ನವದೆಹಲಿ: ಭಾರತೀಯ ನೌಕಾಪಡೆಯ (Indian Navy) ಯುದ್ಧನೌಕೆ ಐಎನ್‌ಎಸ್ ರಣವೀರ್‌ನಲ್ಲಿ (INS Ranvir) ಸಂಭವಿಸಿದ ಸ್ಫೋಟದಿಂದ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

"ಇಂದು ಮುಂಬೈನ ನೌಕಾನೆಲೆಯಲ್ಲಿ (Naval Dockyard Mumbai) ನಡೆದ ದುರದೃಷ್ಟಕರ ಘಟನೆಯಲ್ಲಿ, ಐಎನ್‌ಎಸ್ ರಣವೀರ್‌ನ ಆಂತರಿಕ ವಿಭಾಗದಲ್ಲಿ ಸ್ಫೋಟದಿಂದ ಉಂಟಾದ ಗಾಯಗಳಿಂದ ಮೂವರು ನೌಕಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ" ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.  


"ಯುದ್ಧನೌಕೆಯ ಕಂಪಾರ್ಟ್​ಮೆಂಟ್​ ಒಂದರಲ್ಲಿ ಸ್ಫೋಟ (Explosion in INS Ranvir) ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ" ಎಂದು ಕೇಂದ್ರ ಪ್ರಕಟಣೆ ವಿವರಿಸಿದೆ.


ಇದನ್ನೂ ಓದಿ: Republic Day ಮೊದಲು ಭಯೋತ್ಪಾದಕ ದಾಳಿ ಎಚ್ಚರಿಗೆ, ದೆಹಲಿ-ಎನ್‌ಸಿಆರ್‌ನಲ್ಲಿ ಹೈ ಅಲರ್ಟ್


"ನೌಕೆಯಲ್ಲಿದ್ದ ಇತರ ಸಿಬ್ಬಂದಿ ತ್ವರಿತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಸ್ಫೋಟವು ಸಂಜೆ 4:30 ರ ಸುಮಾರಿಗೆ ಸಂಭವಿಸಿದೆ. ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ. " ಎಂದು ಪ್ರಕಟಣೆ ತಿಳಿಸಿದೆ.


ಐಎನ್‌ಎಸ್ ರಣವೀರ್‌ನಲ್ಲಿ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಮತ್ತು ಶೀಘ್ರದಲ್ಲೇ ಬೇಸ್ ಪೋರ್ಟ್‌ಗೆ ಮರಳಬೇಕಿತ್ತು.


ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾದ ಐದು ರಜಪೂತ ವರ್ಗದ ವಿಧ್ವಂಸಕ ನೌಕೆಗಳಲ್ಲಿ INS ರಣವೀರ್ ನಾಲ್ಕನೆಯದು. ಭಾರತೀಯ ನೌಕಾಪಡೆಯ ಬಲಿಷ್ಠ ನೌಕೆಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಐಎನ್‌ಎಸ್‌ ರಣವೀರ್, 28 ಅಕ್ಟೋಬರ್ 1986 ರಂದು ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿತ್ತು. 


ಇದು ಜಲಾಂತರ್ಗಾಮಿ ನೌಕೆಗಳ ವಿರುದ್ಧ ಮತ್ತು ಸಬ್‌ಮೆರಿನ್‌ಗಳನ್ನು, ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಯುದ್ಧನೌಕೆ. ಶತ್ರುಗಳನ್ನು ಮಟ್ಟಹಾಕಲು ಭಾರತೀಯ ನೌಕೌಪಡೆಗೆ ಇರುವ ಪ್ರಮುಖ ಅಸ್ತ್ರ INS ರಣವೀರ್. 


ನೌಕಾಸೇನೆಯ ಸೇನೆಯ ಹಾಲಿ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ (R Hari Kumar), ತಮ್ಮ ವೃತ್ತಿಜೀವನದ ಆರಂಭದಲ್ಲಿ ಈ ನೌಕೆಯ ಕಮಾಂಡರ್ ಆಗಿದ್ದರು.


ಇದನ್ನೂ ಓದಿ: ಬಿಗ್ ರಿಲೀಫ್! ಈ ವಾರವೇ ಅಂತ್ಯಗೊಳ್ಳುತ್ತಾ ನೈಟ್ ಮತ್ತು ವೀಕೆಂಡ್ ಕರ್ಫ್ಯೂ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.