಗಳ ಪಟ್ಟಿಯನ್ನು ಸಲ್ಲಿಸಿವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿಗೆ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಪಡೆಯಲು ಬಯಸುವ ರೋಗಿಗಳಿಗೆ ಏಮ್ಸ್ ಪ್ರಥಮ ಆಧ್ಯತೆಯಾಗಿದೆ.ಸಾಗರೋತ್ತರ ರೋಗಿಗಳು ಸಹ ಏಮ್ಸ್ ನ ಸೇವೆಗಳನ್ನು ಬಯಸುತ್ತಾರೆ, ಇದು ಬಹುತೇಕ ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚು ಅಗ್ಗವಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ.
2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರು ಹೊಸ ಏಮ್ಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.ಪಾಟ್ನಾ, ರಾಯ್‌ಪುರ್, ಭೋಪಾಲ್, ಭುವನೇಶ್ವರ್, ಜೋಧ್‌ಪುರ ಮತ್ತು ಋಷಿಕೇಶ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ : Today Vegetable Price: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಹೀಗಿದೆ
ಈ ಸಂಸ್ಥೆಗಳು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಸಹ ಒದಗಿಸುತ್ತವೆ. ವರದಿಯ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಕಾರ್ಯಾರಂಭ ಮಾಡಿರುವ 12 ಸಂಸ್ಥೆಗಳಲ್ಲಿ ಎಂಬಿಬಿಎಸ್ ತರಗತಿಗಳು ಸಕ್ರಿಯವಾಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.