ತಿರುವನಂತಪುರಂ: ಕೇರಳದಲ್ಲಿ ಭಾನುವಾರದಿಂದ ವರುಣನ ಅಬ್ಬರ ಕೊಂಚ ಇಳಿಮುಖವಾದ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದಕ್ಕೂ ಮೊದಲು ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅಲ್ಲದೆ, ಈ ಪ್ರವಾಹವು ನೂರಾರು ಜನರ ಸಾವಿಗೆ ಕಾರಣವಾಗಿದೆ. ರಾಜ್ಯದ ಪ್ರವಾಹದಿಂದ 7,24,649 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕಾಗಿದೆ. ಪ್ರವಾಹ ಸಂತ್ರಸ್ತರಿಗಾಗಿ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಪ್ರವಾಹದಲ್ಲಿ 370 ಜನರು ಮೃತಪಟ್ಟಿದ್ದರೆ.



COMMERCIAL BREAK
SCROLL TO CONTINUE READING

"ನಮ್ಮ ಮೊದಲ ಆದ್ಯತೆ ಜನರ ಜೀವ ರಕ್ಷಣೆ, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ" ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮಾಧ್ಯಮದೊಂದಿಗೆ ಹೇಳಿದ್ದಾರೆ. 1924 ರ ನಂತರ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ತಲೆದೂರಿರಲಿಲ್ಲ. ಇದು ಬಹುಶಃ ಇದುವರೆಗೂ ದೊಡ್ಡ ದುರಂತವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.



ಅಳಪ್ಪುಜ್ಹ, ಎರ್ನಾಕುಲಂ ಮತ್ತು ತ್ರಿಶೂರ್ ಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ಈ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಅನ್ನು ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಜನರು ಆಹಾರ, ನೀರು ಇಲ್ಲದೆ ಹೆಚ್ಚು ತೊಂದರೆಗೀಡಾದ ಸ್ಥಳಗಳಲ್ಲಿ ಚೆನ್ನಾಗೂರು, ಪಾಂಟಲಂ, ತಿರುವಲ್ಲ ಮತ್ತು ಪಥನಂತಿಟ್ಟ ಜಿಲ್ಲೆಗಳ ಹಲವು ಪ್ರದೇಶಗಳು ಹಾಗೂ ಎರ್ನಾಕುಲಂನಲ್ಲಿರುವ ಅಲುನಾ, ಅಂಗಾಮಲಿ ಮತ್ತು ಪ್ಯಾರವರಗಳಲ್ಲಿ ಸೇರಿವೆ.