ನವದೆಹಲಿ: ನೆರೆ ರಾಷ್ಟ್ರ ಚೀನಾ ಜೊತೆಗೆ ಏರ್ಪಟ್ಟ ಬಿಕ್ಕಟ್ಟಿನ ನಡುವೆಯೇ ಭಾರತಕ್ಕಾಗಿ 5 ರಾಫೆಲ್ ವಿಮಾನಗಳು ಫ್ರಾನ್ಸ್ ನಿಂದ ತನ್ನ ಯಾತ್ರೆ ಆರಂಭಿಸಿವೆ. ಜುಲೈ 29 ರಂದು ಹರಿಯಾಣಾದ ಅಂಬಾಲಾದಲ್ಲಿರುವ ಭಾರತೀಯ ವಾಯುಸೇನೆಯ ಭಾಗವಾಗಲಿವೆ. ಫ್ರಾನ್ಸ್ ನಿಂದ ಉಡಾವಣೆಗೊಂಡಿರುವ ಈ ಯುದ್ಧ ವಿಮಾನಗಳು ಭಾರತಕ್ಕೆ ತಲುಪುವ ಮುನ್ನ UAEನಲ್ಲಿ ಇಂಧನ ತುಂಬಿಸಿಕೊಳ್ಳಲಿವೆ. ಈ ಕುರಿತು ಫ್ರಾನ್ಸ್ ನಲ್ಲಿರುವ ಭಾರತೀಯ ದೂತಾವಾಸ ಚಿತ್ರಗಳನ್ನು ಹಂಚಿಕೊಂಡಿದ್ದು, ಭಾರತೀಯ ವಾಯುಸೇನೆ ಸೇರಲು ನೂತನ ರಫೇಲ್ ಯುದ್ಧವಿಮಾನಗಳು ಉಡಾವಣೆಗೊಂಡಿವೆ ಎಂದು ಹೇಳಿದ್ದಾರೆ.



COMMERCIAL BREAK
SCROLL TO CONTINUE READING

ಫ್ರಾನ್ಸ್ ನಿಂದ ಖರೀದಿಸಲಾಗಿರುವ ಒಟ್ಟು 36 ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳ ಮೊದಲ ಬ್ಯಾಚ್ ಇದಾಗಿದೆ. ನಾಳೆ ಬುಧವಾರ ಈ ಯುದ್ಧವಿಮಾನಗಳು ಭಾರತಕ್ಕೆ ತಲುಪಲಿವೆ. ಭಾರತೀಯ ವಾಯು ಸೇನೆಯ 12 ಪೈಲಟ್ ಹಾಗೂ ಇಂಜಿನೀಯರ್ಸ್ ಗಳಿಗೆ ಇವುಗಳಿಗಾಗಿ ವಿಶೇಷ ತರಬೇತಿ ನೀಡಲಾಗಿದೆ. ಈ ಯುದ್ಧವಿಮಾನಗಳು ಫ್ರಾನ್ಸ್ ನಲ್ಲಿ ಉಡಾವಣೆಗೊಳ್ಳುವ ಮೊದಲು ಫ್ರಾನ್ಸ್ ನಲ್ಲಿರುವ ಭಾರತೀಯ ರಾಜದೂತರು ಪೈಲಟ್ ಅವರ ಭೇಟಿ ನಡೆಸಿದ್ದಾರೆ.


ಪೂರ್ವ ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ಏರ್ಪಟ್ಟಿರುವ ಬಿಕ್ಕಟ್ಟಿನ ನಡುವೆ ಮೊದಲ ಬ್ಯಾಚ್ ರಫೇಲ್ ಜೆಟ್ ಯುದ್ಧವಿಮಾನಗಳನ್ನು ತನ್ನ ನೌಕಾಪಡೆಗೆ ಸೇರಿಸಲು ಹೊರಟಿರುವ ವಾಯುಪಡೆ, ಅವುಗಳಲ್ಲಿ 60 ಕಿಮೀವರೆಗೆ ಮಾರಕ ಕ್ಷಮತೆ ಹೊಂದಿರುವ ಗಾಳಿಯಿಂದ ನೆಲದ ಮೇಲೆ ಹಾರಿಸಬಲ್ಲ ಹೊಸ ತಲೆಮಾರಿನ ಮಿಸೈಲ್ ಅನ್ನು ಅಳವಧಿಸಲು ಕೂಡ ನಿಯೋಜಿಸಿದೆ. ವಿಭಿನ್ನ ಶೈಲಿಯ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲ ಕ್ಷಮತೆಯನ್ನು ಈ ವಿಮಾನಗಳು ಹೊಂದಿವೆ.


2016 ರಲ್ಲಿ ಭಾರತ ಸರ್ಕಾರವು ಫ್ರಾನ್ಸ್‌ನಿಂದ 36 ಫೈಟರ್ ರಾಫೆಲ್ ವಿಮಾನಗಳ ಖರೀದಿಗಾಗಿ 60,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿತ್ತುರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಅಕ್ಟೋಬರ್ 8 ರಂದು ಫ್ರಾನ್ಸ್‌ನ ವಾಯುನೆಲೆಯಲ್ಲಿ ಮೊದಲ ರಾಫೆಲ್ ವಿಮಾನವನ್ನು ಪಡೆದುಕೊಂಡಿದ್ದರು. ಇದೀಗ ಭಾರತಕ್ಕೆ ಬರುವ ಐದು ವಿಮಾನಗಳು ಮೇ ತಿಂಗಳಲ್ಲಿಯೇ ಬರಬೇಕಿದ್ದವು. ಆದರೆ ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಅವಧಿಯಲ್ಲಿ ಸ್ವಲ್ಪ ವಿಳಂಬವಾಗಿದೆ.


36 ಫೈಟರ್ ಜೆಟ್‌ಗಳಲ್ಲಿ ಒಟ್ಟು 18 ವಿಮಾನಗಳನ್ನು  ಫೆಬ್ರವರಿ 2021 ರೊಳಗೆ ಹಸ್ತಾನ್ತರಿಸಲಾಗುತ್ತಿದೆ. ಉಳಿದ ವಿಮಾನಗಳನ್ನು ಏಪ್ರಿಲ್-ಮೇ 2022 ರೊಳಗೆ ತಲುಪಿಸುವ ನಿರೀಕ್ಷೆಯಿದೆ. ರಾಜನಾಥ್ ಸಿಂಗ್ ಕಳೆದ ವರ್ಷ ಫ್ರಾನ್ಸ್ನಲ್ಲಿ "ಫ್ರೆಂಚ್ ಪದ" ರಾಫೆಲ್ ಎಂದರೆ "ಚಂಡಮಾರುತ" ಎಂದು ನನಗೆ ಹೇಳಲಾಗಿದೆ. ವಿಮಾನವು ಅದರ ಹೆಸರನ್ನು ಅರ್ಥಪೂರ್ಣಗೊಳಿಸುವ ವಿಶ್ವಾಸ ತಮಗಿದೆ: ಎಂದಿದ್ದರು.