ನೌಕಾಸೇನೆಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಡ್ಮಿರಲ್ ಆರ್ ಹರಿಕುಮಾರ್

ಅಡ್ಮಿರಲ್ ಆರ್ ಹರಿ ಕುಮಾರ್ , ಏಪ್ರಿಲ್ 12, 1962 ರಂದು ಜನಿಸಿದರು. ಜನವರಿ 1, 1983 ರಂದು, ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು.

Written by - Ranjitha R K | Last Updated : Nov 30, 2021, 10:01 AM IST
  • ಅಡ್ಮಿರಲ್ ಆರ್ ಹರಿ ಕುಮಾರ್ 39 ವರ್ಷಗಳಿಂದ ನೌಕಾಪಡೆಯಲ್ಲಿ ಸೇವೆ
  • ಪರಮ ವಿಶಿಷ್ಟ ಸೇನಾ ಪದಕ ಪಡೆದಿರುವ ಅಡ್ಮಿರಲ್ ಆರ್ ಹರಿ ಕುಮಾರ್
  • ಅಡ್ಮಿರಲ್ ಆರ್ ಹರಿ ಕುಮಾರ್, ವೆಸ್ಟರ್ನ್ ಫ್ಲೀಟ್‌ನ ಮಾಜಿ ಕಾರ್ಯಾಚರಣೆ ಅಧಿಕಾರಿ
 ನೌಕಾಸೇನೆಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಡ್ಮಿರಲ್ ಆರ್ ಹರಿಕುಮಾರ್

ನವದೆಹಲಿ: ಪಶ್ಚಿಮ ನೌಕಾ ಸೇನೆಯ ಮುಖ್ಯಸ್ಥರಾಗಿದ್ದ (Chief Of The Navy) ಅಡ್ಮಿರಲ್ ಆರ್.ಹರಿ ಕುಮಾರ್ ಇಂದು (ಮಂಗಳವಾರ) ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕಾರದ ವೇಳೆ ಅವರಿಗೆ ಗೌರವ ರಕ್ಷೆ ನೀಡಲಾಯಿತು. ನವೆಂಬರ್ 9 ರಂದು ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಅಡ್ಮಿರಲ್ ಕರಂಬಿರ್ ಸಿಂಗ್ (Admiral Karambir Singh) ಇಂದು (ನವೆಂಬರ್ 30) ತಮ್ಮ ಸ್ಥಾನದಿಂದ ನಿವೃತ್ತಿ  ಹೊಂದಲಿದ್ದಾರೆ. 

ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್ ಆರ್ ಹರಿ ಕುಮಾರ್ ನೇಮಕ :
ಅಡ್ಮಿರಲ್ ಆರ್ ಹರಿ ಕುಮಾರ್ (R Hari Kumar), ಏಪ್ರಿಲ್ 12, 1962 ರಂದು ಜನಿಸಿದರು. ಜನವರಿ 1, 1983 ರಂದು, ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು. ಸುಮಾರು 39 ವರ್ಷಗಳ ಸುದೀರ್ಘ ಅವಧಿಯಲ್ಲಿ ಅವರು ನೌಕಾ ಸೇನೆಯ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಡ್ಮಿರಲ್ ಆರ್ ಹರಿ ಕುಮಾರ್ ಇಂದು ನೌಕಾಪಡೆಯ ಮುಖ್ಯಸ್ಥರಾಗಿ (Chief Of The Navy)  ಅಧಿಕಾರ ಸ್ವೀಕರಿಸಿದ್ದಾರೆ. 

ಇದನ್ನೂ ಓದಿ : UPSC Success Story: ಉದ್ಯೋಗದೊಂದಿಗೆ UPSC ಪರೀಕ್ಷೆಗೆ ತಯಾರಿ, ಕೋಚಿಂಗ್ ಇಲ್ಲದೆ IAS ಅಧಿಕಾರಿ..!

ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಅಡ್ಮಿರಲ್ ಆರ್ ಹರಿ ಕುಮಾರ್ :
ಅಡ್ಮಿರಲ್ ಹರಿ ಕುಮಾರ್ ಅವರು INS ನಿಶಾಂಕ್, ಕ್ಷಿಪಣಿ ಕಾರ್ವೆಟ್ INS ಕೋರಾ ಮತ್ತು ಗೈಡೆಡ್ ಮಿಸೈಲ್ ವಿಧ್ವಂಸಕ INS ರಣವೀರ್ ನೇತೃತ್ವ ವಹಿಸಿದ್ದರು. ಭಾರತೀಯ ನೌಕಾಪಡೆಯ (Indian Navy) ವಿಮಾನವಾಹಕ ನೌಕೆ INS ವಿರಾಟ್‌ಗೆ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.  ವೈಸ್ ಅಡ್ಮಿರಲ್ ಹರಿ ಕುಮಾರ್ ಅವರು ಪಶ್ಚಿಮ ನೌಕಾಪಡೆಯ ಕಾರ್ಯಾಚರಣೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 

 ಹಲವು ಪದಕಗಳನ್ನು ಪಡೆದಿರುವ ಅಡ್ಮಿರಲ್ ಆರ್ ಹರಿ ಕುಮಾರ್ : 
ಅಡ್ಮಿರಲ್ ಹರಿ ಕುಮಾರ್ ಅವರು ನೇವಲ್ ವಾರ್ ಕಾಲೇಜ್, ಯುಎಸ್, ಆರ್ಮಿ ವಾರ್ ಕಾಲೇಜ್, ಮೊವ್ ಮತ್ತು ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್, ತರಬೇತಿಗಳನ್ನು ಹೊಂದಿದ್ದಾರೆ. ಅವರು ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ವಿಶಿಷ್ಟ ಸೇವಾ ಪದಕ (VSM) ಗಳನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ : Shashi Tharoor : ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ : ಟ್ವಿಟ್ಟರ್ ನಲ್ಲಿ ಫೋಟೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

More Stories

Trending News