ನವದೆಹಲಿ: ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಕನಿಷ್ಠ 64 ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಧೃಡಪಟ್ಟಿದೆ.ಎಲ್ಲಾ ಶಾಲಾ ವಿದ್ಯಾರ್ಥಿಗಳು ಎರಡು ಪ್ರತ್ಯೇಕ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.ಈಗ ಜಿಲ್ಲಾ ಕಲ್ಯಾಣಾಧಿಕಾರಿ ಅಶೋಕ್ ಸತ್ಪತಿ ಅವರ ಪ್ರಕಾರ, ಕೊತ್ಲಗುಡ ಪ್ರದೇಶದ ‘ಅನ್ವೇಷ’ ಹೆಸರಿನ ಹಾಸ್ಟೆಲ್‌ನ 44 ವಿದ್ಯಾರ್ಥಿಗಳಿಗೆ ಮೇ 4 ರಂದು ಕೊರೊನಾ ಇರುವುದು ಕಂಡು ಬಂದಿದೆ.ಎಲ್ಲಾ 257 ವಿದ್ಯಾರ್ಥಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿದಾಗ ವಿದ್ಯಾರ್ಥಿಗಳಲ್ಲಿ ಕೊರೊನಾ ಇದ್ದಿರುವುದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೆಂಡರ್ ಪೂರ್ವ ಪರಿಶೀಲನೆಗೆ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆಯ ಸಮಿತಿ ರಚನೆ


ಹಾಸ್ಟೆಲ್‌ನಲ್ಲಿ ಜಿಲ್ಲೆಯ 8 ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಇದ್ದಾರೆ. ಇತರ ಸಾಮೂಹಿಕ ಧನಾತ್ಮಕ ಪ್ರಕರಣಗಳು ಜಿಲ್ಲೆಯ ಬಿಸ್ಸಂಕಟಕ್ ಬ್ಲಾಕ್‌ನಿಂದ ಹೊರಹೊಮ್ಮಿವೆ, ಅಲ್ಲಿ ಹತ್ಮುನಿಗುಡ ಸರ್ಕಾರಿ ಪ್ರೌಢಶಾಲೆಯ 20 ವಿದ್ಯಾರ್ಥಿನಿಯರಿಗೆ ಕೊರೊನಾ ಧೃಡಪಟ್ಟಿದೆ.Prashanth Sambargi : 'ಮಸೀದಿಗಳ ಮೇಲಿನ ಲೌಡ್ ಸ್ಪೀಕರ್, ಹಲಾಲ್ ವಿರುದ್ಧ ನಮ್ಮ ಹೋರಾಟ ದೊಡ್ಡದಾಗಿದೆ' 


ಈಗ ಕೊರೊನಾ ಪ್ರಕರಣಗಳು ಕಂಡು ಬಂದಿರುವ ಬೆನ್ನಲ್ಲೇ ಶಾಲೆಗಳಲ್ಲಿ ಎಚ್ಚರಿಕೆವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ಇದೆ ವೇಳೆ ಈಗ ಆಡಳಿತ ಮಂಡಳಿಯು ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣಗಳ ಪರೀಕ್ಷೆ ಮತ್ತು ಟ್ರ್ಯಾಕಿಂಗ್ ಅನ್ನು ಹೆಚ್ಚಿಸಿದೆ.ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕೆಲವು ದಿನಗಳ ನಂತರ ಅವರನ್ನು ಪರೀಕ್ಷೆಯನ್ನು ಮಾಡಲಾಗುತ್ತದೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.