ನವದೆಹಲಿ: ರಿಕ್ಟರ್ ಮಾಪಕದ 5.2 ರ ತೀವ್ರತೆಯ ಭೂಕಂಪನವು ಶನಿವಾರದಂದು  ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಈ ಭೂಕಂಪವು ಅರುಣಾಚಲ ಪ್ರದೇಶದ ತೇಜು ಪಟ್ಟಣದಲ್ಲಿ ಇಂದು ಬೆಳಗ್ಗೆ 11:16ಕ್ಕೆ ವರದಿಯಾಗಿದೆ ಎಂದು ತಿಳಿದುಬಂದಿದೆ.ಇದುವರೆಗೆ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ ಎನ್ನಲಾಗಿದೆ. ಇನ್ನು ಈ ಘಟನೆ ಕುರಿತಾಗಿ  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.


ಕಳೆದ ವರ್ಷ ನವೆಂಬರ್ನಲ್ಲಿ ರಿಕ್ಟರ್ ಮಾಪಕ 6.9 ರಲ್ಲಿ ಪ್ರಬಲ ಭೂಕಂಪನವು ನಯಿಂಗ್ಚಿ ನಗರ ಮತ್ತು ಟಿಬೆಟ್ನಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿತ್ತು ಇದರ ಪ್ರಭಾವ  ಪಕ್ಕದ ಅರುಣಾಚಲ ಪ್ರದೇಶಕ್ಕೂ ವ್ಯಾಪಿಸಿತ್ತು.ಯಾವುದೇ ಸಾವು ನೋವುಗಳು ತಕ್ಷಣ ವರದಿಯಾಗಿಲ್ಲ ಆದರೆ ಭೂಕಂಪನ ಪ್ರದೇಶದ ಅನೇಕ ಹಳ್ಳಿಗಳಲ್ಲಿನ ಮತ್ತು ರಸ್ತೆ ಮತ್ತು ವಿದ್ಯುತ್ ವೈಫಲ್ಯಗಳಿಗೆ ಹಾನಿ ಉಂಟುಮಾಡಿತ್ತು.


ಭೂಕಂಪನ ಕೇಂದ್ರವು ನಿಯಿಂಗ್ಚಿಯಲ್ಲಿ 10 ಕಿ.ಮೀ. ಆಳದಲ್ಲಿ ಪತ್ತೆಯಾಗಿತ್ತು ಎಂದು ರಾಜ್ಯದ ಆಡಳಿತದ ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.