ಮುಂಬೈ: ಇಲ್ಲಿನ ನಲಾ ಸೊಪಾರಾ ಪ್ರದೇಶದಲ್ಲಿ ತೆರೆದ ಗಟಾರಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಗುರುವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಕಳೆದ ಎರಡು ದಿನಗಳಿಂದ ಮುಂಬೈ ಮತ್ತು ಉಪನಗರಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಪ್ರದೇಶದಲ್ಲಿ ಹಲವಾರು ಚರಂಡಿಗಳು ತೆರೆಯಲ್ಪಟ್ಟಿರುವುದರಿಂದ ಈ ಘಟನೆ ಸಂಭವಿಸಿದೆ.


ಬುಧವಾರ ಸಂಜೆ, ನಲಾ ಸೋಪಾರಾದ ಸಂತೋಷ್ ಭವನ ಪ್ರದೇಶದಲ್ಲಿ ವಾಸವಾಗಿದ್ದ ಆರು ವರ್ಷದ ಅಬೂಬಕರ್ ಶೇಖ್ ಎಂಬ ಬಾಲಕ ತೆರೆದ ಚರಂಡಿಗೆ ಬಿದ್ದಿದ್ದಾನೆ. ನಾಪತ್ತೆಯಾದ ನಂತರ ಆತನನ್ನು ಪತ್ತೆ ಹಚ್ಚಲು ರಾತ್ರಿಯಿಂದಲೇ ಶೋಧ ಕಾರ್ಯ ಆರಂಭಿಸಲಾಯಿತಾದರೂ ಗುರುವಾರ ಬೆಳಿಗ್ಗೆ ಬಾಲಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಗರದಲ್ಲಿ ನಿರಂತರ ಮಳೆಯಿಂದಾಗಿ ಸಣ್ಣ ಮಕ್ಕಳು ಚರಂಡಿಗೆ ಬೀಳುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಹೀಗಾಗಿ ಮಹಾನಗರಪಾಲಿಕೆಯ ಕಾರ್ಯ ವೈಫಲ್ಯವೇ ಈ ಅನಾಹುತಗಳಿಗೆ ಕಾರಣ ಎಂದು ದೂರಿದ್ದಾರೆ.