ವಿದಿಶಾ: ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಸಂಕ್ಲಾ ಗ್ರಾಮದಲ್ಲಿ 28 ವರ್ಷದ ಯುವತಿಯೊಬ್ಬಳು ಕೈ ಕಾಲುಗಳಿಲ್ಲದ ಬಾಲಕಿಗೆ ಜನ್ಮ ನೀಡಿದ್ದಾಳೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಬಾಲಕಿಯ ತನಗೆ ಸೋನು ವಂಶಕರ್ 'ನನ್ನ ಹೆಂಡತಿ ಪ್ರೀತಿ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ  ಕೇವಲ ತಲೆ ಮತ್ತು ಶರೀರ ಮಾತ್ರ ಇದೆ. ಬಾಲಕಿಗೆ ತೋಳು ಮತ್ತು ಕಾಲುಗಳಿಲ್ಲ. ಆದರೆ ಬಾಲಕಿ ಸಂಪೂರ್ಣ ಆರೋಗ್ಯವಂತವಾಗಿದ್ದಾಳೆ" ಎಂದು ಹೇಳಿದ್ದಾರೆ.


ಇದು ನಮ್ಮ ಮೂರನೇ ಮಗು ಎಂದು ಹೇಳಿರುವ ಅವರು, ಇದಕ್ಕೂ ಮೊದಲು ನಮಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.


ಇನ್ನೊಂದೆಡೆ ಈ ಬಗ್ಗೆ ಮಾಹಿತಿ ನೀಡಿರುವ ಸಿರೊಂಜ್ ಬ್ಲಾಕ್‌ನ ವೈದ್ಯಕೀಯ ಅಧಿಕಾರಿ ಡಾ.ಪ್ರಮೋದ್ ದಿವಾನ್, "ಇದು ಜನ್ಮಜಾತ ವಿರೂಪತೆಯ ಪ್ರಕರಣವಾಗಿದೆ. ಲಕ್ಷಾಂತರ ಪ್ರಕರಣಗಳಲ್ಲಿ ಈ ರೀತಿಯ ಪರಿಸ್ಥಿತಿ ಹುಟ್ಟಿಕೊಳ್ಳುತ್ತದೆ" ಎಂದಿದ್ದಾರೆ.


"ಈ ಹುಡುಗಿ ಮನೆಯಲ್ಲಿ ಹುಟ್ಟಿದ್ದು, ನಾನು ಅಲ್ಲಿ ಓರ್ವ ಎಎನ್‌ಎಂ ಹಾಗೂ ಓರ್ವ ಆಶಾ ಕಾರ್ಯಕರ್ತೆಯನ್ನು ಕಳುಹಿಸಿದ್ದೆ" ಎಂದು ದಿವಾನ್ ಹೇಳಿದ್ದಾರೆ.


ಮಗುವಿನ ಪೋಷಕರು ಆಕೆಯನ್ನು ಆಸ್ಪತ್ರೆಗೆ ಪರೀಕ್ಷೆಗೆ ಕರೆತರಲು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ.


ಮಗು ಆರೋಗ್ಯವಾಗಿದೆ ಎಂದು ಆಕೆಯ ಪೋಷಕರು ಹೇಳುತ್ತಿರುವ ಕಾರಣ ನಾವು ಆಕೆಯನ್ನು ಆಸ್ಪತ್ರೆಗೆ ಕರೆ ತರುತ್ತಿಲ್ಲ ಎಂದು ದಿವಾನ್ ಹೇಳಿದ್ದಾರೆ.