ನವದೆಹಲಿ: ಭಾರತದಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ ಐವತ್ತಕ್ಕೂ ಹೆಚ್ಚು ಸೀಟುಗಳು ಖಾಲಿ ಇವೆ. 20ರಷ್ಟು ಮಾತ್ರ ಭರ್ತಿಯಾಗಿರುವ ಒಡಿಶಾ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 40 ರಷ್ಟು ಮಾತ್ರ ಭರ್ತಿ ಮಾಡಲಿಕೊಳ್ಳಲಾಗಿದೆ. ಉಳಿದಿರುವ ಸೀಟುಗಳಿಗೆ ಯಾರು ಕೇಳುವವರೆ ಇಲ್ಲದಂತಾಗಿದೆ ಎಂದು ಹೇಳುತ್ತಿವೆ ಅಂಕಿ ಅಂಶಗಳು. 


COMMERCIAL BREAK
SCROLL TO CONTINUE READING

ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದೇ ಅವರ ಪ್ರಕಾರ, ದೇಶಾದ್ಯಂತ ಲಭ್ಯವಿರುವ 14 ಲಕ್ಷ ಎಂಜಿನಿಯರಿಂಗ್ ಸೀಟುಗಳಲ್ಲಿ ಕೇವಲ 10 ಲಕ್ಷ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ. "ಎಂಜಿನಿಯರಿಂಗ್ ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಯನ್ನು ರೂಪಿಸಲು ಕಳೆದ ವರ್ಷ ರಚಿಸಲಾದ ಒಂದು ಸಮಿತಿಯು ಲಭ್ಯವಿರುವ ಆಸನಗಳ ಸಂಖ್ಯೆಯು ಬೇಡಿಕೆಯನ್ನು ಮೀರಿದೆ 'ಎಂದು ಸಹಸ್ರಬುದೇ ಸುದ್ದಿಗಾರರಿಗೆ ತಿಳಿಸಿದ್ದಾರೆ.ಈ ವರ್ಷ ಒಡಿಶಾದ ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 27,000 ಸೀಟುಗಳನ್ನು ಕೇಳುವವರೇ ಇರಲಿಲ್ಲ. ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ 34,223 ಸ್ಥಾನಗಳಲ್ಲಿ ಕೇವಲ 20 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ.


ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶಾ ಖಾಸಗಿ ಎಂಜಿನಿಯರಿಂಗ್ ಕಾಲೇಜು ಸಂಘ (ಒಪೆಕಾ) ಕಾರ್ಯದರ್ಶಿ ಬಿನೋದ್ ಡ್ಯಾಶ್  'ಎಂಜಿನಿಯರಿಂಗ್ ಸೀಟುಗಳ ಕುಸಿತವು ಬಿಟೆಕ್ ಕೋರ್ಸ್ಗಳನ್ನು ಕಲಿಯಲು ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಕೊರತೆಯಿಂದಾಗಿ,  ಆಗಿದೆ. ಈ ಕ್ಷೇತ್ರದಲ್ಲಿ ಕಡಿಮೆ ಉದ್ಯೋಗಗಳು ಲಭ್ಯವಿವೆ.  ಕಳೆದ ಐದು ವರ್ಷಗಳಲ್ಲಿ, ಕೇವಲ ಶೇ 30ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ದೊರಕಿದೆ ಎಂದರು.


ಪಶ್ಚಿಮ ಬಂಗಾಳದಲ್ಲಿ, ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಕೇವಲ 10,525 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದರಿಂದ ಈ ವರ್ಷ ಶೇಕಡಾ 60 ಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ಮಧ್ಯಮ ಶ್ರೇಣಿಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳನ್ನು ಈ ವರ್ಷ ಕೇಳುವವರೇ ಇಲ್ಲ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 18,000 ಕ್ಕೂ ಹೆಚ್ಚು ಸೀಟುಗಳು ಖಾಲಿ ಇವೆ, ಇದು ಕಳೆದ ವರ್ಷದ 13,375 ಗಿಂತ 30 ಶೇಕಡಾ ಹೆಚ್ಚಾಗಿದೆ ಎಂದು ಡಬ್ಲ್ಯುಬಿಜೆಇಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.