ನವದೆಹಲಿ: ಪೂರ್ವ ದೆಹಲಿಯ ಮಾಂಡವಾಲಿ ಪ್ರದೇಶದಲ್ಲಿ ಮೂವರು ಸಹೋದರಿಯರು ಹಸಿವಿನಿಂದ  ಮೃತಪಟ್ಟಿದ್ದಾರೆ ಎಂದು ಪೋಸ್ಟ್ಮೊರ್ಟಮ್ ವರದಿಯಿಂದ ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಈ ಕುರಿತಾಗಿ ANI ಗೆ ಮಾತನಾಡುತ್ತಾ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ಅಮಿತಾ ಸಕ್ಸೇನಾ" ದೇಹದಲ್ಲಿ ಕೊಬ್ಬಿನ ಅಂಶದ ಯಾವುದೇ ಕುರುಹು ಇಲ್ಲ, ಪೋಸ್ಟ್ಮೊರ್ಟಮ್ ಸಂದರ್ಭದಲ್ಲಿ ಹೊಟ್ಟೆ ಸಂಪೂರ್ಣವಾಗಿ ಖಾಲಿ ಇತ್ತು" ಎಂದು ತಿಳಿಸಿದ್ದಾರೆ.


ಆರಂಭಿಕ ಮರಣೋತ್ತರ ಪರೀಕ್ಷೆಯ ವರದಿಯಂತೆ ಎರಡು, ನಾಲ್ಕು ಮತ್ತು ಎಂಟು ವಯಸ್ಸಿನ ಬಾಲಕಿಯರು  ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಧೃಡಪಟ್ಟಿದೆ. ಪೊಲೀಸರು ಆರಂಭದಲ್ಲಿ ಇದನ್ನು ನೈಸರ್ಗಿಕ ಸಾವುಗಳೆಂದು ಪರಿಗಣಿಸಿದ್ದರು, ಆದರೆ ಮಾತ್ರೆಗಳು ಮತ್ತು ಔಷಧ ಬಾಟಲಿಗಳ ದೊರಕಿದ ನಂತರದ ಸಾವನ್ನು ವಿಷವನ್ನು ಸೇವಿಸಿದ್ದರ ಕುರಿತ ಹಿನ್ನಲೆಯನ್ನು ಕೂಡ ಪರಿಕ್ಷಿಸಲಾಯಿತು.


ಬಾಲಕಿಯರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಪಂಕಜ್ ಸಿಂಗ್ ಉಪ ಪೊಲೀಸ್ ಆಯುಕ್ತ (ಪೂರ್ವ) ಹೇಳುವಂತೆ "ಜಿಟಿಬಿ ಆಸ್ಪತ್ರೆಯಲ್ಲಿ ವೈದ್ಯರ ಮಂಡಳಿ ಮರು ಪರೀಕ್ಷೆ ನಡೆಸಿದ್ದು, ಪ್ರಾಥಮಿಕ ಶವಪರೀಕ್ಷೆಯ ವರದಿಯ ಪ್ರಕಾರ ಬಾಲಕಿಯರು ಹಸಿವಿನ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ .


ಈ ಘಟನೆಗೆ ಪ್ರತಿಕ್ರಿಯಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಶಿಸೊಡಿಯಾ "ದೆಹಲಿ ಸರಕಾರವು ಇದನ್ನು ನ್ಯಾಯಾಂಗ  ತನಿಖೆಗೆ ಆದೇಶಿಸಿದೆ" ಎಂದು ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.