3T+V Formula: ಲಾಕ್ ಡೌನ್ ಸಡಿಲಿಕೆ ದುಬಾರಿ ಬೀಳದಿರಲಿ, ರಕ್ಷಣೆಗಾಗಿ ಕೇಂದ್ರದಿಂದ ರಾಜ್ಯಗಳಿಗೆ 3T+V ಫಾರ್ಮುಲಾ
What Is 3T+V Formula? - ದೇಶಾದ್ಯಂತ ದಿನನಿತ್ಯ ಕೊರೊನಾ ವೈರಸ್ ಪ್ರಕರಣಗಳ ವೇಗ ಕ್ಷೀಣಿಸತೊಡಗಿದೆ. ಏತನ್ಮಧ್ಯೆ ದೇಶಾದ್ಯಂತ ಕೊರೊನಾ ವೈರಸ್ ನ ಮೂರನೇ ಅಲೆ (Coronavirus Third Wave In India) ತಡೆಯಲು ಸಾಧ್ಯವಿಲ್ಲ ಎಂದು AIIMS ಮುಖ್ಯಸ್ಥರು (AIIMS Director Dr. Randeep Guleria) ಸೇರಿದಂತೆ ಇತರ ತಜ್ಞರು ಕೂಡ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ: What Is 3T+V Formula? - ದೇಶಾದ್ಯಂತ ದಿನನಿತ್ಯ ಕೊರೊನಾ ವೈರಸ್ ಪ್ರಕರಣಗಳ ವೇಗ ಕ್ಷೀಣಿಸತೊಡಗಿದೆ. ಏತನ್ಮಧ್ಯೆ ದೇಶಾದ್ಯಂತ ಕೊರೊನಾ ವೈರಸ್ ನ ಮೂರನೇ ಅಲೆ (Coronavirus Third Wave In India) ತಡೆಯಲು ಸಾಧ್ಯವಿಲ್ಲ ಎಂದು AIIMS ಮುಖ್ಯಸ್ಥರು (AIIMS Director Dr. Randeep Guleria) ಸೇರಿದಂತೆ ಇತರ ತಜ್ಞರು ಕೂಡ ಎಚ್ಚರಿಕೆ ನೀಡಿದ್ದಾರೆ. ಕಡಿಮೆಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆ ರಾಜ್ಯ ಸರ್ಕಾರಗಳು ಕೂಡ ನಿರ್ಬಂಧನೆಗಳನ್ನು ಸಡಿಲಿಸಲು ಆರಂಭಿಸಿವೆ. ಆದರೆ, ರಾಜ್ಯ ಸರ್ಕಾರಗಳು ನೀಡುತ್ತಿರುವ ಈ ಸಡಿಲಿಕೆ ದುಬಾರಿಯಾಗದಿರಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಸಚಿವರಾಗಿರುವ ಅಜಯ್ ಭಲ್ಲಾ (Ajay bhalla), ಎಲ್ಲಾ ರಾಜ್ಯಗಳ ಸರ್ಕಾರಿ ಸಚಿವರುಗಳಿಗೆ ಪತ್ರವೊಂದನ್ನು ರವಾನಿಸಿ '3T+V' ಸೂತ್ರವನ್ನು (3T+V Formula) ಅನುಸರಿಸಲು ಸಲಹೆಗಳನ್ನು ನೀಡಿದ್ದಾರೆ.
ಎಲ್ಲಾ ರಾಜ್ಯಗಳು ನಿರ್ಬಂಧನೆಗಳಲ್ಲಿ ಸಡಿಲಿಕೆ ನೀಡುವ ಮೊದಲು ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ವ್ಯಾಕ್ಸಿನೇಷನ್ (Test-Track-Treet Plus Vaccination) ಅಂದರೆ 3 ಟಿ ಪ್ಲಸ್ ವಿ ಸೂತ್ರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕರೋನಾ ಪ್ರೋಟೋಕಾಲ್ಗಳನ್ನು ಅನುಸರಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ, ಉದಾಹರಣೆಗೆ ಮಾಸ್ಕ್ ಧರಿಸುವುದು, ಕಾಲಕಾಲಕ್ಕೆ ಕೈಗಳನ್ನು ಸ್ವಚ್ಛಗೊಳಿಸುವುದು, ಸಾಮಾಜಿಕ ಅಂತರ ಕಾಯುವಿಕೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ ವೆಂಟಿಲೆಟರ್ ವ್ಯವಸ್ಥೆ ಮಾಡುವುದು ಇತ್ಯಾದಿಗಳು ಶಾಮೀಲಾಗಿವೆ. ಅನೇಕ ಸ್ಥಳಗಳಲ್ಲಿ, ನಿರ್ಬಂಧಗಳನ್ನು ಸಡಿಲಿಸಿದ ತಕ್ಷಣ, ತರಕಾರಿ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ನೋಡಲಾಗುತ್ತಿದ್ದು, ಜನರು ಕೊರೊನಾ ವಿರುದ್ಧ ತಕ್ಕ ನಡುವಳಿಕೆಯನ್ನು ಅನುಸರಿಸುತ್ತಿಲ್ಲ.
ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಕೂಡ ತನಿಖಾ ಪ್ರಮಾಣ (Corona Testing Rate) ಕಡಿಮೆಯಾಗಬಾರದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ. ಪ್ರತಿ ಕ್ಷಣವೂ ಪರಿಸ್ಥಿತಿ ಬದಲಾಗುತ್ತಿರುವುದರಿಂದ, ಸಕ್ರಿಯ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳ ಅಥವಾ ಸಕಾರಾತ್ಮಕತೆಯ ಹೆಚ್ಚಳದಂತಹ ಆರಂಭಿಕ ಸಂಕೇತಗಳಿಂದ ಎಚ್ಚರಿಕೆವಹಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಣ್ಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Union Health And Family Welfare Ministry) ಹೊರಡಿಸಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಂಡು ಅವುಗಳನ್ನು ಸ್ಥಳೀಯ ಮಟ್ಟಕ್ಕೆ ಸೀಮಿತಗೊಳಿಸಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ-Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!
ಇದಲ್ಲದೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧ ಲಸಿಕಾಕರಣ (Corona Vaccination) ಏಕಮಾತ್ರ ಎಲ್ಲಕ್ಕಿಂತ ದೊಡ್ಡ ಅಸ್ತ್ರವಾಗಿದೆ. ಇದು ಸೋಂಕಿನ ಚೈನ್ ಅನ್ನು ಬ್ರೇಕ್ ಮಾಡುವಲ್ಲಿ ಸಹಕಾರಿ ಸಾಬೀತಾಗಲಿದೆ. ಹೀಗಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ (State And UT Governments) ಪ್ರದೇಶಗಳು ಲಸಿಕಾಕರಣವನ್ನು ಹೆಚ್ಚಿಸಬೇಕು ಮತ್ತು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಇದನ್ನೂ ಓದಿ-Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!
ಕೊನೆಯದಾಗಿ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ, ನಿರ್ಬಂಧನೆಗಳಲ್ಲಿ ಸಡಿಲಿಕೆ ಅಗತ್ಯವಾಗಿದೆ. ಆದರೆ, ಈ ಸಡಿಲಿಕೆ ಷರತ್ತುಗಳ ಆಧಾರದ ಮೇಲೆ ಇರಲಿ ಜೊತೆಗೆ ಪರಿಸ್ಥಿತಿಯ ಮೇಲೆ ಗಮನ ಕೇಂದ್ರೀಕರಿಸಿ ಕೊರೊನಾ ನಿಯಮಗಳ ನಿರ್ಲಕ್ಷವಾಗದಂತೆ ತಡೆಯಿರಿ ಎಂದು ಹೇಳಿದೆ.
ಇದನ್ನೂ ಓದಿ-Alert! ಸೌಂದರ್ಯವರ್ಧಕಗಳಲ್ಲಿನ ಈ ರಾಸಾಯನಿಕ Cancerಗೂ ಕಾರಣ ಎಚ್ಚರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.