ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ 350 ರೂಪಾಯಿ ನೋಟು...
ನೋಟ್-ಬ್ಯಾನ್ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನು ಜಾರಿಗೆ ತಂದಿದೆ. ತರುವಾಯ, ನಗದು ಕೊರತೆಯನ್ನು ತೆಗೆದುಹಾಕಲು ಆರ್ಬಿಐ 200 ರೂಪಾಯಿ ಮತ್ತು 50 ರೂಪಾಯಿಗಳ ಹೊಸ ನೋಟನ್ನು ಸಹ ಜಾರಿಗೆ ತಂದಿದೆ.
ನವ ದೆಹಲಿ: ನೋಟ್-ಬ್ಯಾನ್ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನು ಜಾರಿಗೆ ತಂದಿದೆ. ತರುವಾಯ, ನಗದು ಕೊರತೆಯನ್ನು ಕಡಿಮೆ ಮಾಡಲು ಆರ್ಬಿಐ ಹೊಸ ರೂಪದ 200 ರೂಪಾಯಿ ಮತ್ತು 50 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಸಹ ಜಾರಿಗೆ ತಂದಿದೆ. ಈ ಹಿಂದೆ ಸುದ್ದಿಗಳು ಡಿಸೆಂಬರ್ನಲ್ಲಿ 1000 ರೂ. ಮುಖಬೆಲೆಯ ಹೊಸ ನೋಟು ಬರಲಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಏತನ್ಮಧ್ಯೆ, 350 ರೂಪಾಯಿ ಮುಖಬೆಲೆಯ ನೋಟು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಹುಶಃ 350 ರೂಪಾಯಿಗಳ ವೀಡಿಯೋ ಮತ್ತು ಈ ಹೊಸ ನೋಟಿನ ಚಿತ್ರವು ನಿಮಗೆ WhatsApp ನಲ್ಲಿಯೂ ಸಹ ಬಂದಿರಬಹುದು. ಇಂತಹ ಒಂದು ನೂತನ ನೋಟನ್ನು, ಸರ್ಕಾರ ಜಾರಿಗೆ ತಂದಿದೆಯೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿರಬಹುದು.
ಕಳೆದ ಕೆಲವು ದಿನಗಳಲ್ಲಿ, ಫೇಸ್ಬುಕ್ ಮತ್ತು WhatsApp ನಲ್ಲಿ 350 ರೂಪಾಯಿ ನೋಟುಗಳ ಚಿತ್ರವು ವೈರಲ್ ಪಡೆಯುತ್ತಿದೆ. RBI ಶೀಘ್ರದಲ್ಲೇ 350 ಹೊಸ ನೋಟನ್ನು ನೀಡಲಿದೆ ಎಂದು ಸಂದೇಶಗಳು ಬರುತ್ತಿವೆ. ಚಿತ್ರದಲ್ಲಿ ಗಮನಿಸಿ ಆ ನೋಟು ಕೆಂಪು ಬಣ್ಣದಲ್ಲಿದೆ. ಇದರ ಬಗ್ಗೆ ಪರಿಶೀಲಿಸಿದ ನಂತರ, ಈ ಚಿತ್ರವು ನಕಲಿ ರೀತಿಯಲ್ಲಿ ಮಾಡಲ್ಪಟ್ಟಿದೆ ಎಂಬುದು ಬಹಿರಂಗವಾಗಿದೆ. ಆದರೆ ಇದನ್ನು ಮಾಡಿದವರು ಯಾರೆಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದಿಲ್ಲ.
ಜನರು ಸತ್ಯವನ್ನು ತಿಳಿಯದೆ ಈ ಸಂದೇಶವನ್ನು ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಕಳುಹಿಸುತ್ತಿದ್ದಾರೆ. ನೀವು ಅಂತಹ ಸಂದೇಶವನ್ನು ಹೊಂದಿದ್ದರೆ ಈ ತಪ್ಪು ಸಂದೇಶಗಳಿಗೆ ಗಮನ ಕೊಡಬೇಡಿ. ಕೆಲವು ಸಂದೇಶಗಳಲ್ಲಿ, ಹೊಸ ರೂಪದ 20 ರೂಪಾಯಿ ನೋಟುಗಳನ್ನು ಸಹ ನೀಡಲಾಗಿದೆ. 20 ರೂಪಾಯಿ ನೋಟುಗಳು 50 ರೂಪಾಯಿ ನೋಟುಗಳಂತೆ ಇದೆ. ಇದಲ್ಲದೆ, ಆರ್ಬಿಐ ಈಗಾಗಲೇ 50 ಮತ್ತು 500 ರೂಪಾಯಿಗಳ ಹೊಸ ಮತ್ತು ಆಧುನಿಕ ನೋಟುಗಳನ್ನು ಜಾರಿಗೆ ತಂದಿದೆ.
ಆರ್ಬಿಐ ರೂ. 350 ನೋಟಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ನೋಟ್ನ ಚಿತ್ರದ ಕುರಿತು ಸಹ ಆರ್ಬಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.