ನವದೆಹಲಿ: ರಾಷ್ಟ್ರ ರಾಜ್ಯಧಾನಿಯ ಗಡಿಭಾಗದಲ್ಲಿ ರೈತರ ಹೋರಾಟ ಮುಂದುವರೆದಿದೆ. ಈ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್ ನ 5 ಮಂದಿ ಅನ್ನದಾತರು  ದುರ್ಮರಣ ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ನಾಲ್ವರು ರೈತರು ಎರಡು ಪ್ರತ್ಯೇಕ ಅಪಘಾತದಲ್ಲಿ ಸಾವನ್ನಪ್ಪಿದ್ದು, ದೆಹಲಿ(Delhi)ಯಲ್ಲಿ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೆಹಲಿಯ ಗಡಿ ಭಾಗಗಳಲ್ಲಿ ರೈತರ ಹೋರಾಟ 15 ದಿನಗಳಿಂದ ಮುಂದುವರೆದಿದ್ದು, ಈ ಹೋರಾಟದಲ್ಲಿ ಭಾಗಿಯಾಗಿದ್ದ ಲಾಬ್ ಸಿಂಗ್, ಗುರುಪ್ರೀತ್ ಸಿಂಗ್ ಅವರು ಕರ್ನಾಲ್ ನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುಖದೇವ್ ಸಿಂಗ್ ದೀಪ್ ಸಿಂಗ್ ಅವರು ಮೊಹಾಲಿಯ ಫತೇಘರ್ ಸಾಹೀಬ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೊಗಾದ ಮಖಾನ್ ಖಾನ್ ದೆಹಲಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆತ್ಮಕಥೆ ಸ್ಥಗಿತಗೊಳಿಸಲು ಪ್ರಕಾಶಕರಿಗೆ ಪುತ್ರನ ಮನವಿ


ಕರ್ನಾಲ್ ತರಾರಿ ಫ್ಲೈಓವರ್ ನಲ್ಲಿ ನಡೆದ ಅಪಘಾತದಲ್ಲಿ ಇನ್ನೂ ಹಲವು ರೈತರು ಗಾಯಗೊಂಡಿದ್ದಾರೆ. ನಮ್ಮ ಐದು ಮಂದಿ ರೈತರು ಮೃತಪಟ್ಟಿರುವುದನ್ನು ತಿಳಿದು ದುಃಖವಾಗಿದೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದು, ಮೃತರ ಕುಟುಂಬಗಳಿಗೆ ಪರಿಹಾರದ ಭರವಸೆ ನೀಡಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.


'ಬಿಜೆಪಿಯೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​​!' ಬಿಜೆಪಿಯೊಂದಿಗಿದ್ದ ನಾಯಕನ ಹೇಳಿಕೆ!