ಪಾಕ್ ಸೇನೆಯ ಉದ್ಧಟತನಕ್ಕೆ ದಿಟ್ಟ ಉತ್ತರ ನೀಡಿದ Indian Army, 7-8 ಸೈನಿಕರ ಹತ್ಯೆ
ಗಡಿ ನಿಯಂತ್ರಣ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ನವದೆಹಲಿ: ಭಾರತ-ಪಾಕ್ ಗಡಿನಿಯಂತ್ರಣ ರೇಖೆಯ (LoC) ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ಮತ್ತೊಮ್ಮೆ ಉದ್ಧಟತನ ಮೆರೆದಿರುವ ಪಾಕ್ ಸೇನಾ ಜವಾನರಿಗೆ ಭಾರತೀಯ ಸೇನೆಯ ಯೋಧರು ತಕ್ಕ ಪ್ರತ್ಯುತರ ನೀಡಿದೆ. ಈ ವೇಳೆ ಭಾರತೀಯ ವೀರ ಯೋಧರು ನಡೆಸಿರುವ ಪ್ರತಿ ದಾಳಿಯಲ್ಲಿ ಪಾಕ್ ಸೇನೆಯ 7 ರಿಂದ 8 ಸನಿಕರು ಹತ್ಯೆಗೀಡಾಗಿದ್ದು, ಸುಮಾರು 10-12 ಯೋಧರು ಗಾಯಗೊಂಡಿದ್ದಾರೆ.
Exclusive: ಚೀನಾದೊಂದಿಗಿನ ಗಡಿ ವಿವಾದದ ಮಧ್ಯೆ 400 ಉಗ್ರರನ್ನು ಭಾರತದೊಳಗೆ ನುಸುಳಿಸಲು ಪಾಕ್ ಯತ್ನ
ಈ ಕುರಿತು ಭಾರತೀಯ ಸೇನೆಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಯೋಧರು ಕದನವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧರು ನಡೆಸಿರುವ ಪ್ರತಿದಾಳಿಯಲ್ಲಿ 7-8 ಪಾಕ್ ಯೋಧರು ಹತರಾಗಿದ್ದಾರೆ. ಇಂಡಿಯನ್ ಆರ್ಮಿ ನಡೆಸಿರುವ ಪ್ರತಿ ದಾಳಿಯಲ್ಲಿ ಹತರಾಗಿರುವ ಪಾಕ್ ಸೇನೆಯ ಜವಾನರಲ್ಲಿ 2-3 ಪಾಕ್ ಸೇನೆಯ ವಿಶೇಷ ಸೇವಾ ಸಮೂಹದ ಕಮಾಂಡರ್ ಗಳು ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ.