WATCH:ನೋಡ ನೋಡುತ್ತಿದ್ದಂತೆ ಜಿಂಕೆಯನ್ನು ಬೇಟೆಯಾಡಿದ ಹದ್ದು.. ವಿಡಿಯೋ ವೈರಲ್

Eagle hunted the deer: ಹದ್ದು ಆಕಾಶದಿಂದ ಹಾರಿ ಬಂದು ಕೆಳಗಿನ ಗದ್ದೆಯಲ್ಲಿ ನಡೆಯುತ್ತಿದ್ದ ಜಿಂಕೆಯನ್ನು ತನ್ನ ಪಂಜದಲ್ಲಿ ಹಿಡಿಯುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.  

Written by - Chetana Devarmani | Last Updated : Feb 17, 2022, 03:16 PM IST
  • ನೋಡ ನೋಡುತ್ತಿದ್ದಂತೆ ಜಿಂಕೆಯನ್ನು ಬೇಟೆಯಾಡಿದ ಹದ್ದು
  • ವಿಡಿಯೋ ನೋಡಿಆಶ್ಚರ್ಯಚಕಿತರಾದ ಜನರು
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
WATCH:ನೋಡ ನೋಡುತ್ತಿದ್ದಂತೆ ಜಿಂಕೆಯನ್ನು ಬೇಟೆಯಾಡಿದ ಹದ್ದು.. ವಿಡಿಯೋ ವೈರಲ್  title=
ವಿಡಿಯೋ ವೈರಲ್

ಹದ್ದು ಬೇಟೆಯಾಡುವ (Hunt) ಪಕ್ಷಿ. ಕೆಲವೊಮ್ಮೆ, ಅದು ತನಗಿಂತ ಅನೇಕ ಪಟ್ಟು ಭಾರವಾದ ಪ್ರಾಣಿಯನ್ನು ಬೇಟೆಯಾಡುತ್ತದೆ. ಮೋಡಗಳ ಎದೆಯನ್ನು ಸೀಳಿ ನೆಲಕ್ಕೆ ಬಂದು ತನ್ನ ಬೇಟೆಯನ್ನು ಎತ್ತಿಕೊಂಡು ಹಾರಿಹೋಗುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. 

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ (viral Video) ಆಗುತ್ತಿದೆ. ಈ ವಿಡಿಯೋದಲ್ಲಿ ಹದ್ದು ಭಾರೀ ಗಾತ್ರದ ಜಿಂಕೆಯನ್ನು ಬೇಟೆಯಾಡುತ್ತಿರುವ ದೃಶ್ಯವಿದೆ. ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಿ.

ಇದನ್ನೂ ಓದಿ:PF ಖಾತೆದಾರರಿಗೆ EPFO ನಿಂದ ಎಚ್ಚರಿಕೆ ಘಂಟೆ!

ಆಕಾಶದಿಂದ ಹದ್ದು (Eagle) ಹಾರಿ ಬಂದು ಕೆಳಗಿರುವ ಗದ್ದೆಯಲ್ಲಿ ನಡೆಯುತ್ತಿದ್ದ ಜಿಂಕೆಯನ್ನು ಬೇಟೆಯಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಹದ್ದು ಆ ಜಿಂಕೆಯ  ಕೊಂಬನ್ನು ಹಿಡಿದು ನೆಲದ ಮೇಲೆ ಬಡಿಯುತ್ತದೆ. ಜಿಂಕೆ ಕೂಡ ಹದ್ದಿನೊಂದಿಗೆ ಕಾದಾಡಲು ಮುಂದಾಗುತ್ತದೆ. ಆದರೆ ಹದ್ದು ತನ್ನ ಚೂಪಾದ ಉಗುರುಗಳು ಮತ್ತು ಶಕ್ತಿಯುತ ರೆಕ್ಕೆಗಳ ಶಕ್ತಿಯನ್ನು ಜಿಂಕೆಯ ಮೇಲೆ ಪ್ರದರ್ಶಿಸುತ್ತದೆ.

 

 

ವಿಡಿಯೋದಲ್ಲಿ ಹದ್ದು ಜಿಂಕೆಯನ್ನು (Deer) ಹಲವು ಬಾರಿ ಎತ್ತಿ ಬಡಿಯುತ್ತಿರುವುದನ್ನು ಕಾಣಬಹುದು. ಆ ಬಳಿಕ ಏನಾಗುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಿಲ್ಲ. ಆದರೆ ವಿಡಿಯೋದಲ್ಲಿ ಹದ್ದಿನ ದಾಳಿಯನ್ನು ನೋಡಿದರೆ ಜಿಂಕೆ ಅದರ ಹಿಡಿತದಿಂದ ಪಾರಾದಂತೆ ಕಾಣುತ್ತಿಲ್ಲ. 

ಇದನ್ನೂ ಓದಿ:PM Narendra Modi : ಸಿಎಂ ಚನ್ನಿ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಪ್ರಧಾನಿ ಮೋದಿ!

ಈ ವಿಡಿಯೋವನ್ನು animals.energy ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 10 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷ 35 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಜನ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News