ನವದೆಹಲಿ: ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವೊಂದು ಕುಸಿದ ಘಟನೆ  ನವದೆಹಲಿಯ ಕರೋಲ್ ಬಾಗ್ ನ ಪದ್ಮಸಿಂಗ್ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. 


COMMERCIAL BREAK
SCROLL TO CONTINUE READING

ವಿಷಯ ತಿಳಿದು ಕೂಡಲೇ ಸ್ಥಳಕಾಗಮಿಸಿದ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. 



ಇದೇ ತಿಂಗಳ ಆರಂಭದಲ್ಲಿ ಕರೋಲ್ ಬಾಗ್ ನ ಹೋಟೆಲೊಂದರಲ್ಲಿ ಸಂಭವಿಸದ್ದ ಅಗ್ನಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ದರು.