ಇಂದೋರ್: ಮಧ್ಯಪ್ರದೇಶ(Madhya Pradesh)ದ ಇಂದೋರ್ ಜಿಲ್ಲೆಯಲ್ಲಿ 75 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆಕೆಯ ಮೊಮ್ಮಗ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 500 ಗ್ರಾಂ ತೂಕದ ಬೆಳ್ಳಿಯ ಉಂಗುರಗಳಿಗಾಗಿ ಆರೋಪಿಗಳು ವೃದ್ಧೆಯನ್ನು ಕೊಂದು ಆಕೆಯ ಎರಡೂ ಕಾಲುಗಳನ್ನು ಕತ್ತರಿಸಿ ಆಭರಣಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಳ್ಳಿ ಉಂಗುರ ನೀಡಲು ಅಜ್ಜಿಯ ನಕಾರ   


ಇಂದೋರ್‌(Indore)ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಚೋಟಿ ಖುದೈಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ರಾಜೇಶ್ ಬಗ್ರಿ ಸಂಬಂಧಿಕರ ಮಗನ ಮದುವೆಗೆ ಆರ್ಥಿಕ ಸಹಾಯಕ್ಕಾಗಿ ತನ್ನ ಅಜ್ಜಿ ಜಮುನಾ ಅವರಿಂದ ಬೆಳ್ಳಿ ಉಂಗುರಗಳನ್ನು ಕೇಳಿದ್ದಾನೆ. ಆದರೆ ಅಜ್ಜಿ ತನ್ನ ಕಾಲುಗಳಲ್ಲಿ ಧರಿಸಿದ್ದ ಎರಡು ಉಂಗುರಗಳನ್ನು ಕೊಡಲು ನಿರಾಕಿಸಿದ್ದಳೆಂದು ಎಸ್‌ಪಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.


ಇದನ್ನೂ ಓದಿ: SBI ಗ್ರಾಹಕರಿಗೆ ಸಿಹಿ ಸುದ್ದಿ : ಎಸ್‌ಬಿಐ FD ಮೇಲಿನ ಬಡ್ಡಿದರ ಹೆಚ್ಚಳ - ಇಲ್ಲಿದೆ ಹೊಸ ದರ 


ಸ್ನೇಹಿತನೊಂದಿಗೆ ಸೇರಿ ಅಜ್ಜಿ ಕೊಂದ ಮೊಮ್ಮಗ


ಅಜ್ಜಿ(Grandmother)ತನ್ನ ಬಳಿಯಿದ್ದ ಉಂಗುರಗಳನ್ನು ಕೊಡಲು ನಿರಾಕರಿಸಿದ್ದರಿಂದ ಮೊಮ್ಮಗ ತನ್ನ 19 ವರ್ಷದ ಸ್ನೇಹಿತ ವಿಜಯ್ ಧೋಲಿಯೊಂದಿಗೆ ಸೇರಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಫೆಬ್ರವರಿ 11ರಂದು ವೃದ್ಧೆಯ ಆಹಾರದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಲಾಗಿತ್ತು. ಊಟದ ನಂತರ ಅಜ್ಜಿ ಪ್ರಜ್ಞಾಹೀನಳಾದ ತಕ್ಷಣ ಆರೋಪಿಗಳು ಆಕೆಯ ಕತ್ತು ಹಿಸುಕಿ ಕೊಂದು ಎರಡೂ ಕಾಲುಗಳನ್ನು ಕೊಡಲಿಯಿಂದ ಕತ್ತರಿಸಿ ಬೆಳ್ಳಿಯ ಉಂಗುರಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತುಂಡರಿಸಿದ ಕಾಲುಗಳ ಸಮೇತ ವೃದ್ಧೆಯ ಶವವನ್ನು ಆರೋಪಿಗಳು ಆಕೆಯ ಮನೆಯ ಸಮೀಪವಿರುವ ದನದ ಸಗಣಿ ಗ್ಯಾಸ್ ಪ್ಲಾಂಟ್‌ನಲ್ಲಿ ಬಚ್ಚಿಟ್ಟಿದ್ದರಂತೆ.


ಆರೋಪಿಗಳಿಬ್ಬರನ್ನೂ ಬಂಧಿಸಿದ ಖಾಕಿಪಡೆ


ವೃದ್ಧೆಯ ಮೊಮ್ಮಗ ಎರಡೂ ಬೆಳ್ಳಿಯ ಉಂಗುರಗಳನ್ನು ಪರಿಚಿತ ವ್ಯಕ್ತಿಯೊಬ್ಬನ ಬಳಿ ಅಡಮಾನವಿಟ್ಟು 6,000 ರೂ. ಪಡೆದುಕೊಂಡಿದ್ದ. ಅಜ್ಜಿಯ ಮೊಮ್ಮಗ ಮತ್ತು ಆತನ ಸ್ನೇಹಿತ ಧೋಲಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು(Madhya Pradesh Police) ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಇದನ್ನೂ ಓದಿ: ಕಸ್ಟಮರ್ ಕೇರ್ ಸಪೋರ್ಟ್ ಹೆಸರಿನಲ್ಲಿ ವಂಚನೆ.. ಎಂಟು ಬ್ಯಾಂಕ್ ಖಾತೆಗಳು.. ₹82 ಲಕ್ಷ ಹಣ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.